Advertisement

ಮುಂದುವರಿದ ಮುಂಬೈ ಷೇರುಪೇಟೆ ನಾಗಾಲೋಟ; ಸೆನ್ಸೆಕ್ಸ್ 1.200 ಅಂಕ ಜಿಗಿತ

10:55 AM Feb 02, 2021 | |

ಮುಂಬೈ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ನಿಂದಾಗಿ ಷೇರುಪೇಟೆಯಲ್ಲಿ ಭರ್ಜರಿ ವಹಿವಾಟು ಮುಂದುವರಿದಿದ್ದು, ಮಂಗಳವಾರವೂ (ಫೆ.2, 2021) ಮುಂಬೈ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1200 ಅಂಕಗಳಷ್ಟು ಜಿಗಿದಿದೆ.

Advertisement

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1209.81 ಅಂಕಗಳಷ್ಟು ಭರ್ಜರಿ ಏರಿಕೆಯೊಂದಿಗೆ 49, 819.42 ಅಂಕಗಳ ವಹಿವಾಟು ಆರಂಭಿಸುವ ಮೂಲಕ ಮತ್ತೆ 50 ಸಾವಿರದ ಗಡಿಯತ್ತ ಮುನ್ನುಗ್ಗಿದೆ.

ಎನ್ ಎಸ್ ಸಿ ನಿಫ್ಟಿ ಕೂಡಾ ಬರೋಬ್ಬರಿ 348.75 ಅಂಕಗಳಷ್ಟು ಜಿಗಿತ ಕಂಡಿದ್ದು, 14, 629.95ರ ಗಡಿಗೆ ಏರಿಕೆಯಾಗಿದೆ. ಎಚ್ ಡಿಎಫ್ ಸಿ ಬ್ಯಾಂಕ್, ಎಲ್ ಟಿ, ಬಜಾಜ್ ಫೈನಾನ್ಸ್, ಎಸ್ ಬಿಐ, ಎಚ್ ಡಿಎಫ್ ಸಿ, ಆ್ಯಕ್ಸಿಸ್ ಬ್ಯಾಂಕ್, ಐಟಿಸಿ, ಆಲ್ಟ್ರಾಚೆಮ್, ಬಜಾಜ್ ಫನ್ ಸರ್ವ್, ಕೋಟಕ್ ಬ್ಯಾಂಕ್, ಒಎನ್ ಜಿಸಿ ಮತ್ತು ಐಸಿಐಸಿಐ ಬ್ಯಾಂಕ್ ಷೇರು ಶೇ.5.58ರಷ್ಟು ಲಾಭಗಳಿಸಿವೆ.

ಸೋಮವಾರ(ಫೆ.1) ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದ ಸಂದರ್ಭದಲ್ಲಿ ಮುಂಬೈ ಷೇರುಮಾರುಕಟ್ಟೆ ಪುಟಿದೆದ್ದಿದ್ದಿತ್ತು. ಮುಂಬೈ ಷೇರು ಸಂವೇದಿ ಸೂಚ್ಯಂಕ 2,315 ಅಂಕಗಳ ಏರಿಕೆಯೊಂದಿಗೆ 48,600ರ ಅಂಕ ತಲುಪಿತ್ತು. ಇದರೊಂದಿಗೆ ಹೂಡಿಕೆದಾರರ ಸಂಪತ್ತು 6.34 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next