Advertisement

ಲಕ್ಕೂರು ಗೇಟ್‌ ಬಳಿ ಹಂಪ್‌ ನಿರ್ಮಿಸಿ

12:17 PM Apr 02, 2021 | Team Udayavani |

ಗುಂಡ್ಲುಪೇಟೆ: ಚಾಮರಾಜನಗರ- ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿ ಬರುವ ಲಕ್ಕೂರು ಗೇಟ್‌ ಬಳಿಯಲ್ಲಿ ಹಂಪ್‌ ನಿರ್ಮಿಸಬೇಕಿದೆ. ನಿತ್ಯ ಸಹಸ್ರಾರು ವಾಹನಗಳುಸಂಚರಿ ಸುವ ಈ ರಸ್ತೆ ಅಪಾಯವನ್ನು ಆಹ್ವಾನಿಸುತ್ತಿದ್ದು, ತುರ್ತು ಕ್ರಮ ಜರುಗಿಸಬೇಕಿದೆ.

Advertisement

ಪ್ರತಿದಿನ ಗುಂಡ್ಲುಪೇಟೆಯಿಂದ ಚಾಮರಾಜನಗರಕ್ಕೆ ಸಹಸ್ರಾರು ವಾಹನಗಳು ಲಕ್ಕೂರು ಗೇಟ್‌ ಮೂಲಕವೇತೆರಳುತ್ತವೆ. ಇಲ್ಲಿ ಎರಡು ಬದಿಯಲ್ಲೂ ಇಳಿಜಾರುಇರುವುದರಿಂದ ಅತೀ ವೇಗವಾಗಿ ವಾಹನಗಳುಚಲುಸುವುದರಿಂದ ಆಯತಪ್ಪುವ ಸಾಧ್ಯತೆ ಇದೆ. ಈಸಂದರ್ಭದಲ್ಲಿ ಒಂದು ಕಡೆಯಿಂದ ಮತ್ತೂಂದು ಕಡೆಗೆಪಾದಚಾರಿಗಳು ರಸ್ತೆ ದಾಟುವುದೇ ದುಸ್ತರವಾಗಿದೆ. ಈಸ್ಥಳದಲ್ಲಿ ಹಲವು ಬಾರಿ ಅಪಘಾತಗಳು ಸಂಭವಿಸಿರುವ ನಿದರ್ಶನಗಳಿವೆ. ಅಪಾಯಕಾರಿ ಸ್ಥಳವಾಗಿದ್ದರೂನಾಮಫ‌ಲಕ ಅಳವಡಿಸುವುದಾಗಲಿ, ಹಂಪ್ಸ್‌ನಿರ್ಮಿಸುವುದಾಗಿ ಯಾವುದನ್ನೂ ಅಧಿಕಾರಿಗಳುಮಾಡದೇ ವಾಹನ ಸವಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ನಿಲ್ದಾಣವಿದ್ದರೂ ಬಸ್‌ ನಿಲ್ಲಿಸಲ್ಲ: ಲಕ್ಕೂರು, ಶ್ಯಾನಡ್ರಹಳ್ಳಿ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್‌ಸೌಲಭ್ಯವಿಲ್ಲದ ಕಾರಣ ಕಾಲ್ನಡಿಗೆ ಮೂಲಕ ಲಕ್ಕೂರುಗೇಟ್‌ಗೆ ಪ್ರಯಾಣಿಕರು ಆಗಮಿಸು ತ್ತಾರೆ. ಇವರುಗಂಟೆಗಟ್ಟಲೆ ಕಾಯುವ ಸ್ಥಿತಿ ಇದೆ. ಹೆಚ್ಚಿನ ಮಂದಿಮಹಿಳೆಯರು ಚಾಮರಾಜ ನಗರದ ಉತ್ತುವಳ್ಳಿಯಗಾರ್ಮೆಂಟ್ಸ್‌ಗೆ ತೆರಳಲು ಗೇಟ್‌ ಬಳಿ ಕಾದು ನಿಂತಿದ್ದರೂಬಸ್‌ಗಳು ನಿಲ್ಲಿಸುವುದಿಲ್ಲ. ಇದರಿಂದ ಸ್ಥಳೀಯರು, ವಿದ್ಯಾರ್ಥಿಗಳಿಗೆ ಸಮಸ್ಯೆ ಹೆಚ್ಚಿದ್ದು, ಆಟೋ ಸೇರಿದಂತೆಖಾಸಗಿ ವಾಹನಗಳನ್ನೇ ಅವಲಂಬಿಸ ಬೇಕಾಗಿದೆ.ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಕಡೆಯಿಂದಬರುವ ಕೆಲವು ಸರ್ಕಾರಿ ಬಸ್‌ಗಳು ನಿಲುಗಡೆಗೆ ಅವಕಾಶವಿದ್ದರೂ ಹಾಗೇ ತೆರಳುತ್ತವೆ.

