Advertisement

ಬಜೆಟ್‌ ಮಂಡನೆ ಅನಿವಾರ್ಯ:ಸಚಿವ ಶಿವಶಂಕರರೆಡ್ಡಿ

06:40 AM Jun 28, 2018 | Team Udayavani |

ಚಿಕ್ಕಬಳ್ಳಾಪುರ: ಬಜೆಟ್‌ ಮಂಡನೆ ಮಾಡದಿರಲು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿಲ್ಲ. ಜೆಡಿಎಸ್‌ ಸರ್ಕಾರದಲ್ಲಿ
ಭಾಗಿಯಾಗಿರುವುದರಿಂದ ಹೊಸ ಬಜೆಟ್‌ ಮಂಡನೆ ಅನಿವಾರ್ಯ.

Advertisement

ಎರಡೂ ಪಕ್ಷಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸಮ್ಮಿಶ್ರ ಸರ್ಕಾರ ತನ್ನ ಹೊಸ ಬಜೆಟ್‌ನ್ನು ಮಂಡಿಸಲಿದೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಜೆಟ್‌ ಮಂಡಿಸಬಾರದು ಎನ್ನುವುದಕ್ಕೆ ರಾಜ್ಯದಲ್ಲಿ ಕೇವಲ ಕಾಂಗ್ರೆಸ್‌
ಸರ್ಕಾರ ಇಲ್ಲ. ಇರುವುದು ಜೆಡಿಎಸ್‌, ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ. ಎರಡೂ ಪಕ್ಷಗಳು ಚುನಾವಣೆ ವೇಳೆ ರಾಜ್ಯದ
ಜನತೆಗೆ ಅನೇಕ ಭರವಸೆಗಳನ್ನು ನೀಡಿವೆ. ಹಾಗಾಗಿ, ರೈತರ ಸಾಲಮನ್ನಾ ಸೇರಿದಂತೆ ಅನೇಕ ಹೊಸ ಕಾರ್ಯಕ್ರಮಗಳನ್ನು ನೀಡಬೇಕಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ರೂಪಿಸಿ ಅನುಷ್ಠಾನಗೊಳಿಸಿದ ಎಲ್ಲಾ ಕಾರ್ಯಕ್ರಮಗಳು ಮುಂದುವರೆಯಲಿವೆ. ಈ ವಿಚಾರದಲ್ಲಿ ಯಾರಿಗೂ ಅನುಮಾನ,ಗೊಂದಲ ಬೇಡ. ಹಿಂದಿನ ಕಾಂಗ್ರೆಸ್‌ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ನೀಡಿರುವ ಕಾರ್ಯಕ್ರಮಗಳನ್ನು ತೆಗೆಯ ಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲೂ ಕೂಡ ಹೇಳಿಲ್ಲ. ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು, ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸುವುದು ರಾಜ್ಯ ಸಮ್ಮಿಶ್ರ ಸರ್ಕಾರದ ಹೊಸ ಬಜೆಟ್‌ನ ಉದ್ದೇಶವಾಗಿದೆ. ಅದರಲ್ಲೂ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಶಾಸಕರು ಹೊಸದಾಗಿ ಆಯ್ಕೆಗೊಂಡಿದ್ದಾರೆ.ಅವರ ಕ್ಷೇತ್ರದ ಅಭಿವೃದಿಟಛಿ ಆಶೋತ್ತರಗಳಿಗೂ ನಾವು ಸ್ವಂದಿಸಬೇಕಿದೆ. ಹೀಗಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಹೊರ ಬಜೆಟ್‌ ಮಂಡಿಸುವುದು ಅನಿವಾರ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next