“2018-19ರ ಬಜೆಟ್ ದೇಶದ ಎಲ್ಲ ವರ್ಗಗಳ ಸ್ನೇಹಿ ಬಜೆಟ್’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರೆ.
“ಕೃಷಿಯಿಂದ ಮೂಲಸೌಕರ್ಯದ ವರೆಗೂ ಎಲ್ಲ ವಲಯಗಳ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ರೂಪಿಸಲಾಗಿದೆ. ಹೀಗಾಗಿ
ಇದು ನವಭಾರತ ನಿರ್ಮಾಣದ ಅಡಿ ಪಾಯವನ್ನು ಭದ್ರಪಡಿಸಲಿದೆ. ಇದು ರೈತ ಸ್ನೇಹಿ, ಸಾಮಾನ್ಯ ಜನರ ಸ್ನೇಹಿ, ಉದ್ಯಮ ವಲಯ ಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹಿ ಬಜೆಟ್ ಆಗಿದೆ’ ಎಂದಿದ್ದಾರೆ.
ಅರುಣ್ ಜೇಟಿÉ ಮತ್ತು ತಂಡವನ್ನು ಅಭಿನಂದಿಸಿದ ಅವರು, “ಈ ಬಾರಿಯ ಬಜೆಟ್ ಗ್ರಾಮೀಣ ಭಾರತದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ದೇಶದಲ್ಲಿ ಉದ್ದಿಮೆಗಳ ನಿರ್ವಹಣೆಯನ್ನು ಸುಲಭ ಮಾಡು ವುದಲ್ಲದೆ ಜನಜೀವನವನ್ನೂ ಆರಾಮದಾಯಕವಾಗಿಸುವಂಥ ಬಜೆಟ್ ಇದು’ ಎಂದು ಹೇಳಿದರು.
“ಎಂಎಸ್‌ಎಂಇಗಳು ಹಲವು ವರ್ಷ ಗಳಿಂದ ಭಾರೀ ಮೊತ್ತದ ತೆರಿಗೆಯಿಂದಾಗಿ ನಲುಗಿದ್ದವು. ಎಂಎಸ್‌ಎಂಇ ವಲಯದ ಮೇಲಿನ ತೆರಿಗೆ ಕಾರ್ಪೊರೇಟ್ ತೆರಿಗೆ ಹೊರೆಯನ್ನು ಇಳಿಸಿದ್ದೇವೆ. ಎಂಎಸ್‌ಎಂಇ ವಲಯ ಇನ್ನುಮುಂದೆ ಶೇ.30 ತೆರಿಗೆಗೆ ಬದಲಾಗಿ ಶೇ. 25 ತೆರಿಗೆ ಕಟ್ಟಬೇಕಿದೆ. ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದಕ್ಕಾಗಿ ಜೇಟಿÉಯನ್ನು ಅಭಿನಂದಿಸು ತ್ತೇನೆ. ಆಯುಷ್ಮಾನ್ ಭಾರತ ಯೋಜನೆ ಅಡಿ 10 ಕೋಟಿ ಬಡ ಕುಟುಂಬಗಳಿಗೆ ಆಯ್ದ ಆಸ್ಪತ್ರೆಗಳಲ್ಲಿ ರೂ. 5 ಲಕ್ಷ ವೆಚ್ಚದ ವರೆಗೆ ಚಿಕಿತ್ಸೆ ನೀಡಲಾಗುವುದು. ಕಲ್ಯಾಣ ಯೋಜನೆಗಳ ಲಾಭ ಬಡವರು, ದಲಿತರು, ಹಿಂದುಳಿದ ವರಿಗೆ ನೇರ ತಲುಪಲಿವೆ’ ಎಂದರು.