Advertisement

ಮಾತೃಭಾಷೆಯ ಸ್ವಾಭಿಮಾನ ಬೆಳೆಸಿಕೊಳ್ಳಿ: ಪ್ರಭಾಕರ ಭಟ್‌

12:12 AM May 06, 2019 | Sriram |

ಪುತ್ತೂರು: ಮಾತೃಭಾಷೆಯು ನಮ್ಮ ಧರ್ಮ, ಸಂಸ್ಕೃತಿ, ಜೀವನ ಮೌಲ್ಯಗಳನ್ನು ಉಳಿಸುವ ಸಾಧನವಾಗಿದ್ದು, ಇತರ ಭಾಷೆಗಳನ್ನು ಕೇವಲ ಅಧ್ಯಯನ, ವ್ಯವಹಾರಕ್ಕೆ ಮಾತ್ರ ಉಪಯೋಗಿಸಿಕೊಳ್ಳಬೇಕು. ಮಾತೃ ಭಾಷೆಯ ಕುರಿತು ಕೀಳರಿಮೆ ಬಿಟ್ಟು ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಅವರು ಹೇಳಿದರು.

Advertisement

ಅವರು ರವಿವಾರ ಇಲ್ಲಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಾತೃಭಾಷೆ ಎನ್ನುವುದು ನಮ್ಮ ಸಂಪತ್ತಿಗಿಂತಲೂ ಮಿಗಿಲು ಎನ್ನುವ ರೀತಿಯಲ್ಲಿ ಅದರ ಕುರಿತು ಹೆಮ್ಮೆ ಪಡಬೇಕು. ಪ್ರಧಾನಿ ಮೋದಿಯವರು ವಿದೇಶಗಳಿಗೆ ಹೋದ ಸಂದರ್ಭ ಹಿಂದಿಯನ್ನೇ ಬಳಸಿ ಮಾತೃಭಾಷೆಯ ಕುರಿತು ಅಭಿಮಾನ ತೋರಿದ್ದಾರೆ. ಮಕ್ಕಳ ಭವಿಷ್ಯತ್ತನ್ನು ಮುಂದಿಟ್ಟು ವಿವೇಕಾನಂದ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡಲಾಗುತ್ತಿದೆ ಎಂದರು.

ಸಮ್ಮಾನ
ರಾಜ್ಯದಲ್ಲಿ ದ್ವಿತೀಯ ರ್‍ಯಾಂಕ್‌ ಪಡೆದ ಸಿಂಚನಾಲಕೀÒ$¾, 620 ಅಂಕ ಪಡೆದ ಅವನೀಶ್‌ ಹಾಗೂ 619 ಅಂಕ ಪಡೆದ ಶಶಾಂಕ್‌ ಅವರನ್ನು ಸಮ್ಮಾನಿಸಲಾಯಿತು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ.ಕೃಷ್ಣ ಭಟ್‌, ನಿರ್ದೇಶಕ ಶಿವಪ್ರಸಾದ್‌ ಇ., ಸಂಚಾಲಕ ಮುರಳಿಧರ, ಪ್ರಭಾರ ಶಿಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಡಾ| ಶಶಿಧರ್‌ ಕಜೆ, ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯ ಬಿರ್ಮಣ್ಣ ಗೌಡ ಉಪಸ್ಥಿತರಿದ್ದರು.

Advertisement

ಮುಖ್ಯಗುರು ಸತೀಶ್‌ ಕುಮಾರ್‌ ಸ್ವಾಗತಿಸಿದರು. ಶಿಕ್ಷಕಿ ಪುಪ್ಪಲತಾ ಅನಿಸಿಕೆ ವ್ಯಕ್ತಪಡಿಸಿದರು. ವೆಂಕಟೇಶ್‌ ಪ್ರಸಾದ್‌ ಹಾಗೂ ರೇಖಾ ಸಾಧಕರ ಪಟ್ಟಿ ವಾಚಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯೆ ವೀಣಾ ಜೋಷಿ ವಂದಿಸಿದರು. ಶಾಂತಿ ಹಾಗೂ ಸುಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು.

ತಪಸ್ಸಿನ ರೀತಿ
ಆರೆಸ್ಸೆಸ್‌ ರಾಜ್ಯ ಕಾರ್ಯದರ್ಶಿ ಡಾ| ಜಯಪ್ರಕಾಶ್‌ ಎಂ. ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣವನ್ನು ತಪಸ್ಸಿನ ರೀತಿಯಲ್ಲಿ ಅಧ್ಯಯನ ಮಾಡಿದಾಗ ಯಶಸ್ಸು ಸಾಧ್ಯವಾಗುತ್ತದೆ. ಶಿಕ್ಷಕರು ನೀಡುವ ಶಿಕ್ಷಣದ ಜತೆಗೆ ಇತರ ವಿಚಾರಗಳ ಕುರಿತು ಕೂಡ ಮಕ್ಕಳು ಗಮನಹರಿಸುವಂತೆ ಪೋಷಕರು ಕ್ರಮ ಕೈಗೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next