Advertisement

ಸಂಯಮದಿಂದ ಜೀವನ ಕಟ್ಟಿಕೊಳ್ಳಿ

02:03 PM Dec 06, 2017 | |

ಗದಗ: ಏಡ್ಸ್‌ ಸೋಂಕಿನಿಂದ ಸಮಾಜವನ್ನು ಮುಕ್ತವಾಗಿಸಲು ಯುವಜನರು ಜಾಗೃತರಾಗಬೇಕು. ಸಂಯಮದಿಂದ ಜೀವನ
ಕಟ್ಟಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆ, ಸಂಸ್ಥೆಗಳ ಸಹಯೋಗದಲ್ಲಿ ನಗರದ ಜ| ತೋಂಟದಾರ್ಯ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಆರೋಗ್ಯ ಎಲ್ಲರ ಹಕ್ಕು, ನನ್ನ ಆರೋಗ್ಯ ನನ್ನ ಹಕ್ಕು ಎಂಬ ಘೋಷವಾಕ್ಯದಡಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪಂಚದಲ್ಲಿ 3.67 ಕೋಟಿ ಜನರು ಏಡ್ಸ್‌ ಸೋಂಕಿತರಿದ್ದು, ಪ್ರತಿ ವರ್ಷ 10 ರಿಂದ 20 ಲಕ್ಷ ಜನರು ಏಡ್ಸ್‌ ರೋಗಕ್ಕೆ ತುತ್ತಾಗುತ್ತಿದ್ದಾರೆ. ಏಡ್ಸ್‌ ಸೋಂಕಿತರಲ್ಲಿ ವಿಶ್ವದಲ್ಲೇ ನೈಜೀರಿಯಾ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 6,399 ಜನರು ಏಡ್ಸ್‌ ಸೋಂಕಿತರಿದ್ದು, 3,258 ಜನರು ಎಆರ್‌ಟಿ ಕೇಂದ್ರಗಳಲ್ಲಿ ಚಿಕಿತ್ಸೆ ಹಾಗೂ ಔಷಧೋಪಚಾರ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಗದಗ ಜಿಲ್ಲೆಯಲ್ಲಿ 2004ರಲ್ಲಿ ಶೇ.1.5ರಷ್ಟು ಸೋಂಕು ಇತ್ತು. ಈಗ ಶೇ.0.36ಗೆ ಅಂದರೆ ನಾಲ್ಕು ಪಟ್ಟು ಕಡಿಮೆಯಾಗಿದೆ. ಏಡ್ಸ್‌ ರೋಗಿಗಳನ್ನು ಮುಟ್ಟುವುದು, ಅವರ ಬಟ್ಟೆಗಳನ್ನು ಧರಿಸುವುದರಿಂದ, ಅವರಿಗೆ ಕಚ್ಚಿದ ಸೊಳ್ಳೆ ಮತ್ತೂಬ್ಬರಿಗೆ ಕಚ್ಚುವುದರಿಂದ, ಕೈ ಕುಲುಕುವುದರಿಂದ ಅವರ ಜೊತೆ ಊಟ ಮಾಡುವುದರಿಂದ ಏಡ್ಸ್‌ ಹರಡುವುದಿಲ್ಲ ಎಂದು ಹೇಳಿದರು. ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ ಮಾತನಾಡಿ, ಎಚ್‌ಐವಿ ಸೋಂಕಿನ ಬಗ್ಗೆ ಯುವ ಜನರು ಜಾಗೃತರಾಗಬೇಕು. ಸುರಕ್ಷಿತ ಲೈಂಗಿಕ ಜೀವನ ಕುರಿತು ಜಾಗೃತರಾಗಬೇಕು ಎಂದು ಸಲಹೆ ನೀಡಿದರು. 

ನಗರಸಭೆ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿದರು. ಜಿಮ್ಸ್‌ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ| ಅರವಿಂದ ಕರಿನಾಗಣ್ಣವರ ಅವರು ಎಚ್‌ಐವಿ, ಏಡ್ಸ್‌ ರೋಗದ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ಪಿ.ಎಚ್‌. ಕಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭು ಬುರಬುರೆ, ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ
ಮಂಜುನಾಥ ಚವ್ಹಾಣ, ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಕುಲಕರ್ಣಿ, ಜಿಲ್ಲಾ ಏಡ್ಸ್‌ ನಿಯಂತ್ರಣ ಅ ಧಿಕಾರಿ ಡಾ| ಚಂದ್ರಕಲಾ.ಜೆ, ಐಎಂಎ ಅಧ್ಯಕ್ಷ ಡಾ| ನಾಗನೂರು, ಪಟ್ಟಣಶೆಟ್ಟಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಗೀತಾ ಕಾಂಬಳೆ, ಆರೋಗ್ಯ ಇಲಾಖೆಯ ವೆಂಕಟೇಶ ಮಹಾಜನ, ಬಾಬಣ್ಣ ಒಂಟಿಕುದುರೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next