Advertisement
ಬೆಳಗ್ಗಿನಿಂದಲೇ ಕೋಣಗಳು ಆಗಮಿಸಿದ್ದವು. ಸುಮಾರು 9ಗಂಟೆಯ ವೇಳೆಗೆ ಕೋಣಗಳನ್ನು ಕೋಟಿ ಚೆನ್ನಯ ಕರೆಗಳಲ್ಲಿ ಓಡಿಸುವ ದೃಶ್ಯ ಕಂಡು ಬಂತು.ಮಧ್ಯಾಹ್ನ ವೇಳೆಗೆ ಇನ್ನೂ ಹಲವು ಕಡೆಗಳಿಂದ ಕೋಣಗಳು ಬರುತ್ತಲೇ ಇದ್ದವು.
ಒಂದು ಕಂಬಳದಂತೆ ಮೂಡ ಬಿದಿರೆಯ ಕಡಲಕರೆ ಕಾಣುತ್ತಿತ್ತು. 50ರಿಂದ 60 ಜತೆ ಕೋಣಗಳು ಭಾಗವಹಿಸಿದ್ದವು. ಹೆಚ್ಚುತ್ತಿರುವ ಆಸಕ್ತಿ
ಒಂದು ಜತೆ ಕಂಬಳದ ಕೋಣದ ಜತೆ 10ರಿಂದ 20 ಮಂದಿ ಯುವಕ ತಂಡ ಆಗಮಿಸಿತ್ತು. ಕಂಬಳದ ಬಗ್ಗೆ ಅಭಿಮಾನ ಹಾಗೂ ಉತ್ಸಾಹ ಯುವಕರಲ್ಲಿ ಕಾಣುತ್ತಿತ್ತು. ತುಳುನಾಡಿನ ಜಾನಪದ ಕ್ರೀಡೆ ಕಂಬಳ ಉಳಿಸಬೇಕು ಎನ್ನುವಂತಿತ್ತು. ಯುವಕರಲ್ಲಿ ಈಗ ಕಂಬಳದ ಆಸಕ್ತಿ ಹುಟ್ಟಿದೆ.ಯಕ್ಷಗಾನದ ಜತೆ ಕಂಬಳದ ಆಸಕ್ತಿ ಹುಟ್ಟುತ್ತಿದ್ದು ಈ ಬಗ್ಗೆ ಆಶಾದಾಯಕವಾಗಿದೆ.
Related Articles
ಇತರ ಕ್ರೀಡೆಗೆ ಹೋಲಿಸಿದರೆ ಕಂಬಳ ಕ್ರೀಡೆಯ ಪ್ರೇಕ್ಷಕ ವರ್ಗವೇ ಬೇರೆ. ಅವರು ಕಂಬಳ ಕೋಣದ ಬಗ್ಗೆ ಹೆಚ್ಚು ಗೊತ್ತಿದ್ದವರು.ಹಲವು ಕಂಬಳಗಳನ್ನು ನೋಡಿ ನೋಡಿ ಯಾವುದು ಕೋಣ ಹೇಗೆ ಇದೆ ಎಂದು ನೋಡಿಯೇ ಬಲ್ಲವರು.ಈ ಕ್ರೀಡೆಗೆ ನಿದ್ದೆಯನ್ನು ಬಿಡುವವರು.ಬಾಯಲ್ಲಿ ಬೀಡ ಒಂದಿದ್ದರೆ ಸಾಕು ಎನ್ನುವವರು, ಅದಕ್ಕಾಗಿ ವಿಳ್ಯದೆಲೆ (ಬೀಡ ) ಮಾರುವವರು ಇಲ್ಲಿ ಮಾತ್ರ ಕಾಣಸಿಗುತ್ತಾರೆ.ಕಂಬಳಕ್ಕೆ ಹೋಗುವವರು ಒಟ್ಟಾಗಿಯೇ ಇರುತ್ತಾರೆ.ಎಲ್ಲಿ ಹೋದರು ಅವರ ತಂಡ ಇರುತ್ತದೆ.
Advertisement
ಕಾಳಜಿ ಅಗತ್ಯಕಂಬಳ ಕೋಣಗಳನ್ನು ದಿನಾಲೂ ಸಲೀಸಾಗಿ ತಿರುಗಾಡಲು ಬಿಡಬೇಕು. ಹಸಿರು ಹುಲ್ಲು, ಗಂಜಿ, ಓಲೆ ಬೆಲ್ಲ, ಕೊಬ್ಬರಿ , ರಾಗಿ, ಹುರುಳಿ ಮುಂತಾದ ಆಹಾರ ನೀಡಬೇಕಾಗಿದೆ. ಒಂದು ದಿನ ಎಳ್ಳೆಣ್ಣೆ, 4ದಿನ ತೆಂಗಿನ ಎಣ್ಣೆಯಿಂದ ಮಾಲಿಶ್ ಮಾಡಬೇಕು. ಬಿಸಿ ನೀರು ಸ್ನಾನ ಮಾಡಿಸಿ ಕಾಳಜಿ ವಹಿಸಬೇಕು.
– ಸತೀಶ್ಚಂದ್ರ ಸಾಲ್ಯಾನ್
ಇರುವೈಲು ಪಾಣಿಲ