Advertisement

Budget 2024; ದೇಸಿ ವಸ್ತುಗಳ ರಫ್ತು ಉತ್ತೇಜನಕ್ಕೆ ಇ-ಕಾಮರ್ಸ್‌ ಹಬ್‌ ಸ್ಥಾಪನೆ

09:52 PM Jul 23, 2024 | Team Udayavani |

ಹೊಸದಿಲ್ಲಿ: ದೇಶಿಯ ಕುಶಲ ಕರ್ಮಿಗಳ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆಗಳಲ್ಲೂ ಮಾರಾಟ ಮಾಡುವುದಕ್ಕೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ರಫ್ತು ಉತ್ತೇಜನಕ್ಕಾಗಿ ಸಾರ್ವಜನಿಕ-ಖಾಸಗಿ-ಪಾಲುದಾರಿಕೆ  (ಪಿಪಿಪಿ) ಮಾದರಿಯಲ್ಲಿ ಇ -ಕಾಮರ್ಸ್‌ ಹಬ್‌ ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿದೆ.

Advertisement

ಈಗಾಗಲೇ ಇ-ಕಾಮರ್ಸ್‌ ಸೇವೆಗಳ ಮೂಲಕ ದೇಶದಲ್ಲಿ 5 ಬಿಲಿಯನ್‌ ಡಾಲರ್‌ ಮೌಲ್ಯದ ಸರ ಕು ಗ ಳನ್ನು ರಫ‌¤ನ್ನು ಮಾಡಲಾಗುತ್ತಿದೆ. ಆದರೆ, ಚೀನಾದಲ್ಲಿ ಈ ಪ್ರಮಾಣ 300 ಬಿಲಿಯನ್‌ ಡಾಲರ್‌ಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲ ವರ್ಷದಲ್ಲಿ ಇ-ಕಾಮರ್ಸ್‌ ವೇದಿಕೆಗಳ ಮೂಲಕವೇ 50-100 ಬಿಲಿಯನ್‌ ಡಾಲರ್‌ ಮೌಲ್ಯದ ರಫ್ತು ಹೆಚ್ಚಿಸಲು ಯೋಜಿಸಲಾಗಿದೆ. ಇದಕ್ಕಾಗಿ ಸರಕು ಸೇವಾ ಚೌಕಟ್ಟಿನ ಅನ್ವಯ ಒಂದೇ ಸೂರಿನಡಿಯಲ್ಲಿ ದೇಶದ ರಫ್ತು ಸಂಬಂಧಿತ ಸೇವೆಗಳನ್ನು ತರುವುದಾಗಿ ಕೇಂದ್ರಸರ್ಕಾರ ತಿಳಿಸಿದೆ. ಇ- ಕಾಮರ್ಸ್‌ ಹಬ್‌ಗಳ ಮೂಲಕ ಸಣ್ಣ ಪುಟ್ಟ ವಸ್ತುಗಳನ್ನು (ಕರಕುಶಲ ವಸ್ತುಗಳು, ಆಭರಣಗಳನ್ನು ) ರಫ್ತು ಮಾಡಬಹುದಾಗಿದೆ.

ಇ-ಕಾಮರ್ಸ್‌ ಇತ್ತೀಚಿನ ವರ್ಷಗಳಲ್ಲಿ ಬೆಳೆಯುತ್ತಿರುವ ಬಹುದೊಡ್ಡ ವ್ಯಾಪಾರ ವೇದಿಕೆಯಾಗಿದ್ದು, ಕಳೆದ ವರ್ಷ ಭಾರತ 800 ಬಿಲಿಯನ್‌ ಡಾಲರ್‌ವರೆಗಿನ ವಹಿವಾಟನ್ನು ವಿದೇಶಗಳೊಂದಿಗೆ ಭಾರತ ನಡೆಸಿದೆ. ಇದು 2030ರ ವೇಳೆಗೆ 2 ಲಕ್ಷ ಕೋಟಿ ಡಾಲರ್‌ಗೆ ತಲುಪುವ ಸಾಧ್ಯತೆಗಳಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next