ಈ ಭಾಗದಲ್ಲಿ ಅಧಿಕ ರೈತರು ತರಕಾರಿ, ಹಣ್ಣು ಬೆಳೆಯುತ್ತಾರೆ. ಇವುಗಳನ್ನು ತೆರಕಣಾಂಬಿ ಮಾರುಕಟ್ಟೆಗೆ ಆಟೋಗಳು ತರಕಾರಿ ತುಂಬಿಕೊಂಡು ಅತಿ ವೇಗದಲ್ಲಿ ಈ ಮಾರ್ಗವಾಗಿ ಚಲಿಸುತ್ತವೆ. ರಸ್ತೆಯಲ್ಲಿ ಹಂಪ್ಸ್‌ ಇಲ್ಲದಕಾರಣ ಅಕ್ಕಪಕ್ಕ ತೆರಳುವ ಸಣ್ಣ ವಾಹನಗಳು ದೊಡ್ಡ ವಾಹನ ಸವಾರರಿಗೆ ಕಾಣುವುದಿಲ್ಲ. ಜೊತೆಗೆ ಕೆರೆಗಳಿಗೆ ನೀರು ಹರಿಸುವ ನಿಲುಗಡೆ ಗೇಟ್‌ ಈ ರಸ್ತೆ ಬಳಿ ಇರುವುದರಿಂದ ಹೆಚ್ಚಿನ ಮಂದಿ ಮಹಿಳೆಯರು ಬಟ್ಟೆಹೊಗೆಯಲು ಇಲ್ಲಿಗೆ ಆಗಮಿಸುತ್ತಾರೆ. ಇವರೊಂದಿಗೆಸಣ್ಣ ಮಕ್ಕಳು ಕೂಡ ಬರುತ್ತಾರೆ. ಮಕ್ಕಳು ಆಟ ಆಡುವಾಗ ಮತ್ತು ರಸ್ತೆ ದಾಟುವ ವೇಳೆ ಆಕಸ್ಮಿಕವಾಗಿ ಅಪಘಾತ ಸಂಭವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದರ ಹೊಣೆಯನ್ನು ಅಧಿಕಾರಿಗಳೇ ಹೊತ್ತುಕೊಳ್ಳಬೇಕಿದೆ.ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಸಕರೇ, ಬಸ್‌ ನಿಲುಗಡೆಗೆ ಕ್ರಮವಹಿಸಿ :

Advertisement

ಗುಂಡ್ಲುಪೇಟೆಯಿಂದ ಚಾ.ನಗರಕ್ಕೆ ತೆರಳುವ ಲಕ್ಕೂರು ಗೇಟ್‌ ರಸ್ತೆಯು ಅಪಾಯಕಾರಿಯಾಗಿದೆ.ರಸ್ತೆಯ ಎರಡು ಬದಿಯಲ್ಲೂ ಇಳಿಜಾರುಇರುವುದರಿಂದ ಅತೀವೇಗವಾಗಿ ವಾಹನಗಳುಸಂಚರಿಸಿ ಆಯತಪ್ಪುವ ಸಂಭವ ಇದೆ.ಪಾದಚಾರಿಗಳು ರಸ್ತೆದಾಟಲು ಹರಸಾಹಸ ಪಡಬೇಕಾಗುತ್ತದೆ. ಇದರ ಜೊತೆಗೆ ಇಲ್ಲಿ ಬಸ್‌ ನಿಲ್ಲಿಸಲು ಅವಕಾಶವಿದ್ದರೂಚಾಲಕರು ಬಸ್‌ಗಳನ್ನು ನಿಲ್ಲುಸುವುದಿಲ್ಲ. ಒಟ್ಟಾರೆ ಈ ರಸ್ತೆ ಅವ್ಯವಸ್ಥೆ ಯಿಂದ ಕೂಡಿದೆ. ಕ್ಷೇತ್ರದಶಾಸಕರಾದ ನಿರಂಜನ್‌ ಕುಮಾರ್‌ ಈ ಬಗ್ಗೆ ಸ್ಥಳಪರಿಶೀಲನೆ ನಡೆಸಿ, ರಸ್ತೆಗೆ ಹಂಪ್‌ ನಿರ್ಮಿಸುವುದರಜೊತೆಗೆ ಬಸ್‌ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಲಕ್ಕೂರು ಗೇಟ್‌ ಬಳಿ ಇಳಿಜಾರು ಇರುವುದರಿಂದ ವಾಹನಗಳು ಅತಿವೇಗದಲ್ಲಿ ಚಲಿಸುತ್ತದೆ. ಹೀಗಾಗಿ ವೇಗದಮಿತಿ ಕಡಿಮೆ ಮಾಡಲು ಹಂಪ್ಸ್‌ನಿರ್ಮಿಸಬೇಕಿದೆ. ಈ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಮುಂದೆ ಸಂಭವಿಸುವ ಅನಾಹುತಗಳಿಗೆ ಅಧಿಕಾರಗಳೇ ನೇರ ಹೊಣೆ.  ●ಗಿರೀಶ್‌, ಲಕ್ಕೂರು

 

-ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next