ತನ್ನನ್ನು ತಾನು ಕಳೆದುಕೊಳ್ಳುವ ಮೊದಲೇ ತನ್ನ ಬಗ್ಗೆ ತಿಳಿದುಕೊಳ್ಳಲು ಯತ್ನಿಸುವವನು ಸದಾ ಹುಡುಕುತ್ತಲೇ ಇರುತ್ತಾನೆ. ತಾನು ಯಾರು, ಈ ಭುವಿಯಲ್ಲಿ ತಾನೇಕೆ ಜನಿಸಿದೆ, ತನ್ನ ಅಸ್ತಿತ್ವದ ಅಂತರಂಗವೇನು, ಈ ಮಹಾನ್ ವಿಶ್ವಕ್ಕೆ ತಾನೇನು ಕೊಡಬಲ್ಲೆ, ಜನನ- ಮರಣದ ಅಂತರದ ಅರ್ಥವೇನು, ಮರಣದ ಅನಂತರ ತನ್ನ ಯಾನ ಯಾವ ಕಡೆಗೆ? ಇಂತಹ ಸಾವಿರಾರು ಜಿಜ್ಞಾಸೆಗಳಿಗೆ ತನ್ನನ್ನು ಒಡ್ಡಿ ಕೊಳ್ಳುತ್ತಾ ಅನ್ವೇಷಿಸುವವನೇ ಎಲ್ಲವೂ ಇದ್ದರೂ ಇಲ್ಲದಂತೆ ಬೇಕಾದುದೂ (?) ಬೇಡದಂತೆ ಶೂನ್ಯದತ್ತ ಸಾಗಬಲ್ಲ. ಸಾಗುತ್ತಾ ಮಾಗಬಲ್ಲ. ಈ ರೀತಿ ಕಪಿಲವಸ್ತುವಿನ ಅರಮನೆ ತೊರೆದು ಪಕ್ವವಾದ ಅರಸು ಕುಮಾರನೇ ಸಿದ್ಧಾರ್ಥ. 29 ವರ್ಷಗಳ ಕಾಲ ಬಾಹ್ಯ ಪ್ರಪಂಚದ ಅರಿವಿಲ್ಲದೆ ಜೀವನ ಕಳೆದು ಅನಂತರ ಹೊರ ಜಗತ್ತನ್ನು ಪ್ರವೇಶಿಸಿದ ಸಿದ್ಧಾರ್ಥ ವೃದ್ಧ, ರೋಗಿ, ಶವಗಳನ್ನು ಕಂಡು ಮುಂದೆ ತನಗೂ ಪ್ರಾಪ್ತಿ ಇಷ್ಟೇ ತಾನೇ? ದುಃಖ, ದುಮ್ಮಾನ, ರೋಗ, ದಾರಿದ್ರé, ಸಾವು- ನೋವು ಇದರ ಕೊನೆಯೆಲ್ಲಿ? ಜೀವನದ ಅಂತಿಮ ಸತ್ಯ ಇದೇ ಹೌದಾದರೆ ಐಷಾರಾಮ, ಭೋಗ, ಲಾಲಸೆ, ಅಧಿಕಾರ ಇವುಗಳ ಮರ್ಮವೇನು? ಯಾವುದು ಸತ್ಯ? ಹುಡುಕಬೇಕು, ಅರಿಯಬೇಕು. ಬೆಳೆದು ನಿಂತ ಜಿಜ್ಞಾಸೆ ವೈರಾಗ್ಯದ ಮಜಲು ಏರಲು ಹೆಚ್ಚು ಕಾಲ ಬೇಕಾಗಲಿಲ್ಲ. ಅಂಧಃಕಾರದಿಂದ ಚೇತನದತ್ತ ದಾಪುಗಾಲಿರಿಸುತ್ತಾ ನಡೆದೇ ಬಿಟ್ಟ. ಮೊದಲು ಶೂನ್ಯದತ್ತ, ಅನಂತರ ಪೂರ್ಣದತ್ತ.
“ಪೂರ್ಣಸ್ಯ ಪೂರ್ಣಮಾದಾಯ ಪೂರ್ಣ ಮೇವಾವ ಶಿಷ್ಯತೇ!’ ಎಂಬಂತೆ.
