ಹೊಸದಿಲ್ಲಿ: ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ರೈಲ್ವೇ ಇಲಾಖೆಗೆ ಈವರೆಗೆ ಸಿಗುತ್ತಿದ್ದ ಅನುದಾನಕ್ಕಿಂತ ಶೇ.15ರಿಂದ 20ರಷ್ಟು ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿದೆ.
ಹೆಚ್ಚುವರಿ ಅನುದಾನವು, ಹೊಸ ರೈಲುಗಳ ಖರೀದಿ, ಮೂಲಸೌಕರ್ಯಾಭಿವೃದ್ಧಿ ಹಾಗೂ ಪ್ರಯಾಣಿಕರ ಸವಲತ್ತುಗಳ ಹೆಚ್ಚಳಕ್ಕಾಗಿ ಉಪಯೋಗಿಸುವ ನಿರೀಕ್ಷೆಯಿದೆ.
ಕಳೆದ ವರ್ಷದ ಬಜೆಟ್‌ನಲ್ಲಿ ಇಲಾಖೆಗೆ, 2.15 ಲಕ್ಷ ಕೋಟಿ ರೂ. ನೀಡಲಾಗಿತ್ತು. ಅದರಲ್ಲಿ 1.07 ಲಕ್ಷ ಕೋಟಿ ರೂ. ಹಣವು ಒಟ್ಟಾರೆ ಅನುದಾನ (ಜಿಬಿಎಸ್), 1 ಲಕ್ಷ ಕೋಟಿ ರೂ. ಹೆಚ್ಚುವರಿ ಬಜೆಟ್ ಸಂಪನ್ಮೂಲಗಳಿಂದ, 7,500 ಕೋಟಿ ರೂ. ಹಣವು ಆಂತರಿಕ ಸಂಪನ್ಮೂಲಗಳಿಂದ ನೀಡಲಾಗಿತ್ತು.
ಇದನ್ನೂ ಓದಿ:ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್ ; “ರೀಬಾಕ್ ಆ್ಯಕ್ಟಿವ್ ಫಿಟ್ 1.0′ ಬಿಡುಗಡೆ
ಈ ಬಾರಿಯ ಹೆಚ್ಚುವರಿ ಅನುದಾನದ ರೂಪದಲ್ಲಿ 18ರಿಂದ 20 ಲಕ್ಷ ಕೋಟಿ ರೂ.ಗಳು ರೈಲ್ವೇ ಇಲಾಖೆಗೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.