Advertisement

Budget 2024; ದೇಶದ 100 ನಗರದಲ್ಲಿ ಕೈಗಾರಿಕಾ ಪಾರ್ಕ್‌ಗಳು

11:42 PM Jul 23, 2024 | Team Udayavani |

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ಗಳ ನಿರ್ಮಾಣ ಅಭಿವೃದ್ಧಿ ಯೋಜನೆಯಡಿಯಲ್ಲಿ 12 ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ದೇಶದ 100 ನಗರಗಳಲ್ಲಿ ಕೈಗಾರಿಕಾ ಪಾರ್ಕ್‌ಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.

Advertisement

ಕೈಗಾರಿಕಾ ಪಾರ್ಕ್‌ಗಳಲ್ಲಿ ಸಂಪೂರ್ಣ ವಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕಾಗಿ ದೇಶದ 100 ನಗರಗಳನ್ನು ಆಯ್ಕೆ ಮಾಡಲು ನಿರ್ಧರಿಸ ಲಾಗಿದೆ. ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ದೆಹ ಲಿ-ಮುಂಬೈ ಇಂಡಸ್ಟ್ರಿಯಲ್‌ ಕಾರಿಡಾರ್‌, ವೆಸ್ಟರ್ನ್ ಡೆಡಿಕೇಟೆಡ್‌ ಫ್ರೈಟ್‌ ಕಾರಿಡಾರ್‌ ಅಭಿವೃದ್ಧಿಪಡಿಸಿದೆ.  ಪೂರ್ವ ಕರಾವಳಿ ವಲಯವನ್ನು ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಚೆನ್ನೈ- ವೈಜಾಗ್‌ ಕೈಗಾರಿಕಾ ಕಾರಿಡಾರ್‌ಗೆ ಈ ಯೋಜನೆಯಿಂದ ಹೆಚ್ಚಿನ ಕೊಡುಗೆ ದೊರೆಯುವ ಸಂಭವವಿದೆ. 800 ಕಿ.ಮೀ. ವ್ಯಾಪ್ತಿ ಒಳಗೊಂಡಿದೆ.

ಉದ್ಯಮಗಳ ನ್ಯಾಯ ಮಂಡಳಿ ಬಲವರ್ಧನೆ

ದಿವಾಳಿತನ ಸಂಹಿತೆಗೆ (ಐಬಿಸಿ) ಬದಲಾವಣೆಗಳನ್ನು ತರುವ ಮೂಲಕ ಉದ್ಯಮಗಳ ವ್ಯಾಜ್ಯ ಪರಿಹರಿಸುವ ನ್ಯಾಯಮಂಡಳಿಗಳನ್ನು ಬಲಪಡಿಸಲು ಕ್ರಮ ಕೈಗೊಳ್ಳುವುದಾಗಿ ಘೋಷಿಸಲಾಗಿದೆ. ಉದ್ಯ ಮಗಳು ಎದುರಿಸುತ್ತಿರುವ ಬಾಕಿ ವಸೂಲಾತಿ ಸಮಸ್ಯೆ ಕ್ಷಿಪ್ರವಾಗಿ ಇತ್ಯರ್ಥಗೊಳಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲೂ ಉದ್ದೇಶಿಸಲಾಗಿದೆ. ಅಲ್ಲದೇ, ಐಬಿಸಿ ಅನ್ವಯ ನಿರ್ಧರಿಸಬೇಕಾದ ನಿರ್ದಿಷ್ಟ ಪ್ರಕರಣಗಳ ಮೇಲ್ವಿಚಾರಣೆಗೆಂದೇ ಹೆಚ್ಚು ವರಿ ನ್ಯಾಯಾಧಿಕರಣಗಳ ಸ್ಥಾಪನೆ ಬಗ್ಗೆ ಯೂ ಪ್ರಸ್ತಾಪಿಸಲಾಗಿದೆ. ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಪಾರದರ್ಶಕತೆ ಖಾತರಿ ಪಡಿಸಿಕೊಳ್ಳಲು ನ್ಯಾಯಾಧಿಕರಣ ಗಳಲ್ಲಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ರೂಪಿಸಲಾಗುವುದು. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿಗಳು ಈಗಾ ಗಲೇ 1,000ಕ್ಕೂ ಅಧಿಕ ಸಂಸ್ಥೆಗಳ ಸಮಸ್ಯೆ ಬಗೆಹರಿಸಿ, 3.3 ಲಕ್ಷ ಕೋಟಿ ರೂ.ಗಳ ಸಾಲ ವಸೂಲಾತಿ ಮಾಡಿವೆ. ಇಂಥ ಪ್ರಕ್ರಿಯೆಗಳನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next