Advertisement

ಬಜೆಟ್ ಅನುಷ್ಠಾನ, ಕಡತ ವಿಲೇವಾರಿ: ಇಂದು ಸಂಜೆ ಸಿಎಂ ತುರ್ತು ಸಭೆ

03:16 PM May 17, 2022 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ, ಮೇ 17 ಸಂಜೆ 5 ಗಂಟೆಗೆ ಬಜೆಟ್ ಅನುಷ್ಠಾನ, ಕಡತ ವಿಲೇವಾರಿ ಸಂಬಂಧಿಸಿದಂತೆ ಚರ್ಚೆ ನಡೆಸಲು ತುರ್ತು ಸಭೆ ಕರೆದಿದ್ದಾರೆ.

Advertisement

ವಿಧಾನ ಸೌಧದದ ಸಮ್ಮೇಳನ ಸಭಾಂಗಣ ಕೊಠಡಿ ಸಂಖ್ಯೆ 334 ರಲ್ಲಿ ತುರ್ತು ಸಭೆ ನಡೆಯಲಿದ್ದು, 2022-23 ನೇ ಸಾಲಿನ ಬಜೆಟ್ ಅನುಷ್ಠಾನ, ಕಡತ ವಿಲೇವಾರಿ, ಆಡಳಿತವನ್ನು ಇನ್ನಷ್ಟು ವೇಗದಲ್ಲಿ ಚುರುಕುಗೊಳಿಸಲು ಕ್ರಮ ಕೈಗೊಳ್ಳಲು ಸಿಎಂ ಸಲಹೆ ನೀಡುವ ಸಾಧ್ಯತೆಗಳಿವೆ.

ಇನ್ನಿತರ ಮಹತ್ವದ ಆಡಳಿತ ವಿಷಯಗಳ ಕುರಿತಂತೆ ಚರ್ಚಿಸಲು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಸಿಎಂ ಕರೆದಿರುವ ತುರ್ತು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next