Advertisement
ಸಚಿವೆ ನಿರ್ಮಲಾ ಸೀತಾರಾಮನ್ ಎರಡು ರಾಜ್ಯಗಳಿಗೆ ಹೆಚ್ಚಿನ ಯೋಜನೆಗಳನ್ನು ಘೋಷಿಸುವ ವೇಳೆ ಸದನದಲ್ಲಿ ಕೆಲವರು ಗದ್ದಲ ಏರ್ಪಡಿಸಿದರೆ, ಟಿಡಿಪಿ, ಜೆಡಿಯು ಮತ್ತು ಎಲ್ ಜೆಪಿ ಸಂಸದರು ಮೇಜು ಕುಟ್ಟಿ ಸಂಭ್ರಮಿಸಿದರು.
Related Articles
Advertisement
1. ಆಂಧ್ರಪ್ರದೇಶದ ಅಭಿವೃದ್ಧಿಗೆ ರೂ.15 ಸಾವಿರ ಕೋಟಿಗಳ ಆರ್ಥಿಕ ನೆರವು2. ರಾಜ್ಯದ ಜೀವನಾಡಿ ಪೋಲವರಂ ಪೂರ್ಣಗೊಳಿಸಲು ಹೆಚ್ಚಿನ ಹಣ
3. ರಾಯಲಸೀಮಾ, ಪ್ರಕಾಶಂ ಮತ್ತು ಉತ್ತರಾಂಧ್ರ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್
4. ಕೈಗಾರಿಕಾ ಅಭಿವೃದ್ಧಿಗಾಗಿ ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ
5. ವಿಶಾಖಪಟ್ಟಣಂ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್‌ನಲ್ಲಿ ನೋಡ್‌ಗಳಿಗೆ ವಿಶೇಷ ನೆರವು
6. ಕೊಪ್ಪರ್ತಿ ಮತ್ತು ಓರ್ವಕಲ್ಲು ಕೈಗಾರಿಕಾ ಕೇಂದ್ರಗಳ ಅಭಿವೃದ್ಧಿ
7. ವಿಶಾಖ-ಚೆನ್ನೈ ಕಾರಿಡಾರ್‌ನಲ್ಲಿ ಕೊಪ್ಪರ್ತಿ ಮತ್ತು ಹೈದರಾಬಾದ್-ಬೆಂಗಳೂರು ಕಾರಿಡಾರ್‌ನಲ್ಲಿ ಧನಸಹಾಯ
8. ನೀರು, ವಿದ್ಯುತ್, ರೈಲ್ವೆ, ರಸ್ತೆಗಳ ಯೋಜನೆಗಳಿಗೆ ವಿಶೇಷ ಹಣ
9. ವಿಭಜನೆ ಕಾಯಿದೆಯಲ್ಲಿರುವ ಖಾತರಿಗಳ ಜಾರಿ
10. ಪೂರ್ವೋದಯ ಯೋಜನೆಯ ಮೂಲಕ ಆಂಧ್ರಪ್ರದೇಶಕ್ಕೆ ವಿಶೇಷ ಯೋಜನೆ ಬಿಹಾರಕ್ಕೆ ಹಲವು ಯೋಜನೆ “ಅಮೃತಸರ-ಕೋಲ್ಕತಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬಿಹಾರದ ಗಯಾದಲ್ಲಿ industrial nod ಅಭಿವೃದ್ಧಿಯನ್ನು ಬೆಂಬಲಿಸುತ್ತೇವೆ. ಇದು ಪೂರ್ವ ಪ್ರದೇಶದ ಅಭಿವೃದ್ಧಿಯನ್ನು ವೇಗಗೊಳಿಸಲಿದೆ. ರಸ್ತೆ ಸಂಪರ್ಕ ಯೋಜನೆಗಳ ಅಭಿವೃದ್ಧಿಯನ್ನು ಸಹ ಬೆಂಬಲಿಸುತ್ತೇವೆ. ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ, ಬಕ್ಸಾರ್- ಭಾಗಲ್ಪುರ್ ಹೆದ್ದಾರಿ, ಬೋಧಗಯಾ-ರಾಜಗೀರ್-ವೈಶಾಲಿ-ದರ್ಭಾಂಗ ರಸ್ತೆ. ಬಕ್ಸಾರ್‌ನಲ್ಲಿ ಗಂಗಾ ನದಿಯ ಮೇಲೆ ಹೆಚ್ಚುವರಿ ದ್ವಿಪಥ ಸೇತುವೆಯನ್ನು 26,000 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡುತ್ತೇವೆ”ಎಂದು ಸಚಿವೆ ಘೋಷಿಸಿದರು. ”ಬಿಹಾರ ದ ಭಾಗಲ್ಪುರ್ ಜಿಲ್ಲೆಯ ಪಿರಪೈಂಟಿಯಲ್ಲಿ ಹೊಸ 2400 ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಸ್ಥಾಪನೆ ಸೇರಿದಂತೆ ವಿದ್ಯುತ್ ಯೋಜನೆಗಳನ್ನು 21,400 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಬಿಹಾರದಲ್ಲಿ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜುಗಳು ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವುದು. ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳಿಂದ ಬಾಹ್ಯ ಸಹಾಯಕ್ಕಾಗಿ ಬಿಹಾರ ಸರ್ಕಾರದ ವಿನಂತಿಗಳನ್ನು ತ್ವರಿತಗೊಳಿಸಲಾಗುವುದು”ಎಂದು ಸಚಿವೆ ಘೋಷಿಸಿದರು.