Advertisement

ರೈತರು ಕೇಳುತ್ತಿರುವುದು ಕನಿಷ್ಠ ಬೆಲೆಯ ಖಾತ್ರಿ; ಸಿಬಲ್‌

11:12 AM Feb 11, 2021 | Team Udayavani |

ನವದೆಹಲಿ: ಲೋಕಸಭೆಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ಮೂರು ಕೃಷಿ ಕಾಯ್ದೆ ಗ ಳನ್ನು ಸಮರ್ಥಿಸಿಕೊಂಡು ಮಾತನಾಡಿದರೆ,
ರಾಜ್ಯಸಭೆಯಲ್ಲಿ ಪ್ರತಿ ಪಕ್ಷಗಳ ‌ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. “ದೆಹಲಿ ಗಡಿಯಲ್ಲಿ ಪ್ರತಿ ಭಟಿಸುತ್ತಿರುವ ರೈತರ ಮನ್‌ ಕಿ ಬಾತ್‌ ಅನ್ನು ಸರ್ಕಾರ ಆಲಿಸುತ್ತಿಲ್ಲ. ಅವರು “ಕನಿಷ್ಠ’ ಬೆಂಬಲ ಬೆಲೆ ( ಎಂಎ ಸ್‌ ಪಿ)ಗೆ ಖಾತ್ರಿಯನ್ನು ಕೇಳುತ್ತಿದ್ದಾರೆಯೇ ಹೊರತು, ಕಾರ್ಪೊರೇಟ್‌ ಸಂಸ್ಥೆಗಳಂತೆ “ಗರಿಷ್ಠ’ ಅನುಕೂಲವನ್ನು ಕೇಳುತ್ತಿಲ್ಲ’ ಎಂದು ಪ್ರತಿ ಪಕ್ಷಗಳ ನಾಯಕರು ನುಡಿದಿದ್ದಾರೆ.

Advertisement

ಇದನ್ನೂ ಓದಿ:ಇನ್ಮುಂದೆ “ಕೂ”ಮಯ : ಮೂಲೆಗೆ ಸರಿಯುತ್ತಾ ಟ್ವೀಟರ್ ?

ಬಜೆಟ್‌ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌, “ಕೇಂದ್ರ ಸರ್ಕಾರವು ಈ 3 ಕೃಷಿ ಕಾಯ್ದೆಗಳ ಮೂಲಕ ಪ್ರಯ ಗ ಮಾಡಲು ‌ ಹೊರಟಿರುವ ಕೃಷಿ ಸುಧಾರಣೆಯನ್ನು ಈಗಾಗಲೇ ಅಮೆರಿಕ ಹಾಗೂ ಯುರೋಪ್‌ ನಲ್ಲಿ ಪ್ರಯೋಗ ಮಾಡಲಾಗಿದೆ. ಅದರ ಪರಿಣಾಮದಿಂದ ಕೃಷಿಯೂ ಕಾರ್ಪೊರೇಟ್‌ ಕಂಪನಿಗಳ ಹಿಡಿತಕ್ಕೆ ಸಿಲುಕುವಂತಾಗಿದೆ’ ಎಂದು ಉಲ್ಲೇಖಿಸಿದ್ದಾರೆ. ಹೊಸ ಕಾನೂನಿನಲ್ಲಿ ರೈತರಿಗೆ ‌ ಖಾಸಗಿಯವರು ಎಂಎ ಸ್‌ ಪಿಗಿಂತ ಹೆಚ್ಚಿನ ದರ ನೀಡುತ್ತಾರೆ ಎಂದು ಹೇಳುತ್ತಿರುವ ಸರ್ಕಾರವು, ಎಂಎಸ್‌ಪಿಗೆ ಕಾನೂನಾತ್ಮಕ ಬಲ ನೀಡಲು ಹಿಂದೇಟು ಹಾಕುತ್ತಿರುವುದೇಕೆ ಎಂದೂ ಸಿಬಲ್‌ ಪ್ರಶ್ನಿಸಿದ್ದಾರೆ.

ಕೇಂದ್ರ, ರಾಜ್ಯ ದಿಂದ 498 ಕೋಟಿ ರೂ. ಬಾಕಿ!:
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಏರ್‌ ಇಂಡಿಯಾ ವಿಮಾನ ಯಾನ ಸಂಸ್ಥೆಗೆ 498 ಕೋಟಿ ರೂ. ಪಾವತಿಸಲು ಬಾಕಿ ಇವೆ ಎಂದು ರಾಜ್ಯಸಭೆಗೆ ನಾಗರಿಕ ವಿಮಾನಯಾ‌ನ ಸಚಿವ ಹರ್‌ ದೀಪ್‌ ಸಿಂಗ್‌ ಪುರಿ ಮಾಹಿತಿ ನೀಡಿದ್ದಾರೆ. ಇದು 2020ರ ಡಿ.31ರವರೆಗಿ‌ನ ಮೊತ್ತ. ವಿವಿ ಐಪಿಗಳ ಪ್ರಯಾಣ, ಸ್ಥಳಾಂತರ ಕಾರ್ಯಾಚರಣೆ, ವಿದೇಶಿ ಗಣ್ಯರ ಸಂಚಾರ ಸೇರಿದಂತೆ ವಿವಿಧ ಸೇವೆಗಳಿಗಾಗಿ ಏರಿಂಡಿಯಾ ವಿಮಾನಗಳನ್ನು ಬಳಸಲಾಗಿತ್ತು. ಇದರ ಮೊತ್ತ ಪಾವತಿಸಲು ಬಾಕಿಯಿದೆ ಎಂದು ಅವರು ತಿಳಿಸಿದ್ದಾ ರೆ.

ದೇಶ ದ್ರೋಹ ಕೇಸ್‌: ಕರ್ನಾಟಕದಲ್ಲೇ ಹೆಚ್ಚು
2019ರಲ್ಲಿ ದೇಶಾದ್ಯಂತ 93 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದು, 96 ಮಂದಿಯನ್ನು ಬಂಧಿಸಲಾಗಿದೆ. ವಿಶೇಷವೆಂದರೆ, ಅತಿ ಹೆಚ್ಚು ದೇಶ ದ್ರೋಹ ಕೇಸುಗಳು ದಾಖಲಾಗಿದ್ದು ಕರ್ನಾಟಕದಲ್ಲಿ. ಇಲ್ಲಿ 22 ಪ್ರಕರಣಗಳು ದಾಖಲಾ ಗಿ , 18 ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ.ಕಿ ಶನ್‌ ರೆಡ್ಡಿ ಮಾಹಿತಿ ನೀಡಿದ್ದಾರೆ. 17 ದೇಶ ದ್ರೋಹದ ಪ್ರಕರಣಗಳು ಅಸ್ಸಾಂನಲ್ಲಿ ದಾಖಲಾಗಿವೆ ಎಂದೂ ತಿಳಿಸಿದ್ದಾರೆ. ಇದೇ ವೇಳೆ, 2016ರಿಂದ 2019ರ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಂದ ಉಗ್ರ ಕೃತ್ಯಗಳ ಆರೋಪದಲ್ಲಿ 5,922 ಮಂದಿಯನ್ನು ಬಂಧಿಸಲಾಗಿದೆ ಎಂದೂ ಸಚಿವರು ಹೇಳಿದ್ದಾ ರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next