Advertisement

ಕನ್ನಡಮಯ ವಾತಾವರಣ ನಿರ್ಮಿಸಿ

04:51 PM Dec 01, 2017 | |

ಗುಂಡ್ಲುಪೇಟೆ: ಕನ್ನಡಮಯ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದು ಕರವೇ ಯುವಸೇನೆಯ ಗ್ರಾಮಶಾಖೆ ಅಧ್ಯಕ್ಷ ಸಿದ್ದನಾಯಕ್‌ ಹೇಳಿದರು.

Advertisement

ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ, ಕನ್ನಡೇತರರಿಗೂ ಕನ್ನಡ ಭಾಷೆಯನ್ನು ಕಲಿಸುವ ಮೂಲಕ ನಾಡಿನಲ್ಲಿ ಕನ್ನಡಮಯ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದು ವಿವರಿಸಿದರು.

ಯುವಸೇನೆಯ ತಾಲೂಕು ಅಧ್ಯಕ್ಷ ಚಂದ್ರು ಮಾತನಾಡಿ, ಕನ್ನಡ ಭಾಷೆಯ ಅಭಿವೃದ್ಧಿಗೆ ಅನೇಕ ಸವಾಲುಗಳಿವೆ. ಡಾ.ಸರೋಜಿನಿ ಮಹಿಷಿ ವರದಿ ಜಾರಿ, ಕಾವೇರಿ ನೀರು ಹಂಚಿಕೆ ಸಮಸ್ಯೆ, ಮಹದಾಯಿ ನದಿ ನೀರು ಬಳಕೆ ಕನ್ನಡಿಗರಿಗೆ ಮರೀಚಿಕೆಯಾಗಿದೆ.

ಸರ್ಕಾರ ಆಡಳಿತದಲ್ಲಿ ಹೆಚ್ಚಿನ ಸ್ಥಾನಮಾನ ನೀಡುವ ಜೊತೆಗೆ ಕೋರ್ಟ್‌ ತೀರ್ಪು ಕನ್ನಡದಲ್ಲಿ ಬರೆಯುವಂತಾಗಬೇಕು. ಬೇರೆ ಭಾಷೆ ಕಲಿಯಲಿ. ಆದರೆ, ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ. ಅವರ ಹಿತಕಾಪಾಡುವಲ್ಲಿ ಎಲ್ಲರೂ ಸ್ನೇಹಕ್ಕೆ ಬದ್ಧರಾಗಬೇಕು ಎಂದು ವಿವರಿಸಿದರು.

ಹಿಂದೆ ಹೈದ್ರಾಬಾದ್‌, ಮದ್ರಾಸ್‌, ಮುಂಬೈ, ಕೊಡಗು ಎಂಬ 5 ಪ್ರಾಂತ್ಯಗಳು ಸೇರಿ ರಾಜ್ಯವಾಗಿದ್ದ ಮೈಸೂರು, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಫ‌ಲವಾಗಿ 1973ರಂದು ಡಿ.ದೇವರಾಜ ಅರಸು ಅವರು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದರು.

Advertisement

ಬ್ರಿಟಿಷರ ನಿರಂತರ ಹಾವಳಿಯನ್ನು ತಪ್ಪಿಸಲು ಹಾಗೂ ರಾಜ್ಯದ ಉಳಿವಿಗಾಗಿ ಮಹಿಳೆಯರೂ ಕಂಕಣ ಬದ್ಧರಾಗಿದ್ದರು. ಕಿತ್ತೂರುರಾಣಿ ಚೆನ್ನಮ್ಮ, ಓನಕೆ ಓಬವ್ವರಂತೆ ಕನ್ನಡನಾಡು ಕಟ್ಟಲು ಹಲವು ಮಹನೀಯರ ತ್ಯಾಗ ಬಲಿದಾನ ಅವಿಸ್ಮರಣೀಯ. ಕರ್ನಾಟಕ ಎಲ್ಲಾ ರಂಗದಲ್ಲೂ ಯಶಸ್ವಿಯಾಗಿದ್ದು, ಹಲಿಡಿ ಶಾಸನ ಉಪನಿಷತ್ತುಗಳಲ್ಲೂ ಕನ್ನಡದ ಬಗ್ಗೆ ಉಲ್ಲೇಖವಿದೆ ಎಂದು ವಿವರಿಸಿದರು.

ಕನ್ನಡ ನಾಡು ಕೃಷಿ, ಕ್ರೀಡೆ, ಕೈಗಾರಿಕೆ, ವಿಜಾnನ ಕ್ಷೇತ್ರದಲ್ಲಿ 8 ಜಾnನಪೀಠ ಪ್ರಶಸ್ತಿಗಳು ಭಾರತರತ್ನ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದ್ದು, ಕನ್ನಡ ಬೆಳೆಸುವ ಮತ್ತು ಉಳಿಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಮಂಜುನಾಥ್‌, ಭಾಸ್ಕರನಾಯ್ಕ, ರಂಗನಾಯ್ಕ, ಜ್ಯೋತಿನಾಯ್ಕ, ಮಂಜು, ಮಣಿ, ರಂಗಶಿವ, ಗಣೇಶ್‌, ಮಹೇಶ್‌, ಮಹದೇವನಾಯ್ಕ, ಸುರೇಶ್‌, ರಾಜೇಶ್‌, ಶಾಂತರಾಜು, ಗೋವಿಂದ, ದೊಡ್ಡನಾಯ್ಕ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next