Advertisement

“ಸಹಕಾರದಿಂದ ಸಮೃದ್ದ ಸಮಾಜ ನಿರ್ಮಾಣ”

04:11 PM Sep 03, 2022 | Team Udayavani |

ಬೀದರ: ಸಹಕಾರ ಸಂಘಗಳ ಮೂಲಕ ಸದಸ್ಯರ ಸಮೃದ್ಧಿಯ ಜೊತೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ರಾಜ್ಯಾಧ್ಯಕ್ಷ ಜಿ. ನಂಜನಗೌಡ ಹೇಳಿದರು.

Advertisement

ನಗರದ ಶಾರದಾ ರೂಡಸೆಟ್‌ನಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಪ್ರಾಂತೀಯ ಕಚೇರಿಯಿಂದ ಆಯೋಜಿಸಿದ್ದ ಬೀದರ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರದಿಂದಲೇ ಮಾತ್ರ ಸಮೃದ್ಧ ಸಮಾಜ ಕಟ್ಟಬಹುದು ಎಂಬುದನ್ನು ಅರಿತ ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯ ಸ್ಥಾಪನೆ ಮಾಡಿದೆ. ಈ ಮೂಲಕ ಸೌಹಾರ್ದ ಚಳವಳಿಗೆ ಬಲಬಂದಿದೆ ಎಂದರು.

ಸಂಯುಕ್ತ ಸಹಕಾರಿಯ ಉಪಾಧ್ಯಕ್ಷ ಪ್ರಸನ್ನಕುಮಾರ ಮಾತನಾಡಿ, ಕಲ್ಯಾಣ ನಾಡು ಸಹಕಾರ ಕ್ಷೇತ್ರಕ್ಕೆ ತನ್ನದೆಯಾದ ಕೊಡುಗೆ ನೀಡಿದೆ. ಗುಣಾತ್ಮಕ ಬೆಳವಣಿಗೆ ಮುನ್ನಡೆಯುವುದು ಅಗತ್ಯವಿದೆ ಎಂದರು.

ನಿರ್ದೇಶಕ ಗುರುನಾಥ ಜ್ಯಾಂತಿಕರ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕಿ ಶೈಲಜಾ ತಪಲಿ, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಪಾಟೀಲ, ಪ್ರಾಂತೀಯ ವ್ಯವಸ್ಥಾಪಕ ರಾಜಶೇಖರ ಎಚ್‌., ಒಕ್ಕೂಟ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ, ಹಿರಿಯ ಸಹಕಾರಿಗಳಾದ ಶಿವಾನಂದ ಮಂಠಾಳಕರ್‌, ಶಿವಬಸಪ್ಪ ಚನ್ನಮಲೆ, ಜಗನಾಥ ಕರಂಜೆ, ಸಂಜಯ ಕ್ಯಾಸಾ, ರಾಜಶೇಖರ ನಾಗಮೂರ್ತಿ, ಕ್ರಾಂತಿಕುಮಾರ ಕುಲಾಲ್‌, ಶ್ರೀಕಾಂತ ಸ್ವಾಮಿ ಸೋಲಪುರ, ಬಾಬುರಾವ ಕಾರಬಾರಿ, ನಾಗಶೆಟ್ಟಿ ಪಾಟೀಲ, ಅಣ್ಣಾರಾವ ನಾವದಗೆರಿ, ಬಸವರಾಜ ಹುಡೆY ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next