ಸೇಡಂ: ಸಮಾಜದಲ್ಲಿ ಗುರುತಿಸಿಕೊಂಡವರುಸಂಸ್ಕಾರಭರಿತ ಸಮಾಜ ನಿರ್ಮಿಸುವ ಜವಾಬ್ದಾರಿಹೊತ್ತು ಕೆಲಸ ಮಾಡಬೇಕು ಎಂದು ಹಿರಿಯರಂಗಕರ್ಮಿ, ರಾಜ್ಯ ಮಟ್ಟದ ರಂಗಸಂಗಮ ಪ್ರಶಸ್ತಿಪುರಸ್ಕೃತ ಶಿವಯ್ಯಸ್ವಾಮಿ ಬಿಬ್ಬಳ್ಳಿ ಹೇಳಿದರು.
ಪಟ್ಟಣದ ಬ್ರಹ್ಮಕುಮಾರ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಮದಲ್ಲಿ ರಕ್ಷಾಬಂಧನಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಸಾಧಕರಿಗೆಸನ್ಮಾನ ಸಮಾರಂಭ ಉದ್ಘಾಟಿಸಿ ಅವರುಮಾತನಾಡಿದರು.ಪ್ರಶಸ್ತಿಗಳಿಗಾಗಿ ಯಾರೂ ಬೆನ್ನು ಬೀಳದೆ,ಕಾಯಕದಲ್ಲಿ ಸಂತೃಪ್ತಿ ಹೊಂದುವ ಕೆಲಸಮಾಡಬೇಕು ಆಗ ಪ್ರಶಸ್ತಿಗಳು ತನ್ನಿಂದತಾನೆಹುಡುಕಿಕೊಂಡು ಬರುತ್ತವೆ ಎಂದರು.
ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರಮಾತನಾಡಿ, ಆಧ್ಯಾತ್ಮದ ತಳಹದಿಯಲ್ಲಿನಡೆಯುವ ಪ್ರತಿಯೊಬ್ಬರೂ ಜೀವನವೂ ಸಂತೃಪ್ತಿಯಿಂದ ಕೂಡಿರುತ್ತದೆ. ಸನ್ಮಾರ್ಗದ ಕಾರ್ಯದಲ್ಲಿತೊಡಗುವುದರಿಂದ ಮನಃಶಾಂತಿ ದೊರೆಯುತ್ತದೆಎಂದರು.ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿಮಾತನಾಡಿ, ಮೊಬೈಲ್ ಹೆಸರಲ್ಲಿ ಬ್ಯಾಟರಿ ಚಾರ್ಚ್‌ಮಾಡುವಂತೆ, ದೇಹದ ಹೆಸರಲ್ಲಿ ಆಧ್ಯಾತ್ಮದಮನಸ್ಸಿನ ಬ್ಯಾಟರಿ ಚಾರ್ಚ್ ಮಾಡಬೇಕು ಎಂದುಹೇಳಿದರು.
ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಹಿರಿಯ ಪತ್ರಕರ್ತ,ರಂಗಕರ್ಮಿ ಮಹಿಪಾಲರೆಡ್ಡಿ ಮುನ್ನೂರು,ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರಜೋಶಿ, ಹಿರಿಯ ರಂಗಕರ್ಮಿ ಶಿವಯ್ಯಸ್ವಾಮಿಬಿಬ್ಬಳ್ಳಿ, ಹಿರಿಯ ವೈದ್ಯ ಡಾ| ಸದಾನಂದ ಬೂದಿ,ಬಿಜೆಪಿ ಮುಖಂಡ, ಸಾಹಿತಿ ಬಿ.ಕೆ. ಬನ್ನಪ್ಪ,ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರನಿಡಗುಂದಾ, ವೈದ್ಯ ಡಾ| ಶ್ರೀನಿವಾಸ ಮೊಕದಮ್,ಪತ್ರಕರ್ತ ಅವಿನಾಶ ಬೋರಂಚಿ, ಕುಮಾರ ವೈಷ್ಣವಿಚನ್ನಕ್ಕಿ, ಸಂಶೋಧಕ ಮುಡಬಿ ಗುಂಡೇರಾವ್,ಕುಂಚ ಕಲಾವಿದ ಹುಸೇನಪ್ಪ ಭೋವಿ ಅವರನ್ನುಸನ್ಮಾನಿಸಲಾಯಿತು. ಬ್ರಹ್ಮಕುಮಾರಿ ಕಲಾವತಿ ಅಕ್ಕ,ಡಾ| ರಮೇಶ ಐನಾಪೂರ, ವೀರಭದ್ರಯ್ಯಸ್ವಾಮಿರುದೂ°ರ, ಸಂತೋಷ ತೊಟ್ನಳ್ಳಿ, ಶಿವಶರಣಪ್ಪಚಂದನಕೇರಿ, ಸುರೇಶ ತೇಲ್ಕೂರ, ಬಸವರಾಜಇತರರು ಇದ್ದರು.