Advertisement

ಸಾಮಾಜಿಕ ಸ್ವಾಸ್ಥ್ಯಕ್ಕೆ ಬುದ್ದ ಮಾರ್ಗ ಅನಿವಾರ್ಯ

11:06 AM May 16, 2022 | Team Udayavani |

ಕಲಬುರಗಿ: ಈಗಿನ ಸಾಮಾಜಿಕ ಅನಿಷ್ಟಗಳಿಗೆ ಮಹಾತ್ಮಾ ಗೌತಮ ಬುದ್ಧರು ನೀಡಿದ ಚಿಂತನೆಗಳೇ ಚಿಕಿತ್ಸಾ ಮಾರ್ಗ ಕಲ್ಪಿಸುತ್ತದೆ. ಪ್ರಬುದ್ಧ ಭಾರತಕ್ಕೆ ಬುದ್ಧರ ಚಿಂತನೆಗಳ ಅನುಷ್ಠಾನ ಅನಿವಾರ್ಯ ಎಂದು ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಪ್ರತಿಪಾದಿಸಿದರು.

Advertisement

ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಮಹೇಂದ್ರ ಫೌಂಡೇಶನ್‌ ಉದ್ಘಾಟಿಸಿ ಅವರು ಮಾತನಾಡಿದರು.

ರವೀಂದ್ರನಾಥ ಟಾಗೋರ್‌ ಹೇಳಿದಂತೆ ಬೆಂಕಿ ಬಿದ್ದಾಗ ಸಂಗೀತ ನುಡಿಸುವ ಬದಲು ನೀರು ಸುರಿಯುವುದು ಮುಖ್ಯ. ಸಮಾಜದಲ್ಲಿ ಉದ್ಭವಿಸಿರುವ ಸಮಸ್ಯೆಗಳಿಗೆ ಬುದ್ಧ ಮಾರ್ಗದ ಅನುಷ್ಠಾನಕ್ಕೆ ಮುಂದಾಗದೇ ಏನೇ ಮಾಡಿದರೂ ಅಪ್ರಸ್ತುತ ಎನಿಸುತ್ತದೆ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮಹೇಂದ್ರ ಎಂ. ಮುಖ್ಯ ಅತಿಥಿಯಾಗಿ ಮಾತನಾಡಿ, ಧರ್ಮ-ಶಾಸ್ತ್ರಗಳು ಮನುಷ್ಯನನ್ನು ಭಯದಿಂದ ಮುಕ್ತಗೊಳಿಸುವ ಕೆಲಸ ಮಾಡಬೇಕು. ಆದರೆ ಈಗಿನ ಸಾಮಾಜಿಕ ಅನಿಷ್ಠ ಮತ್ತು ಯುದ್ಧಗಳಿಗೆ ಧರ್ಮ- ಶಾಸ್ತ್ರಗಳೇ ಇಂಬು ನೀಡುತ್ತಿವೆ. ಭಾರತದ ಇತಿಹಾಸವನ್ನು ಸುಳ್ಳು ಸುಳ್ಳಾಗಿ ನಿರೂಪಿಸಿದ ಕೆಲವರ ತಪ್ಪಿಗಳಿಂದಾಗಿ ಇಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ| ಚಂದ್ರಶೇಖರ ದೊಡ್ಡಮನಿ ಮಾತನಾಡಿದರು.

Advertisement

ಬಳಿಕ ನಡೆದ ಕವಿಗೋಷ್ಠಿಯಲ್ಲಿ ಸಾಹಿತಿಗಳಾದ ಡಾ| ಶಿವರಂಜನ ಸತ್ಯಂಪೇಟೆ, ಡಾ| ಪಂಡಿತ ಬಿ.ಕೆ. ಪಲ್ಲವಿ ಕಾಂಬ್ಳೆ, ಶಕುಂತಲಾ ಹಡಗಲಿ, ಡಾ| ಕೆ.ಎಸ್‌.ಬಂಧು, ವಿಜಯಕುಮಾರ ರೋಣದ, ಧರ್ಮಣ್ಣ ಎಚ್‌.ಧನ್ನಿ, ಪಿ.ನಂದಕುಮಾರ್‌, ಎಸ್‌. ಎಂ.ಪಟ್ಟಣಕರ್‌, ಎಚ್‌.ಎಸ್‌.ಬೇನಾಳ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಹುಣಸಗಿಯ ಹಿರಿಯ ಉಪನೋಂದಣಾಧಿಕಾರಿ ಯಶವಂತ ಶಿಂಧೆ, ಸಾಹಿತಿಗಳಾದ ಡಾ| ಚಿ.ಸಿ.ನಿಂಗಣ್ಣ ಮುಖ್ಯ ಅತಿಥಿಗಳಾಗಿ ಹಾಗೂ ಪ್ರಾಂಶುಪಾಲ ಬಿ.ಸಿ.ಚವ್ಹಾಣ, ನೌಕರರ ಸಂಘ ಜಿಲ್ಲಾ ಉಪಾಧ್ಯಕ್ಷ ಬಾಬು ಮೌರ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪತ್ರಕರ್ತ ಮಹೇಶ್‌ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಫೌಂಡೇಶನ್‌ ಅಧ್ಯಕ್ಷೆ ಜ್ಯೋತಿ ಚಂದ್ರಶೇಖರ ದೊಡ್ಡಮನಿ, ಎಸ್‌.ಎಂ.ಪಟ್ಟಣಕರ್‌, ಹಿರಿಯ ಪತ್ರಕರ್ತ ಶರಣು ಗೊಬ್ಬೂರ್‌, ಮನೋಹರ ಹಡಗಲಿ, ಸಿದ್ಧಣ್ಣ ಹಾಲಬಾವಿ, ಪರಮೇಶ್ವರ ಪೆಂಚನಕರ್‌, ಬಸವರಾಜ ಶಿವಕೇರಿ, ಗೋವಿಂದರಾವ್‌ ಕುಲಕರ್ಣಿ, ರತನ್‌ ಕುಮಾರ, ದೇವನಗೌಡ ಪಾಟೀಲ್‌, ಬಿ.ಎಸ್‌.ಮಾಲಿಪಾಟೀಲ್‌, ವೈ.ಎಚ್‌.ವಜ್ಜಲ್‌, ಅನಿಲಕುಮಾರ್‌ ಸುಗಂ , ಅಜಯ ಮಡಪೆ ಹಾಗೂ ಇತರರು ಇದ್ದರು. ಡಾ| ಸಂತೋಷ ಕುಮಾರ ಕಂಬಾರ ನಿರೂಪಿಸಿದರು. ಫೌಂಡೇಶನ್‌ ಕಾರ್ಯದರ್ಶಿ ಶರಣಬಸವ ಹೆಗಡೆ ಸ್ವಾಗತಿಸಿದರು. ಸತೀಶ್‌ ಸಜ್ಜನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next