Advertisement
ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ಜವಾಬ್ದಾರಿ ದೊಡ್ಡದು. ಎರಡು ರಾಷ್ಟ್ರಗಳ ನಡುವಣ ಸಂಬಂಧ ವೃದ್ಧಿಯಾಗಲು ಶ್ರಮಿಸುವ ಹೊಣೆಗಾರಿಕೆ ಅವರ ಮೇಲಿರುತ್ತದೆ. ಈ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಒಂದರ್ಥದಲ್ಲಿ ಪ್ರತಿಷ್ಠೆಯ ವಿಚಾರವೂ ಹೌದು. ಯಾವುದೇ ವಿಷಯದಲ್ಲಿ ಪದವಿ ಪಡೆದವರು ನಂತರ ಯುಪಿಎಸ್ಸಿ ಪರೀಕ್ಷೆ ಬರೆದು ವಿದೇಶಾಂಗ ಸಚಿವಾಲಯ ಇಲಾಖೆಯಲ್ಲಿ ಆಫೀಸರ್ ಆಗಬಹುದು.
Related Articles
ಕಲೆ ಅಥವಾ ವಿಜ್ಞಾನದಲ್ಲಿ ಪದವಿ. ನಂತರ ಯುಪಿಎಸ್‌ಸಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸಂದರ್ಶನದಲ್ಲೂ ತೇರ್ಗಡೆ ಹೊಂದಿ ಐಎಫ್ಎಸ್ ಆಫೀಸರ್ ಆಗಬಹುದು. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಎರಡು ಪೇಪರ್‌ಗೆ (ಜನರಲ್ ಸ್ಟಡೀಸ್ ಮತ್ತು ಜನರಲ್ ಆಪ್ಟಿಟ್ಯೂಡ್ ಪೇಪರ್) ಉತ್ತರಿಸಿ ಉತ್ತಮ ಅಂಕ ಪಡೆದರೆ, ಮೇನ್ ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಸಿಗುತ್ತದೆ. ಮೇನ್ ಪರೀಕ್ಷೆಯಲ್ಲಿ ಒಟ್ಟು 9 ಪತ್ರಿಕೆಗಳಿರುತ್ತವೆ. ಇದರ ನಂತರ ಸಂದರ್ಶನ ನಡೆಯುತ್ತದೆ. ಐಎಫ್ಎಸ್ ಅಧಿಕಾರಿಗಳಲ್ಲಿ ಮೊದಲು ಮೂರನೇ ವರ್ಗದ ಸೆಕ್ರೆಟರಿಯಿಂದ ಪ್ರಮೋಷನ್ ಪಡೆದು, ಸೆಕೆಂಡ್ ಸೆಕ್ರೆಟರಿ ಹುದ್ದೆ ಮತ್ತು ಫಸ್ಟ್ ಸೆಕ್ರೆಟರಿಯಾಗಿ ವಿದೇಶಾಂಗ ಸಚಿವರು, ಮಂತ್ರಿಗಳು, ಕಮೀಷನರ್‌ಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬಹುದು.
Advertisement
ಎಲ್ಲೆಲ್ಲಿ ಅವಕಾಶಗಳು? – ರಾಯಭಾರ ಕಚೇರಿ
– ಉನ್ನತ ಆಯೋಗಗಳು
– ವಿದೇಶಾಂಗ ಸಚಿವಾಲಯ
– ಯುಎನ್‌ನಂಥ ಬಹುಪಕ್ಷೀಯ ಸಂಸ್ಥೆಗಳು
– ವಿಶ್ವ ಸಾಂಸ್ಕೃತಿಕ ಮತ್ತು ವ್ಯಾಪಾರ ಸಂಘಟನೆಗಳು ಬೇಕಿರುವ ಕೌಶಲಗಳು?
– ಅಂತಾರಾಷ್ಟ್ರೀಯ ವ್ಯವಹಾರಗಳ ಬಗೆಗೆ ತಿಳಿವಳಿಕೆ, ವಿಶ್ಲೇಷಣಾ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯ.
– ರಾಜತಾಂತ್ರಿಕ ವಿಷಯಗಳ ಕುರಿತ ಕುಶಾಗ್ರಮತಿಗಳಾಗಿರಬೇಕು.
– ರಾಷ್ಟ್ರೀಯ ಭಾವನೆ ಉತ್ತಮವಾಗಿರಬೇಕು.
– ನಾಯಕತ್ವ ಗುಣ ಮತ್ತು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಶಕ್ತಿ.
– ಪರಿಸ್ಥಿತಿಯನ್ನು ನಿಭಾಯಿಸುವ, ಸಮತೋಲನ ಕಾಪಾಡುವ ಜಾಣ್ಮೆ.
– ವಿವಿಧ ಸಂಸ್ಕೃತಿ ಕುರಿತ ಅರಿವು ಮತ್ತು ಹೊಂದಿಕೊಳ್ಳುವ ಗುಣ.
– ಅನೇಕ ಭಾಷೆಗಳ ಜ್ಞಾನ, ವಿವಿಧ ಮಾಧ್ಯಮಗಳನ್ನು ನಿರ್ವಹಿಸುವ ಅರಿವು ಮುಖ್ಯ. ಎಲ್ಲಿ ಕಲಿತರೆ ದಾರಿ ಸುಲಭ?
– ಅಚೀವರ್ ಐಎಎಸ್ ಕ್ಲಾಸಸ್, ಜಯನಗರ, ಬೆಂಗಳೂರು
– ಯೂನಿವರ್ಸಲ್ ಕೋಚಿಂಗ್ ಸೆಂಟರ್, ಆರ್‌ಪಿಸಿ ಲೇಔಟ್, ಬೆಂಗಳೂರು
– ಬ್ರಿಕ್ಸ್ ಅಕಾಡೆಮಿ, ಮಲ್ಲೇಶ್ವರಂ, ಬೆಂಗಳೂರು
– ಜೈನ್ ಯೂನಿವರ್ಸಿಟಿ (ಬಿಎಸ್ಸಿ, ಎಂಎಸ್ಸಿ ಫಾರೆನ್ಸಿಕ್ ಸೈನ್ಸ್), ಬೆಂಗಳೂರು
– ಫಾರಿನ್ ಸರ್ವಿಸ್ ಇನ್ಸ್‌ಟಿಟ್ಯೂಟ್, ನವದೆಹಲಿ
– ಲಾಲ್ ಬಹದ್ದೂರ್ ಶಾಸ್ತ್ರಿಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್, ಮಸ್ಸೂರಿ, ಡೆಹ್ರಾಡೂನ್ – ಅನಂತನಾಗ್ ಎನ್.