Advertisement

5 ಟ್ರಿಲಿಯನ್ ಡಾಲರ್‌ ಆರ್ಥಿಕತೆ ಮತ್ತು ಬಜೆಟ್‌

10:01 AM Feb 06, 2020 | sudhir |

ಬಜೆಟ್‌ ಒಳ್ಳೆಯದೋ? ಕೆಟ್ಟಧ್ದೋ? ಇದಕ್ಕೆ ಉತ್ತರ ಅವರವರ ಅನುಕೂಲತೆಯನ್ನು ಅವಲಂಬಿಸಿದೆ. ಹೇಳಲಸಾಧ್ಯ. ತೆರಿಗೆಯಲ್ಲಂತೂ ಇಳಿಮುಖವಾಗಿದೆ. ಜನರ ಕೈಯಲ್ಲಿ ಹಣ ಹರಿದಾಡಲು ಪೂರಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಆದಾಯ ತೆರಿಗೆಯಲ್ಲಿ ಹೊಸ ಪ್ಲಾನ್‌ ಮತ್ತು ಹಳೆಯ ಪ್ಲಾನ್‌ಗೆ ಅವಕಾಶ ನೀಡಲಾಗಿದೆ.

Advertisement

ಇತ್ತೀಚಿನ ದಿನಗಳಲ್ಲಿ ಭಾರತವು ಯಾವಾಗ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲಿದೆ? ಇನ್ನೆಷ್ಟು ವರ್ಷ ಕಾಯಬೇಕು? ಇದು ಸಾಧ್ಯವೇ? ಈ ಸಾಧನೆಯನ್ನು ತಲುಪಲು ಏನು ಮಾಡಬೇಕು? ಇವತ್ತಿನ ಒಟ್ಟು ಆಂತರಿಕ ಉತ್ಪನ್ನ ದರ (ಸುಮಾರು 4.78% ದರದಲ್ಲಿ) ಈ ಗುರಿ ತಲುಪಬಹುದೇನೋ? ಎಂಬೆಲ್ಲಾ ಚರ್ಚೆಗಳು ಪ್ರತಿನಿತ್ಯ ವ್ಯಾಪಕವಾಗಿ ನಡೆಯುತ್ತಿದೆ.

ಭಾರತದ ಒಟ್ಟು ಆಂತರಿಕ ಉತ್ಪನ್ನ 2018ರ ಕೊನೆಯ 4 ತಿಂಗಳಲ್ಲಿ 8.13% ರಷ್ಟಿತ್ತು. 2019ರ ಕೊನೆಯ 4 ತಿಂಗಳ ಅಂತ್ಯದಲ್ಲಿ ಅಭಿವೃದ್ಧಿ ದರವು 4.55%ಕ್ಕೆ ಇಳಿದಿತ್ತು. ಈ ಇಳಿಕೆಯ ಸಂದರ್ಭದಲ್ಲಿ ಈ ಆಶಾಭಾವನೆ ಕೈಗೂಡುವುದೋ? ಎಂಬ ಆತಂಕ.

1987ರಲ್ಲಿ ಭಾರತದ ಅಭಿವೃದ್ಧಿ ದರವು ಸುಮಾರು 279 ಬಿಲಿಯನ್‌ ಡಾಲರ್‌ನಷ್ಟಿತ್ತು ಮತ್ತು ನಮ್ಮ ಅಭಿವೃದ್ಧಿಯ ದರ ಚೀನಾಕ್ಕಿಂತಲೂ (273 ಬಿಲಿಯನ್‌ ಡಾಲರ್‌) ಹೆಚ್ಚಿತ್ತು. ಚೀನಾಕ್ಕಿಂತಲೂ ಮುಂದಿದ್ದ ನಾವು ಕಳೆದ 31 ವರ್ಷಗಳಲ್ಲಿ ಹಿಂದೆ ಬಿದ್ದಿದ್ದೇವೆ. ಚೀನಾ ದೇಶವು ಕಳೆದ 3 ದಶ ಕ ಗ ಳ ಲ್ಲಿ ತನ್ನ ಅಭಿವೃದ್ಧಿ ದರದಲ್ಲಿ 48.85 ರಷ್ಟು ಪ್ರಮಾಣದಲ್ಲಿ ಬೆಳೆದು ದೊಡ್ಡಣ್ಣ ಅಮೆ ರಿಕಕ್ಕೂ ಆತಂಕ ತರಬಹುದಾದ ಶಕ್ತಿಯಾಗಿ ಹೊರಹೊಮ್ಮಿದೆ. 2018ರ ಲೆಕ್ಕಾಚಾರದ ಪ್ರಕಾರ ಚೀನಾವು 13.7 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಬೆಳೆ ದಿ ದೆ. ಚೀನಾವು 31 ವರ್ಷಗಳಲ್ಲಿ 13.7 ಟ್ರಿಲಿಯನ್‌ನಷ್ಟು ಬೆಳೆದು ಅಭಿವೃದ್ಧಿಯ ಸ್ಥಾನದಲ್ಲಿ 2ನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ ಈ ಸಮಯದಲ್ಲಿ ನಮ್ಮ ದೇಶದ ಅಭಿವೃದ್ಧಿಯ ದರ 8.77ರ ಪ್ರಮಾಣದಲ್ಲಿದೆ.

