Advertisement

ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ವೇತನ ಭಾರೀ ಹೆಚ್ಚಳ

06:00 AM Feb 02, 2018 | Harsha Rao |

ಹನ್ನೆರಡು ವರ್ಷಗಳ ಬಳಿಕ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನ ಪರಿಷ್ಕರಿಸಲಾಗಿದ್ದು, ಭಾರೀ ಪ್ರಮಾಣದಲ್ಲಿ ಏರಿಸಲಾಗಿದೆ.

Advertisement

ಮಾಸಿಕ ರಾಷ್ಟ್ರಪತಿಗಳಿಗೆ 5 ಲಕ್ಷ ರೂ., ಉಪ ರಾಷ್ಟ್ರಪತಿಗಳಿಗೆ 4 ಲಕ್ಷ ರೂ. ಮತ್ತು ರಾಜ್ಯಪಾಲರಿಗೆ 3.5 ಲಕ್ಷ ರೂ. ವೇತನ ನಿಗದಿಪಡಿಸಲಾಗಿದೆ. ಈ ಹಿಂದೆ 2006ರ ಜ. 1ರಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನ ಹೆಚ್ಚಿಸಲಾಗಿತ್ತು. ಕ್ರಮವಾಗಿ ಮಾಸಿಕ 1.5 ಲಕ್ಷ ರೂ., 1.25 ಲಕ್ಷ ರೂ. ಹಾಗೂ ರಾಜ್ಯಪಾಲರಿಗೆ 1.1 ಲಕ್ಷ ರೂ. ನಿಗದಿಪಡಿಸಲಾಗಿತ್ತು. ರಾಷ್ಟ್ರದ ಸಾಂವಿಧಾನಿಕ ಮುಖ್ಯಸ್ಥರಾಗಿದ್ದರೂ ಇವರ ವೇತನ ಹಿರಿಯ ಐಎಎಸ್‌ ಅಧಿಕಾರಿಗಳಿಗಿಂತ ಕಡಿಮೆ ಇದ್ದು, ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು.

7ನೇ ಹಣಕಾಸು ಆಯೋಗದ ವರದಿ ಜಾರಿ ಬಳಿಕ ಕೇಂದ್ರ ಸಂಪುಟ ಕಾರ್ಯದರ್ಶಿ ವೇತನ ಮಾಸಿಕ 2.5 ಲಕ್ಷ ರೂ. ಇದ್ದರೆ, ಕೇಂದ್ರ ಸರಕಾರದ ಕಾರ್ಯದರ್ಶಿಗಳ ವೇತನ 2.25 ಲಕ್ಷ ರೂ. ಇದೆ.  ಅಷ್ಟೇ ಅಲ್ಲ, ರಾಷ್ಟ್ರಪತಿಗಳು ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸರ್ವೋಚ್ಚ ಮುಖ್ಯಸ್ಥರಾಗಿದ್ದರೂ ಮೂರೂ ಸೇನಾಪಡೆಗಳ ಮುಖ್ಯಸ್ಥರಿಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ. ಸೇನಾಪಡೆಗಳ ಮುಖ್ಯಸ್ಥರ ವೇತನ ಸಂಪುಟ ಕಾರ್ಯದರ್ಶಿ ವೇತನಕ್ಕೆ ಸಮನಾಗಿದೆ. ಈಗ ರಾಷ್ಟ್ರಪತಿಗಳ ವೇತನ 5 ಲಕ್ಷ ರೂ., ಉಪರಾಷ್ಟ್ರಪತಿ ವೇತನ 4 ಲಕ್ಷ ರೂ. ಮತ್ತು ರಾಜ್ಯಪಾಲರ ವೇತನ 3.5 ಲಕ್ಷ ರೂ.ಗೆ ಏರಿಕೆಯಾಗಿರುವುದರಿಂದ ಹಿರಿಯ ಅಧಿಕಾರಿಗಳಿಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂಬ ಕೊರಗು ದೂರವಾದಂತಾಗಿದೆ.

5 ವರ್ಷಕ್ಕೊಮ್ಮೆ ಪರಿಷ್ಕರಣೆ: ಸಂಸದರು ತಮ್ಮ ವೇತನವನ್ನು ತಾವೇ ನಿಗದಿಪಡಿಸುವ ಕುರಿತಂತೆ ಇರುವ ಟೀಕೆಗಳಿಗೆ ತೆರೆ ಎಳೆದಿರುವ ಕೇಂದ್ರ, ಈಗ ಪ್ರತಿ 5 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಗೆ ನಿರ್ಧ ರಿಸಿದೆ. ಈ ವಿಚಾರ ಪ್ರಸ್ತಾವಿಸಿರುವ ಜೇಟಿÉ, ಸಂಸದರ ವೇತನವನ್ನು ಹಣದುಬ್ಬರಕ್ಕೆ ಅನುಗುಣವಾಗಿ ಪರಿಷ್ಕರಿ ಸಲು ಕಾನೂನು ರೂಪಿಸುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next