Advertisement

ಕಲ್ಲು, ಮರಳು, ಮರ ಬಳಸದೆ ಮನೆ ನಿರ್ಮಿಸಿ

11:58 AM Nov 24, 2018 | |

ಮೈಸೂರು: ನವೀನ ತಾಂತ್ರಿಕತೆಯನ್ನು ಬಳಸಿಕೊಂಡು ಬಡವರಿಗೆ ಕಡಿಮೆ ವೆಚ್ಚದಲ್ಲಿ ಶೀಘ್ರವಾಗಿ ಸುಂದರವಾದ ಮನೆ ಕಟ್ಟಿಕೊಡುವ ಯೋಜನೆಗಳು ಬರಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

Advertisement

ಬಿಲ್ಡರ್ ಅಸೋಸಿಯೇಷನ್‌ ಆಫ್ ಇಂಡಿಯಾದ ಮೈಸೂರು ಘಟಕದ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ಸೆನೆಟ್‌ ಭವನದಲ್ಲಿ ಶುಕ್ರವಾರ ಆಯೋಜಿಸಿರುವ ಬಿಲ್ಡ್‌ಟೆಕ್‌; ಸ್ಮಾರ್ಟ್‌ ಕನ್ಸ್‌ಸ್ಟ್ರಕ್ಷನ್ಸ್‌ ಮತ್ತು ಎಫಿಶಿಯಂಟ್‌ ಬಿಲ್ಡಿಂಗ್‌ ಸರ್ವೀಸಸ್‌ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನಿರ್ಮಾಣ ಕ್ಷೇತ್ರದಲ್ಲಿನ ತಾಂತ್ರಿಕತೆಗಳು ವೇಗವಾಗಿ ಬೆಳೆಯುತ್ತಿದ್ದು, ಮನೆಕಟ್ಟಲು ಈ ತಾಂತ್ರಿಕತೆಯನ್ನು ಬಳಸಿಕೊಳ್ಳಬೇಕು ಎಂದರು.

ಸಂಪನ್ಮೂಲಗಳ ಕೊರತೆ: ಹಿಂದೆ ಮಣ್ಣು, ಕಲ್ಲು, ಮರಳು, ಮರ ಬಳಸಿ ಮನೆ ಕಟ್ಟಲಾಗುತ್ತಿತ್ತು. ಕೆಆರ್‌ಎಸ್‌ ಅಣೆಕಟ್ಟನ್ನು ಚುರ್ಕಿ ಗಾರೆ ಬಳಸಿ ಕಟ್ಟಲಾಗಿದೆ. ಈಗ ಮರಳು, ಮರ ಸಿಗುತ್ತಿಲ್ಲ. ಬಂಡೆಗಳೂ ಇಲ್ಲದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ವಸತಿ ಯೋಜನೆಗಳನ್ನು ಜಾರಿಗೆ ತಂದು ಫ‌ಲಾನುಭವಿಗಳ ಖಾತೆಗೇ ನೇರವಾಗಿ ಹಣ ಜಮೆ ಮಾಡಿದರೂ ಬಡವರು ಆಶ್ರಯ ಮನೆ ಕಟ್ಟಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೂರು ಕನಸು: ಮರಳು, ಕಲ್ಲು, ಮರ ಬಳಸದೆ ಮನೆಕಟ್ಟುವ ತಾಂತ್ರಿಕತೆಗಳನ್ನು ಅಭಿವೃದ್ಧಿಗೆ ತರಲಾಗಿದೆ. ದೊಡ್ಡ ದೊಡ್ಡ ಮಹಲುಗಳನ್ನು ಕಟ್ಟುವುದು ದೊಡ್ಡ ವಿಷಯವಲ್ಲ. ಜೀವನದಲ್ಲಿ ತಲೆಯ ಮೇಲೊಂದು ಸ್ವಂತ ಸೂರು ಕಟ್ಟಿಕೊಳ್ಳಬೇಕು ಎಂದು ಕನಸು ಕಾಣುವ ಬಡವರಿಗೆ ಮನೆ ಕಟ್ಟಿಕೊಳ್ಳಲು ನವೀನ ತಾಂತ್ರಿಕತೆ ನೆರವಾಗಬೇಕು. ಈ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಹೊರಹೊಮ್ಮುವ ಅಂಶಗಳನ್ನು ಸರ್ಕಾರದ ಮುಂದಿಡಲು ದುಂಡುಮೇಜಿನ ಸಭೆಗೆ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಉದ್ಯಮಿ ರಾಜ್‌ ಪಿಳ್ಳೆ„ ಮುಖ್ಯ ಭಾಷಣ ಮಾಡಿದರು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌, ಬಿಎಐ ಕರ್ನಾಟಕ ಘಟಕದ ಅಧ್ಯಕ್ಷ ಕೆ.ಎಸ್‌.ಸೋಮೇಶ್ವರ ರೆಡ್ಡಿ, ಮೈಸೂರು ಘಟಕದ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ರಾವ್‌, ಬಿಲ್ಡ್‌ಟೆಕ್‌-18 ಅಧ್ಯಕ್ಷ ವಿ.ಶ್ರೀನಾಥ್‌, ಕಾರ್ಯದರ್ಶಿ ಕೆ.ಅಜಿತ್‌ ನಾರಾಯಣ, ಸಿ.ಎಸ್‌.ಶ್ರೀಕಾಂತ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಮುಡಾ, ಬಿಡಿಎ ವೈಫ‌ಲ್ಯ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಮುಡಾದಂತಹ ಪ್ರಾಧಿಕಾರಗಳು ಸಮರ್ಪಕವಾಗಿ ಕೆಲಸ ಮಾಡಿದ್ದರೆ, ಖಾಸಗಿ ರಿಯಲ್‌ ಎಸ್ಟೇಟ್‌ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಬಿಲ್ಡರ್‌ಗಳು ನಿರ್ಮಿಸುವ ಲೇಔಟ್‌ಗಳಲ್ಲಿ ರಸ್ತೆ, ಒಳಚರಂಡಿ ಸೇರಿದಂತೆ ಯಾವ ಮೂಲಸೌಲಭ್ಯವೂ ಇರುವುದಿಲ್ಲ. ಇದಕ್ಕೆ ಪ್ರಾಧಿಕಾರಗಳ ವೈಫ‌ಲ್ಯವೂ ಕಾರಣವಾಗಿದೆ. ಬೆಂಗಳೂರು ಸುತ್ತಮುತ್ತ 50 ಕಿ.ಮೀ. ವ್ಯಾಪ್ತಿಯಲ್ಲಿ ಅಂದೇ ಟೌನ್‌ಶಿಪ್‌ಗ್ಳನ್ನು ಮಾಡಿದ್ದರೆ, ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆಯಾಗುತ್ತಿತ್ತು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next