Advertisement

ಮಕ್ಕಳಲ್ಲಿ ಸ್ವಾಭಿಮಾನ-ಆತ್ಮವಿಶ್ವಾಸ ಬೆಳೆಸಿ

10:59 AM Mar 23, 2022 | Team Udayavani |

ಧಾರವಾಡ: ಬಾಲ್ಯದಿಂದಲೇ ಮಕ್ಕಳಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸದ ಗುಣಗಳನ್ನು ಬೆಳೆಸಬೇಕು ಎಂದು ಕೃಷಿ ವಿವಿ ಕುಲಪತಿ ಡಾ| ಮಹದೇವ ಚೆಟ್ಟಿ ಹೇಳಿದರು.

Advertisement

ನಗರದ ವಿಠ್ಠಲ್‌ ಮಕ್ಕಳ ಆಸ್ಪತ್ರೆಯ 43ನೇ ಮತ್ತು ಮಕ್ಕಳ ಅಕಾಡೆಮಿಯ 21ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳ ಪ್ರತಿಭೆಗಳಿಗೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಪ್ರಸ್ತುತ ಜಾಗತೀಕರಣ ಯುಗದಲ್ಲಿ ಮಕ್ಕಳಿಗೆ ಜೀವನದಲ್ಲಿ ಹೆಚ್ಚಿನ ಪೈಪೋಟಿ ಎದುರಿಸಬೇಕಾಗಿದೆ. ಹೀಗಾಗಿ ಅವರು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾಗುತ್ತದೆ. ಪಾಲಕರು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆದು ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಮೆಡಿಕಲ್‌ ಎಕ್ಸಲನ್ಸ್‌ ಪ್ರಶಸ್ತಿ ಸ್ವೀಕರಿಸಿದ ಡಾ| ಎಸ್‌.ಆರ್‌ ರಾಮನಗೌಡರ ಮಾತನಾಡಿ, ಆದರ್ಶ ಗುಣಗಳನ್ನು ಬೆಳೆಸಿಕೊಂಡರೆ ಸುಂದರ ಜೀವನ ಸಾಧ್ಯ. ಸಮಾಜ ಸೇವೆ ವೈದ್ಯರ ಕರ್ತವ್ಯವ್ಯಾಗಬೇಕು. ಪರೋಪಕಾರ ಮಾಡುವ ಮನೋವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಡಾ| ರಾಜನ್‌ ದೇಶಪಾಂಡೆ ಮಾತನಾಡಿ, ಕಾಲಕಾಲಕ್ಕೆ ಸರಿಯಾಗಿ ಮಕ್ಕಳಿಗೆ ಲಸಿಕೆ ಹಾಕಿ ಅವರ ಪೌಷ್ಟಿಕತೆಗೆ ಪಾಲಕರು ಗಮನ ಹರಿಸಬೇಕು ಎಂದರು. ಮಕ್ಕಳ ಅಕಾಡೆಮಿಯಿಂದ ಕೊಡಮಾಡುವ ರಾಜ್ಯ ಪ್ರಶಸ್ತಿಯನ್ನು ಜೆಎಸ್ಸೆಸ್‌ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಆರ್ಯನ್‌ ಚಿಲಕವಾಡ ಅವರಿಗೆ ಪ್ರತಿಭಾವಂತ ಯುವ ಕಲಾವಿದ ಪ್ರಶಸ್ತಿ ನೀಡಲಾಯಿತು.

ತ್ರಿಭಾಷಾ ಕವಿಗೋಷ್ಠಿ, ನಿಬಂಧ ಸ್ಪರ್ಧೆ ಮತ್ತು ಸ್ವರ ನಮನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಆರೋಗ್ಯವಂತ ಶಿಶು ಸ್ಪರ್ಧೆಗೆ ನಿರ್ಣಾಯಕರಾಗಿ ಆಗಮಿಸಿದ ವೈದ್ಯರನ್ನು ಸನ್ಮಾನಿಸಲಾಯಿತು.

Advertisement

ಬಿಂದು, ನಾಗರತ್ನಾ ಮತ್ತು ನಾಗಮ್ಮ ಪ್ರಾರ್ಥಿಸಿದರು. ಡಾ| ಕವನ ದೇಶಪಾಂಡೆ ಸ್ವಾಗತಿಸಿದರು. ಡಾ| ಪಲ್ಲವಿ ಕವನ ಪರಿಚಯಿಸಿದರು. ಅಕಾಡೆಮಿ ಕಾರ್ಯದರ್ಶಿ ಡಾ| ಎಂ.ವೈ. ಸಾವಂತ ವಾರ್ಷಿಕ ವರದಿ ಓದಿದರು. ಕರಣ ದೊಡವಾಡ ವಂದಿಸಿದರು. ಡಾ| ಸ್ನೇಹಾ ಜೋಶಿ ಮತ್ತು ಡಾ| ಎನ್‌.ಬಿ. ನಲತವಾಡ ನಿರೂಪಿಸಿದರು.

ಆರೋಗ್ಯಕರ ಶಿಶು ಸ್ಪರ್ಧೆ ಫಲಿತಾಂಶ: 6 ತಿಂಗಳಿಂದ 1 ವರ್ಷದೊಳಗಿನ ವಿಭಾಗದಲ್ಲಿ ಸುಲೋಚನಾ ಆಡಿನ, ಧೀರ ಪಾಟೀಲ, ಸಾತ್ವಕಿ ಗಜಕೋಶ, 1ರಿಂದ 2 ವರ್ಷದೊಳಗಿನ ವಿಭಾಗದಲ್ಲಿ ಅರಹಾಮ ಶೇಕ್‌, ಅದಿಯಾ ಸಂಗಲದ, ಶ್ರೀ ಸಹಸ್ರ, 3 ವರ್ಷದಿಂದ 4 ವರ್ಷದೊಳಗಿನ ವಿಭಾಗದಲ್ಲಿ ಭುವಿತ್‌ ಎಚ್‌., ತಕ್ಷ ಶೆಟ್ಟಿ, ಅಮೇಯ ಹಿರೇಮಠ ಹಾಗೂ ಗ್ರಾಮೀಣ ವಿಭಾಗದಲ್ಲಿ ಸುಜಯ ಕುಂಬಾರ, ಆದ್ಯಾ ಚಂದನಕರ, ಆಝಾನ ಮಾರಲಭಾವಿ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದರು. ಅಂತಿಮವಾಗಿ ಈ ಐದು ವಿಭಾಗಗಳ ಪೈಕಿ ಸ್ಮಾರ್ಟ್‌ ಬೋಸ್‌ ಬೇಬಿ ಪ್ರಶಸ್ತಿಯನ್ನು ಭುಮಿತ ಎಚ್‌.ಗೆ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next