ಬೆಂಗಳೂರು: ಬಿಬಿಎಂಪಿ 2020- 21ನೇ ಸಾಲಿನ ಬಜೆಟ್ ಪರಿಷ್ಕರಣೆ ಮಾಡುವ ಸಂಬಂಧ ಪಾಲಿಕೆಯ ವಿವಿಧ ವಿಭಾಗದ ವಿಶೇಷ ಆಯುಕ್ತರೊಂದಿಗೆ ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಸೋಮವಾರ ಆಂತರಿಕ ಸಭೆ ನಡೆಸಿದರು.
ಪಾಲಿಕೆಯ 2020-21ನೇ ಸಾಲಿನ ಬಜೆಟ್ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ಎಲ್ಲ ವಿಭಾಗದ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳುವ ಪ್ರಯತ್ನ ಈ ಸಭೆಯಲ್ಲಿ ನಡೆದಿದೆ. ಸೋಮವಾರಕರೆಯಲಾಗಿದ್ದ ಸಭೆಗೆ 2020ರ ಏ.1ರಿಂದ ಸೆ.30ರ ವರೆಗಿನ ಸ್ವೀಕೃತ ವೆಚ್ಚಗಳು ಹಾಗೂ ಅ.1ರಿಂದ 2021ರ ಮಾ.31ರ ವರೆಗಿನ ನಿರೀಕ್ಷಿತ ಸ್ವೀಕೃತಿ ಮತ್ತು ವೆಚ್ಚಗಳನ್ನು ಸಿದ್ಧಪಡಿಸಿಕೊಂಡು ಮಂಡನೆ ಮಾಡುವಂತೆ ನಿರ್ದೇಶನ ನೀಡಲಾಗಿತ್ತು. ಇದರಂತೆ ಪಾಲಿಕೆಯ ಎಲ್ಲ ವಿಭಾಗದ ಅಧಿಕಾರಿಗಳು ಸೋಮವಾರ ತಮ್ಮ ವಿಭಾಗದ ಆರ್ಥಿಕ ಸ್ಥಿತಿಯನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಆದಾಯ ಇಳಿಕೆ ಬಗ್ಗೆ ಮಾಹಿತಿ: ಕೋವಿಡ್ ಭೀತಿಯಿಂದಾಗಿ ಆಸ್ತಿ ತೆರಿಗೆ ಸೇರಿದಂತೆ ವಿವಿಧ ವಿಭಾಗದಿಂದ ಪಾಲಿಕೆಗೆ ಆದಾಯ ಮೂಲ ಕಡಿಮೆಯಾಗಿರುವ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಗಿದೆ. ಆಸ್ತಿ ತೆರಿಗೆ ಆದಾಯ ಮೂಲದಿಂದ ಕಳೆದ ಮೂರು ತಿಂಗಳಿನಿಂದ ಗಣನೀಯ ಪ್ರಮಾಣದಲ್ಲಿ ಆದಾಯ ಕಡಿಮೆಯಾಗಿದೆ. ಅಂದಾಜು 250 ಕೋಟಿ ರೂ. ಆದಾಯ ಕಡಿಮೆ ಸಂಗ್ರಹವಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಹಲವು ಸುತ್ತಿನ ಸಭೆ: ಪಾಲಿಕೆಯ ಬಜೆಟ್ ಪರಿಷ್ಕರಣೆ ಮಾಡುವ ಸಂಬಂಧ ವಿವಿಧ ವಿಭಾಗದ ಅಧಿಕಾರಿಗಳೊಂದಿಗೆ ಸೋಮವಾರ ಪ್ರಾಥಮಿಕ ಹಂತದ ಮಾಹಿತಿ ಪಡೆದುಕೊಳ್ಳಲಾಗಿದೆ. ಸೋಮವಾರ ನಡೆದ ಸಭೆಯಲ್ಲಿ ಎಲ್ಲ ವಿಭಾಗದ ವಿವಿಧ ಯೋಜನೆಗಳ ವಿವರ, ಅನುಷ್ಠಾನಗೊಳ್ಳ ಬೇಕಾಗಿರುವ ಯೋಜನೆಗಳು, ಪಾಲಿಕೆಯ ಹಾಲಿ ಆದಾಯ ಹಾಗೂ ಮುಂದಿನ ಬಜೆಟ್ ಮಂಡನೆಯಾಗುವವರೆಗೂ, ಪಾಲಿಕೆಯ ಆಡಳಿತಾತ್ಮಕ ನಿರ್ವಹಣೆ ಹಾಗೂ ಅಗತ್ಯ ಮೂಲಸೌಕರ್ಯಕ್ಕೆ ಖರ್ಚಾಗುವ ಮೊತ್ತದಅಂದಾಜುವಿವರದಬಗ್ಗೆಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಕೋವಿಡ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಪಾಲಿಕೆಯ ಆದಾಯ ಕಡಿಮೆಯಾಗಿರುವ ವಿಚಾರವೂ ಈ ವೇಳೆ ಚರ್ಚೆ ಮಾಡಲಾಗಿದೆ. ಇದು ಮೊದಲ ಹಂತದ ಪ್ರಾಥಮಿಕ ಸಭೆಯಾಗಿದ್ದು, ಇನ್ನು ಹಲವು ಸುತ್ತಿನ ಸಭೆಗಳು ನಡೆಯಲಿವೆ ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಜೆಟ್ ಪರಿಷ್ಕರಣೆ; ಸುಳಿವು ನೀಡಿದ್ದ ಆಡಳಿತಾಧಿಕಾರಿ: ಪಾಲಿಕೆಯ ಹಾಲಿ ಬಜೆಟ್ ಪರಿಷ್ಕರಣೆ ಮಾಡುವ ಸಂಬಂಧ ಬಿಬಿಎಂಪಿಯ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ಅಧಿಕಾರ ಸ್ವೀಕರಿಸಿದ ದಿನವೇ ಸುಳಿವು ನೀಡಿದ್ದರು. ಅಧಿಕಾರ ಸ್ವೀಕರಿಸಿ ಮಾತನಾಡಿದ್ದ ಆಡಳಿತಾಧಿಕಾರಿ ಹಾಲಿ ಬಜೆಟ್ ವಾಸ್ತವಿಕವಾಗಿ ಮಂಡನೆ ಮಾಡಲಾಗುವುದು.ಆದಾಯಕ್ಕಿಂತಹೆಚ್ಚುವೆಚ್ಚವಾಗುತ್ತಿರುವುದು ಸಹಜವಾಗಿಯೇ ಪಾಲಿಕೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು.