ಚೀನ ಮತ್ತು ಪಾಕಿಸ್ತಾನದ ಕ್ಯಾತೆ ಹೆಚ್ಚುತ್ತಿರುವ ನಡುವೆಯೇ, ಬಜೆಟ್‌ನಲ್ಲಿ ರಕ್ಷಣಾ ಇಲಾಖೆಯ ಅನುದಾನವನ್ನು ಹೆಚ್ಚಳ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 5.94 ಲಕ್ಷ ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ.
Advertisement
ಕಳೆದ ವರ್ಷ 5.25 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಹಣದಲ್ಲಿ 1.62 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳವನ್ನು ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ಸಮರನೌಕೆಗಳು ಮತ್ತು ಮಿಲಿಟರಿ ಹಾರ್ಡ್‌ವೇರ್‌ಗಳ ಖರೀದಿಗಾಗಿ ಮೀಸಲಿಡಲಾಗಿದೆ.
ಹಾಗೆಯೇ, 2023-24ನೇ ಸಾಲಿನಲ್ಲಿ ವೇತನ ಮತ್ತು ಇತರೆ ನಿರ್ವಹಣೆಗಾಗಿ 2,70,120 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. 1,38,205 ಕೋಟಿ ರೂ.ಗಳನ್ನು ಪಿಂಚಣಿಗಾಗಿ ಮೀಸಲಾಗಿರಿಸಲಾಗಿದೆ.