ಹೊಸದಿಲ್ಲಿ: ಮುಂದಿನ ಹಣಕಾಸು ವರ್ಷದ ಬಜೆಟ್ ಮಂಡಿಸಲು ಇಪ್ಪತ್ತಮೂರು ದಿನಗಳಷ್ಟೇ ಬಾಕಿ ಉಳಿದಿವೆ. ಹೊಸದಿಲ್ಲಿಯಲ್ಲಿ ಬಿರುಸಿನ ಸಮಾಲೋಚನೆ-ಚರ್ಚೆಗಳು ಆರಂಭವಾಗಿವೆ. ಹಾಲಿ ವರ್ಷ ಕರ್ನಾಟಕ ಸಹಿತ ಎಂಟು ರಾಜ್ಯಗಳ ವಿಧಾನಸಭೆ, 2019ರ ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ಹಲವಾರು ಜನಪರ ಯೋಜನೆ ಜಾರಿಗೆ ನರೇಂದ್ರ ಮೋದಿ ನೇತೃತ್ವದ ಸರಕಾರ ಸಿದ್ಧತೆ ನಡೆಸಿದೆ. ರಾಜ್ಯಗಳಿಗೆ ಸೇರಬೇಕಾಗಿರುವ ಯೋಜನೆಗಳ ಅನ್ವಯ ಎಷ್ಟೆಷ್ಟು ಮೊತ್ತ ಸಂದಾಯವಾಗಬೇಕು, ಆಯಾ ರಾಜ್ಯಗಳ ಅನುದಾನಕ್ಕೆ ಸಂಬಂಧಿಸಿದಂತೆ ಚರ್ಚೆಯೂ ನಡೆದಿದೆ.
ಆಡಳಿತಾರೂಢ ಬಿಜೆಪಿಯ ಮತಬ್ಯಾಂಕ್ ಆಗಿರುವ ಮಧ್ಯಮ ವರ್ಗಕ್ಕೆ ಹಲವು ರೀತಿಯ ತೆರಿಗೆ ಸುಧಾರಣೆ, ಲಾಭಗಳನ್ನು ಫೆ.1ರ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಹಣಕಾಸು ಸಚಿವ ಅರುಣ್ ಜೇಟಿÉ ಘೋಷಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಆರೋಗ್ಯ ವಿಮೆಯ ಪ್ರಮಾಣ ವಿಸ್ತರಣೆ, ವಿವಿಧ ರೀತಿಯ ಹೂಡಿಕೆಗಳಿಗೆ ಪ್ರೋತ್ಸಾಹಕ್ಕೆ ಉತ್ತೇಜನ ನೀಡುವ ಸಾಧ್ಯತೆ ಇದೆ. ಆದರೆ, ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಯಾಗಿದ್ದರಿಂದ ಘೋಷಣೆಗಳಿಗೆ ಯಾವ ರೀತಿಯಲ್ಲಿ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಲಿದೆ ಎನ್ನುವುದೇ ಕುತೂಹಲಕರ ವಿಚಾರ.
ಹೀಗಾಗಿಯೇ, ಷೇರು ಮಾರುಕಟ್ಟೆ ವಹಿವಾಟುದಾರರಿಗೆ ವಿಧಿಸಲಾಗುವ ಕ್ಯಾಪಿಟಲ್ ಗೈನ್ಸ್ ಟ್ಯಾಕ್ಸ್ ಅನ್ನು ಮತ್ತೆ ಜಾರಿ ಮಾಡಲಾಗುತ್ತದೆ. ಈ ಬಗ್ಗೆ ಆಕ್ಷೇಪಗಳು ಇರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಷೇರು ವಹಿವಾಟುದಾರರಿಗೆ ಅದನ್ನು ಅನ್ವಯಗೊಳಿಸುವ ಪ್ರಸ್ತಾಪ ಜೇಟಿÉ ಮುಂದಿದೆ.
ಇಪಿಎಫ್ಒ, ಕಾರ್ಮಿಕರ ರಾಜ್ಯ ವಿಮಾ ನಿಗಮ ಮೂಲಕ ಕಾರ್ಮಿಕ ಕ್ಷೇತ್ರಕ್ಕೆ ಯೋಜನೆಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಾರಿಯಾಗುವ ಸಾಧ್ಯತೆಗಳಿವೆ. ಇಪಿಎಫ್ ವ್ಯವಸ್ಥೆಯಲ್ಲಿ ಉದ್ಯೋಗಿ ನೀಡುವ ಪ್ರಮಾಣದಷ್ಟೇ ಮಾಲಿಕನೂ ನೀಡುತ್ತಿದ್ದಾನೆ. ದೇಶದ ಒಟ್ಟು ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಎಲ್ಲರಿಗೆ ಈ ರೀತಿಯ ವ್ಯವಸ್ಥೆ ಇಲ್ಲ. ಹೀಗಾಗಿ, ಬಡತನ ರೇಖೆಗಿಂತ ಕೆಳಗಿನವರಿಗೆ ಪಿಂಚಣಿ ಯಂಥ ಯೋಜನೆ ನೀಡಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಯೋಜನೆ ರೂಪಿಸಬೇಕು ಮತ್ತು ಅದಕ್ಕಾಗಿ ಹಣದ ಮೂಲ ಕಂಡುಕೊಳ್ಳಬೇಕಾಗಿದೆ. ಅದಕ್ಕಾಗಿ ಮಾತುಕತೆಗಳು ನಡೆಯುತ್ತಿವೆ. ಈಗಾಗಲೇ ಕೆಲವೊಂದು ರಾಜ್ಯಗಳಲ್ಲಿ ವೃದ್ಧರಿಗಾಗಿ 1 ಸಾವಿರ ರೂ. ಪಿಂಚಣಿ ನೀಡುತ್ತಿವೆ. ಅದಕ್ಕೆ ಪೂರಕವಾಗಿ ಹೆಚ್ಚುವರಿ ಮೊತ್ತ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ನಾಳೆ ಆರ್ಥಿಕ ತಜ್ಞರ ಜತೆ ಮೋದಿ ಸಭೆ
ಮುಂಬರುವ ಬಜೆಟ್ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ವಿವಿಧ ಕ್ಷೇತ್ರಗಳ ಪರಿಣತರು, ನೀತಿ ಆಯೋಗದ ಸದಸ್ಯರು ಮತ್ತು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಜತೆ ಸಭೆ ನಡೆಸಲಿದ್ದಾರೆ. ಉದ್ಯೋಗ ಸೃಷ್ಟಿ ಮತ್ತು ರೈತಾಪಿ ವರ್ಗದ ಸಮಸ್ಯೆ ನಿವಾರಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಅವರು ವಿಚಾರ ವಿಮರ್ಶೆ ನಡೆಸಲಿದ್ದಾರೆ. ಕೇಂದ್ರ ಸಾಂಖೀÂಕ ಕಚೇರಿ ಮುಂದಿನ ವರ್ಷದ ಬೆಳವಣಿಗೆ ದರ ಕಡಿಮೆಯಾಗಲಿದೆ ಅಂದರೆ ಅದು ನಾಲ್ಕು ವರ್ಷಗಳಷ್ಟು ಕನಿಷ್ಠ ಅಂದರೆ ಶೇ.6.5ರಷ್ಟು ಕಡಿಮೆಯಾಗಲಿದೆ ಎಂದು ಹೇಳಿತ್ತು. ಹೀಗಾಗಿ ಈ ಸಭೆ ಮಹತ್ವ ಪಡೆದಿದೆ.