ಅಮೆರಿಕದ ಅಭಿವೃದ್ಧಿ ದರ 2018ರ ವರ್ಷದಲ್ಲಿ ಸುಮಾರು 20.50 ಟ್ರಿಲಿಯನ್‌ ಡಾಲರ್‌! ಇದು 1987ರಲ್ಲಿ ಕೇವಲ ಡಾಲರ್‌ 4.85 ಲಕ್ಷ ಕೋಟಿ ಗ ಳಷ್ಟೇ ಆಗಿ ತ್ತು. ಈ ಅಂಕಿ ಅಂಶಗಳು ನಾವೆಲ್ಲಿದ್ದೇವೆ! ದೊಡ್ಡಣ್ಣನ ಬೆಳವಣಿಗೆಯ ದರದೆದುರು ನಮ್ಮ ತುಲನೆ ಅಸಾಧ್ಯವೇ ಸರಿ.

Advertisement

ನಮ್ಮ ದೇಶವು ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರ. ಆದರೂ ಈ ಪ್ರಜಾಸತ್ತೆಯ ಲಾಭವನ್ನು “ಆರ್ಥಿಕ ಆಯಾಮ’ದಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ.

ನಮ್ಮಲ್ಲಿ ತೆರಿಗೆಯಿಂದ ಬಂದ ಹಣ ಎಷ್ಟರಮಟ್ಟಿಗೆ ಸದ್ಬಳಕೆಯಾಗಿದೆ? ಎಂಬ ಪ್ರಶ್ನೆ ಒಂದೆಡೆಯಾದರೆ, ದೊಡ್ಡ ದೊಡ್ಡ ಘೊಟಾಲಾಗಳು ಮತ್ತೂಂದೆಡೆ. ಬ್ಯಾಂಕುಗಳ ಅನುತ್ಪಾದಕ ಆಸ್ತಿಯ ಏರಿಕೆಯ ಸಮಸ್ಯೆ ಮಗದೊಂದೆಡೆ. ಹೀಗೆ ನೂರಾರು ತೊಡಕುಗಳು. ದೇಶವು Ease of Doing Business (EoDB) ಸೂಚ್ಯಂಕದಲ್ಲಿ ಉನ್ನತ ಸ್ಥಾನಕ್ಕೆ ಏರಿದರೂ ವಿದೇಶಿ ನೇರ ಬಂಡ ವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಹಿಂದುಳಿದಿದೆ. ಕುಸಿಯುತ್ತಿರುವ ಬೆಳವಣಿಗೆಯನ್ನು ಸರಿದಾರಿಗೆ ತರಲು ಬಜೆಟ್‌ ಮೂಲಕ ಮತ್ತೂಂದು ಪ್ರಯತ್ನ ಮತ್ತು ಈ ಗುರಿ ಸಾಧಿಸಲು ಮಾರ್ಗೋಪಾಯವನ್ನು ಇತ್ತೀಚೆಗೆ ಮಂಡಿಸಿದ ಆಯವ್ಯಯ ಪಟ್ಟಿಯಲ್ಲಿ ಕಂಡುಕೊಂಡಿದೆ.

ಬಜೆಟ್‌ ಒಳ್ಳೆಯದೋ? ಕೆಟ್ಟಧ್ದೋ? ಇದಕ್ಕೆ ಉತ್ತರ ಅವರವರ ಅನುಕೂಲತೆಯನ್ನು ಅವಲಂಬಿಸಿದೆ. ಹೇಳಲಸಾಧ್ಯ. ತೆರಿಗೆಯ ಲ್ಲಂತೂ ಇಳಿಮುಖವಾಗಿದೆ. ಜನರ ಕೈಯಲ್ಲಿ ಹಣ ಹರಿದಾಡಲು ಪೂರಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಆದಾಯ ತೆರಿಗೆಯಲ್ಲಿ ಹೊಸ ಪ್ಲಾನ್‌ ಮತ್ತು ಹಳೆಯ ಪ್ಲಾನ್‌ಗೆ ಅವಕಾಶ ನೀಡಲಾಗಿದೆ. ಹೊಸ ಪ್ಲಾನ್‌ ಪ್ರಕಾರ ರಿಯಾಯಿತಿಗಳು ರದ್ದಾಗಲಿವೆ. ಹಳೆಯದಾದರೆ ಉಳಿತಾಯಕ್ಕೆ ಅವಕಾಶವಿದೆ. ಹಳೆಯದ್ದು ಉಳಿತಾಯಕ್ಕೆ ಹೆಚ್ಚು ಒತ್ತು ಕೊಟ್ಟರೆ ಹೊಸತು ಖರ್ಚಿಗೆ ಒತ್ತು ಕೊಟ್ಟಿದೆ. ಹೊಸ ಪ್ಲಾನಿನೊಂದಿಗೆ ಖರ್ಚಿಗೆ ಒತ್ತು ಕೊಟ್ಟು ಬೇಡಿಕೆಯನ್ನು ಉತ್ತೇಜಿಸುವ ಉದ್ದೇಶ. ಇವತ್ತಿನ ಹಣವನ್ನು ಇವತ್ತೇ ಖರ್ಚು ಮಾಡಬೇಕಾ? ನಾಳೆ ಖರ್ಚು ಮಾಡಬೇಕಾ? ಉಳಿತಾಯಕ್ಕೆ ಹೆಚ್ಚು ಆದ್ಯತೆ ನೀಡುವ ನಾವು ಹಳೆ ಪ್ಲಾನ್‌ಗೆ ಮೊರೆ ಹೋಗುವ ಸಾಧ್ಯತೆ ಜಾಸ್ತಿ.

ಆಯ್ಕೆಯಂತೂ ನಮಗೆ ಬಿಟ್ಟದ್ದು. ಹೆಚ್ಚು ಸಂಬಳ ಪಡೆಯುವವರಿಗೆ ಹೆಚ್ಚು ಅನುಕೂಲವಾಗಲಿದೆ. ರಿಯಾಯಿತಿಗಳ ರದ್ಧತಿಯಿಂದ ತೆರಿಗೆ ಲೆಕ್ಕಾಚಾರ ಸುಲಭ.

