Advertisement

Budget 2024; ಲಡಾಖ್‌ಗೆ 6 ಸಾವಿರ ಕೋಟಿ ರೂ.: ಕಳೆದ ಸಾಲಿಗಿಂತ ಶೇ.32 ಹೆಚ್ಚು ಅನುದಾನ ಘೋಷಣೆ

08:27 PM Jul 23, 2024 | Team Udayavani |

ನವದೆಹಲಿ: ಹೊಚ್ಚಹೊಸ ಕೇಂದ್ರಾಡಳಿತ ಪ್ರದೇಶ ಲಡಾಖ್‌ಗೆ ಕೇಂದ್ರ ಸರ್ಕಾರ ಬರೋಬ್ಬರಿ 5,958 ಕೋಟಿ ರೂ. ನೆರವು ಘೋಷಿಸಿದ್ದು ಇದು ಕಳೆದ ಸಾಲಿಗಿಂತ ಶೇ.32ರಷ್ಟು ಹೆಚ್ಚು.

Advertisement

ಕಳೆದ ವರ್ಷ ಲಡಾಖ್‌ಗೆ ಕೇಂದ್ರ ಸರ್ಕಾರ 4,500 ಕೋಟಿ ರೂ.ಗಳನ್ನು ನಿಗದಿಪಡಿಸಿತ್ತು. 2019ರಲ್ಲಿ ಜಮ್ಮು ಮತ್ತು ಕಾಶ್ಮೀರ 370ನೇ ವಿಧಿಯ ರದ್ದತಿಯ ಬಳಿಕ ಲಡಾಖ್‌ನ್ನು ಕೇಂದ್ರಾಳಿತ ಪ್ರದೇಶ ಎಂದು ಘೋಷಿಸಿದ್ದು ಇಡೀ ಪ್ರಾಂತ್ಯದ ಆಡಳಿತ, ಅಭಿವೃದ್ಧಿ ಹೊಣೆ ಕೇಂದ್ರ ಸರ್ಕಾರದ ಹೆಗಲೇರಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್‌ ಅವರು ಅತಿ ಹೆಚ್ಚು ಅನುದಾನವನ್ನು ಒದಗಿಸಿದ್ದಾರೆ.

ಕೃಷಿ ಮತ್ತು ಸಂಬಂಧಿತ ಯೋಜನೆಗಳು, ನೀರು ಸರಬರಾಜು, ಗ್ರಾಮೀಣ ಅಭಿವೃದ್ಧಿ, ವಿದ್ಯುತ್‌, ಅರಣ್ಯೀಕರಣ ಮತ್ತು ವನ್ಯಜೀವಿ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ಶಿಕ್ಷಣ ಮುಂತಾದ ಇಲಾಖೆಗಳಿಗೆ ಈ ನೆರವು ದೊರೆಯಲಿದೆ. ಲಡಾಖ್‌ ಪ್ರಾಂತ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮೂಲಸೌಕರ್ಯಗಳಿಗೆ ಮತ್ತು ಪಾರಂಪರಿಕ ಸಂಸ್ಕೃತಿ ಪುನರುಜ್ಜೀವಕ್ಕೆ ಆದ್ಯತೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಹಸಿರು ಇಂಧನ, ದೂರಸಂಪರ್ಕ, ರಸ್ತೆ ಸಂಪರ್ಕ, ಕ್ರೀಡೆ, ಗ್ರಿಡ್‌ ಟ್ರಾನ್ಸ್‌ಮಿಷನ್‌ ಲೈನ್ಸ್‌ಗೆ ಒತ್ತು ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next