Advertisement

ಟ್ಯಾಕ್ಸ್‌ ಸೇವಿಂಗ್‌ ಡಿಡಕ್ಷನ್‌ 2.5 ಲಕ್ಷ ರೂ.ಗಳಿಗೆ ಏರಿಕೆ?

11:21 AM Jan 19, 2022 | |

ನವದೆಹಲಿ: ಆದಾಯ ತೆರಿಗೆ ಕಾಯ್ದೆಯ 80 ಸಿ ನಿಯಮದ ಅನ್ವಯ ತೆರಿಗೆ ಉಳಿಸುವ ಮೊತ್ತ (ಟ್ಯಾಕ್ಸ್‌ ಸೇವಿಂಗ್‌ ಡಿಡಕ್ಷನ್‌) ವನ್ನು ಹಾಲಿ 1.5 ಲಕ್ಷ ರೂ.ಗಳಿಂದ 2.5 ಲಕ್ಷ ರೂ.ಗಳಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಈ ಬಗ್ಗೆ ಫೆ.1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿರುವ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆಗಳು ಇವೆ.

Advertisement

2014-15ನೇ ಸಾಲಿನಲ್ಲಿ ಅಂದರೆ ಏಳು ವರ್ಷಗಳ ಹಿಂದೆ ಈ ಮೊತ್ತ ಪರಿಷ್ಕರಿಸಲಾಗಿತ್ತು. ರಿಟರ್ನ್ಸ್ ಸಲ್ಲಿಕೆ ಮಾಡುವವರು, ಅದನ್ನು ಹೆಚ್ಚಿನ ರೀತಿಯಲ್ಲಿ ಬಳಕೆ ಮಾಡುತ್ತಿದ್ದರು. ಇದೀಗ ವೇತನ ಪ್ರಮಾಣ ಹೆಚ್ಚಾಗಿರುವುದರಿಂದ, ಖರ್ಚುಗಳು ಹೆಚ್ಚಾಗಿದೆ.

ಆದರೆ, 80 ಸಿಯ ಅನ್ವಯ ಲಾಭದ ಪ್ರಮಾಣ ಹೆಚ್ಚಾಗಿಲ್ಲ. ಈ ಅಂಶ ಪರಿಗಣಿಸಿ ಕೇಂದ್ರ ಸರ್ಕಾರ ತೆರಿಗೆ ಉಳಿಸುವ ಮೊತ್ತದ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ಮತ್ತೊಂದಡೆ, ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ತೆರಿಗೆ ಸ್ಲಾéಬ್‌ಗಳು ಮತ್ತು ಅವುಗಳ ಪ್ರಮಾಣದಲ್ಲಿ ಬದಲಾವಣೆ ಸಾಧ್ಯತೆ ಇಲ್ಲ. ಆದರೆ, 1961ರ ಆದಾಯ ತೆರಿಗೆ ಕಾಯ್ದೆಯ 80 ಸಿ ಅನ್ವಯ ಹೆಚ್ಚಿನ ವಿನಾಯಿತಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಅರ್ನೆಸ್ಟ್‌ ಯಂಗ್‌ ಇಂಡಿಯಾ ಅಭಿಪ್ರಾಯಪಟ್ಟಿದೆ. ಕೊರೊನಾ ಸೋಂಕಿನಿಂದ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿ ಇಂಥ ಸಂದರ್ಭ ತಂದಿಟ್ಟಿದೆ ಎಂದು “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next