ಒಂದಂತೂ ಸ್ಪಷ್ಟ. ದೀರ್ಘಾವಧಿಯಲ್ಲಿ ರಿಯಾಯಿತಿಗಳೆಲ್ಲವೂ ಹೋಗಬಹುದೇನೋ? ಕೃಷಿ ವಲಯಕ್ಕೆ 2.83 ಲಕ್ಷಕೋಟಿ ರೂ.ಗಳಷ್ಟು ದೊರೆಯಲಿದೆ. ಉದ್ಯಮ ವಲಯವನ್ನು ಆದ್ಯತೆಯನ್ನಾಗಿ ಪರಿಗಣಿಸಿದೆ.
ಗ್ರಾಮೀಣ ಕ್ಷೇತ್ರದಲ್ಲಿನ ಹೂಡಿಕೆ ಗ್ರಾಮೀಣ ಜನರ ಜೇಬು ತುಂಬುವ ಸಾಧ್ಯತೆ ಜಾಸ್ತಿ. ಉದ್ಯಮ ಮತ್ತು ವಾಣಿಜ್ಯ ವಲಯಕ್ಕೆ 27,043 ಕೋಟಿ ರೂಪಾಯಿ ಅನುದಾನ ದೊರೆಯಲಿದೆ. ನಾನಾ ಯೋಜನೆಗಳ ಜೊತೆಗೆ ರಸ್ತೆ, ಸೇತುವೆ, ಮೂಲಭೂತ ಸೌಕರ್ಯಗಳ ಕಡೆಗೂ ಗಮನಹರಿಸಲಾಗಿದೆ. ಸಾರಿಗೆ ಕ್ಷೇತ್ರಕ್ಕೆ 1,55,447 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಕಂಪೆನಿಗಳ ಆದಾಯ ತೆರಿಗೆಯನ್ನು 25ರಿಂದ 15% ಕ್ಕೆ ಇಳಿಸಲಾಗಿದೆ. ಇದು ವಿಶ್ವದಲ್ಲೇ ಅತಿ ಕಡಿಮೆ ತೆರಿಗೆಯಾಗಿದೆ. ಕೆಲ ವರು ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಹಿಂತಿರುಗಿಸದೆ ದೇಶ ಬಿಟ್ಟು ಪರಾರಿಯಾಗುವ ಮೂಲಕ ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಿದ್ದು ನಮಗೆಲ್ಲಾ ಗೊತ್ತಿದ್ದದ್ದೇ. ಈ ಕ್ಷೇತ್ರದಲ್ಲಿ ಹೂಡಿಕೆದಾರರ ಆತ್ಮವಿಶ್ವಾಸ ತುಂಬಲು 1 ಲಕ್ಷ ರೂ. ಡಿಪಾಸಿಟ್‌ ಇನ್ಸೂರೆನ್ಸ್‌ನು° 5 ಲಕ್ಷಕ್ಕೆ ಏರಿಸಲಾಗಿದೆ. ಹಿಂಜರಿಕೆ ಕಾಣುತ್ತಿರುವ ಆರ್ಥಿಕತೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರಗತಿಯ ಹಳಿಗೆ ಏರಿಸುವ ಪ್ರಯತ್ನ ಸಾಗಿದೆ. ಬಜೆಟ್‌ ಪ್ರಕ್ರಿಯೆಯು ಷೇರು ಸೂಚ್ಯಂಕದ ಭಾರಿ ಇಳಿಕೆಯೊಂದಿಗೆ ಸಾಗಿದೆ.

ಪ್ರಗತಿಯ ದರ ಸಾಧಿಸಲು ಬರೀ ಸರಕಾರದ ಪ್ರಯತ್ನವೊಂದೇ ಸಾಲದು. ಈ ಸಾಧನೆಗೆ ನಾವೆಲ್ಲರೂ, ಜೊತೆಗೆ ರಾಜ್ಯ ಸರಕಾರಗಳು, ಸಾರ್ವಜನಿಕ ರಂಗದ ಉದ್ದಿಮೆಗಳು, ಖಾಸಗಿ ಉದ್ದಿಮೆದಾರರು, ಆರ್ಥಿಕ ನೀತಿಯನ್ನು ಸಿದ್ಧ ಪಡಿಸುವ ವರ್ಗ ಈ ಎಲ್ಲಾ ವರ್ಗದ ಜನರು ಸರಕಾರದ ಜತೆ ಕೈ ಜೋಡಿಸುವ ಅನಿವಾರ್ಯತೆ ಇದೆ.

ಇದಕ್ಕಿಂತಲೂ ಹೆಚ್ಚು ನಾವೆಲ್ಲರೂ ಆದಾಯವನ್ನು ಉಳಿಸಿ, ಉತ್ಪಾದಕತೆಯ ಸರಕುಗಳಿಗೆ, ಕ್ಷೇತ್ರದಲ್ಲಿ ಬಳಸುವ ಮೂಲಕ ಈ ಡಾಲರ್‌ 5 ಟ್ರಿಲಿಯನ್‌ ಆರ್ಥಿಕತೆಯ ಕನಸನ್ನು ನನಸು ಮಾಡಬೇಕಾಗಿದೆ. ಅಭಿವೃದ್ಧಿ ದರದಲ್ಲಿ ನಮ್ಮ ಹಿಂದಿದ್ದ ಚೀನಾವು ಬಹಳ ಮುಂದೆ ಸಾಗಿದೆ. ಮತ್ತೂಮ್ಮೆ ಚೀನಾವನ್ನು ಹಿಂದಿಕ್ಕುವ ಗುರಿ ನಮ್ಮದಾಗಬೇಕು.

– ರಾಘವೇಂದ್ರ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next