Advertisement

ಬಜೆಟ್ ಪೂರ್ವಭಾವಿ ಸಭೆ

07:29 AM Jan 30, 2019 | Team Udayavani |

ಚನ್ನರಾಯಪಟ್ಟಣ: ಪುರಸಭೆ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಪುರಸಭೆ ಸದಸ್ಯರು ಸೇರಿದಂತೆ ಸಾರ್ವಜನಿಕರು ಬಜೆಟ್‌ಗೆ ಸಲಹೆ ನೀಡದೆ ಅಧಿಕಾರಿಗಳ ಬೆವರಿಳಿಸಿದರು. ಪಟ್ಟಣದ ಪುರಸಭೆ ಆವರಣದಲ್ಲಿ 2019-20ರ ಆಯವ್ಯಯ ಮಂಡನೆಗಾಗಿ ಪುರಸಭಾ ಆಡಳಿತಾಧಿ ಕಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾರ್ವಜನಿಕ ಸಲಹಾ ಸಭೆ ಏರ್ಪಡಿಸಿದ್ದರು. ಬಜೆಟ್‌ಗೆ ಸಂಬಂಧಿ ಸಿದ ಚರ್ಚೆಗಳ ಬದಲಾಗಿ ಪುರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹರಿಹಾಯ್ದರು.

Advertisement

ಅಧಿಕಾರಿಗಳ ಬೇಜವಾಬ್ದಾರಿ: ಪುರಸಭೆ ಚುನಾ ವಣೆ ನಡೆದು 6 ತಿಂಗಳಾದರೂ ಸರ್ಕಾರದ ತೊಡಕಿ ನಿಂದ ಆಡಳಿತ ಮಂಡಳಿ ಅಧಿಕಾರ ನಡೆಸುತ್ತಿಲ್ಲ. ಇದರಿಂದ ಅಧಿಕಾರಿಗಳಿಗೆ ಕೇಳುವವರಿಲ್ಲದಂತಾ ಗಿದ್ದು, ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ. ಈ-ಸ್ವತ್ತು ಮಾಡಲು 7 ತಿಂಗಳು ಕಚೇರಿಗೆ ಅಲೆಯ ಬೇಕಾಗಿದೆ. ಖಾಸಗಿ ಶಾಲೆಗಳು ಕೋಟ್ಯಂತರ ರೂ. ತೆರಿಗೆ ಕಟ್ಟದೇ ಇದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ತೆರಿಗೆ ವಂಚನೆ: ಬಡವರು ಹಾಗೂ ಮಧ್ಯಮ ವರ್ಗದವರು ಸಕಾಲಕ್ಕೆ ತೆರಿಗೆ ನೀಡದೆ ಹೋದರೆ ಕುಡಿಯುವ ನೀರು ಬಂದ್‌ ಮಾಡಿ ತೊಂದರೆ ನೀಡುತ್ತಾರೆ. ಹಣವಂತರು ಪುರಸಭೆಯಿಂದ ಪರವಾನಗಿ ಪಡೆಯದೇ ಐದು ಅಂತಸ್ತಿನ ಕಟ್ಟಡ ಕಟ್ಟುತ್ತಿದ್ದರೂ ಅವರ ಗೋಜಿಗೆ ಹೋಗುವುದಿಲ್ಲ. ನಗರದಲ್ಲಿನ ಶ್ರೀಮಂತರು ಕೋಟ್ಯಂತರ ರೂ. ತೆರಿಗೆ ವಂಚನೆ ಮಾಡುತ್ತಿರುವುದರ ಹಿಂದೆ ಕಂದಾಯ ಅಧಿಕಾರಿಗಳ ಕೈವಾಡವಿದೆ ಎಂದು ಪುರ ಸಭೆ ಸದಸ್ಯ ನವೀನ್‌ ತಾರಟೆಗೆ ತೆಗೆದುಕೊಂಡರು.

ಘನ್ನಿ ಸಮೀಪದ ಹೇಮಾವತಿ ಹೋಳೆಯ ಕುಡಿಯುವ ನೀರ ಯಂತ್ರಗಾರದ ಬಳಿ ಅಕ್ರಮ ವಾಗಿ ಮರಳು ದಂಧೆ ನಡೆಸಲಾಗುತ್ತಿದೆ ಈ ಬಗ್ಗೆ ಮುಖ್ಯಾಧಿಕಾರಿ ಸಿ.ಎಸ್‌.ಬಸವರಾಜು ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಶಿವರಾಂ ಆರೋಪಿಸಿದರು.

ಪೌರ ಕಾರ್ಮಿಕರ ಉಪಾಹಾರ ಅವ್ಯವಹಾರ: ಸರ್ಕಾರ ಇಂದಿರಾ ಕ್ಯಾಂಟೀನ್‌ ಇದ್ದರೂ ಪೌರಕಾರ್ಮಿಕರಿಗೆ ಖಾಸಗಿ ಹೋಟೆಲ್‌ನಲ್ಲಿ ಉಪಹಾರ ಕೊಡಿಸುವ ಮೂಲಕ ಪುರಸಭೆಯ ಲಕ್ಷಾಂತರ ಬಿಲ್‌ ಮಾಡಲಾಗುತ್ತಿದೆ. ಇದೇ ಹಣವನ್ನು ಇಂದಿರಾ ಕ್ಯಾಂಟೀನ್‌ಗೆ ನೀಡಬೇಕು. ತಮಗೆ ಕಮಿಷನ್‌ ನೀಡುವುದಿಲ್ಲ ಎಂದು ಇಂದಿರಾ ಕ್ಯಾಂಟೀನ್‌ಗೆ ಹೋಗುತ್ತಿಲ್ಲ, ಇಂದಿರಾ ಕ್ಯಾಂಟೀನ್‌ನಲ್ಲಿ ನಿತ್ಯ ಎಷ್ಟು ಉಪಾಹಾರ ಹಾಗೂ ಊಟದ ಟೋಕನ್‌ ಹೋಗುತ್ತಿದೆ ಎಂದು ಪರಿಶೀಲಿಸಬೇಕು ಎಂದು ದಂಡೋರ ಸಮಿತಿ ಅಧ್ಯಕ್ಷ ಮಂಜುನಾಥ್‌ ಒತ್ತಾಯಿಸಿದರು.

Advertisement

ರೈಲ್ವೆ ನಿಲ್ದಾಣದಿಂದ ನಗರಕ್ಕೆ ಆಗಮಿಸುವ ರಸ್ತೆಯಲ್ಲಿ ಬೀದಿ ದೀಪದ ಸಮಸ್ಯೆ ಇದೆ. ರಸ್ತೆ ಗುಂಡಿ ಬಿದ್ದಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಸದಸ್ಯೆ ಸುಜಾತ ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಸಿ.ಎಸ್‌.ಬಸವರಾಜು, ವ್ಯವಸ್ಥಾಪಕ ಕೃಷ್ಣೇಗೌಡ, ಪರಿಸರ ಅಭಿಯಂತರ ವೆಂಕಟೇಶ್‌, ಕಂದಾಯ ನಿರೀಕ್ಷಕ ಯತೀಶ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next