ಬೋಧಿ ವೃಕ್ಷದ ಕೆಳಗೆ ಕುಳಿತು ಸಿದ್ಧಾರ್ಥ ಬುದ್ಧನಾದ – ಸಿದ್ಧನಾಗಿ ಸನ್ನದ್ಧನಾದ. ಐಹಿಕ ಅಶುದ್ಧವನ್ನು ತೊಳೆದು ಪರಿ ಶುದ್ಧನಾದ. ರಾಜ ಶುದೊœàದನನಿಗೆ ಜೋತಿಷಿಗಳು ನುಡಿದ ಮಾತು ಸತ್ಯವಾಯಿತು. “ನಿನ್ನ ಜಾತಕದಲ್ಲಿ ಸನ್ಯಾಸ ಯೋಗ ವಿದೆ. ಜಾಗ್ರತೆ’. ವೇಳೆ ಮೀರಿತ್ತು.
“ಲಲಾಟ ಲಿಖೀತಾ ರೇಖಾ ಪರಿಮಾಶ್ಯಂ ನಃ ಶಕ್ಯತೇ!’
ವಿಧಿ ಬರಹವನ್ನು ಅಳಿಸಲು ಸಾಧ್ಯವೇ?
ಮಹಾವಿರಾಗಿಯ ಅಷ್ಟಾಂಗಿಕ ಉಪದೇಶಗಳು: ಭಗವಾನ್ ಬುದ್ಧನ ವೈರಾಗ್ಯವು ಜೀವ ವೈರಾಗ್ಯವಾಗಿರಲಿಲ್ಲ. ಅಭಾವ ವೈರಾಗ್ಯವೂ ಆಗಿರಲಿಲ್ಲ. ಅಪರೋಕ್ಷ ಮಹಾ ಜ್ಞಾನ ವೈರಾಗ್ಯವಾಗಿತ್ತು. ರಾಜವಂಶದ ಐಷಾರಾಮದ ಹೊಸ್ತಿಲು ದಾಟಿ ಮೆಟ್ಟಲು ಇಳಿದ ಮೇಲೆ ಮತ್ತೆ ಏರಿದ್ದು ಜ್ಞಾನದ ಪಾವಟಿಗೆ. ಧರಿಸಿದ್ದು ವೈರಾಗ್ಯದ ಪಾದುಕೆ. ಸೇವಿಸಿದ್ದು ಸತ್ಯ ಜ್ಞಾನ ರಹಸ್ಯದ ಭಿಕ್ಷಾನ್ನ! ಪರಿಣಾಮ ತನ್ನ ಸಚ್ಚ ಸಂಯುಕ್ತದಲ್ಲಿ ನಿರೂಪಿಸಲ್ಪಟ್ಟ 131 ಸೂತ್ರಗಳ ಅನಾವರಣ. ಪಂಚ ಆರ್ಯ ತಣ್ತೀಗಳ ಪ್ರದೀಪನ. ಅಹಿಂಸಾ, ಅಸ್ತೇಯ, ಸತ್ಯ, ಅವ್ಯಭಿಚಾರ. ಅಪೇಯ ಎಂಬ ಅಪೌರುಷೇಯ ಆರ್ಯ ತತ್ತÌಗಳ ಮೃಷ್ಟಾನ್ನವನ್ನು ಭಿಕ್ಷುಗಳಿಗೆ ಉಣಬಡಿಸಿ ಅನಂತರ ಪ್ರಪಂಚಕ್ಕೆ ಪಸರಿಸಿದ ರೀತಿ ಅತ್ಯಪೂರ್ವ. “ಬುದ್ಧಂ ಶರಣಂ ಗಚ್ಛಾಮಿ, ಸಂಗಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ’ ಭಿಕ್ಷು ಘೋಷಗಳು ರಣದುಂಧುಬಿಯಂತೆ. ಚೀನ, ಜಪಾನ್, ಶ್ರೀಲಂಕಾ, ತೈವಾನ್, ಬಲೂಚಿಸ್ಥಾನ್‌ನಂತಹ ಪುರೋಗಾಮ ರಾಷ್ಟ್ರಗಳಲ್ಲಿ ಮೊಳಗಿದುದು. “ಹ್ಯೂಯೆನ್ ತ್ಸಾಂಗ್’ ಎಂಬ ಮಹಾಯಾತ್ರಿಕನು ನುಡಿದಂತೆ ನಿಜವಾದ ಏಷ್ಯಾದ ಬೆಳಕು ಫ್ಲೇಟೋ ಅಲ್ಲ. ಭಗವಾನ್ ಬುದ್ಧ! ಎಂಬ ಸತ್ಯ ವಾಕ್ಯದ ಹಿಂದಿನ ಮಹಾಮರ್ಮ – ಧರ್ಮ.
ಗೌತಮ ಬುದ್ಧನ ಆರ್ಯ ಅಷ್ಟಾಂಗಿಕ ಮಾರ್ಗ: ಗೌತಮ ಬುದ್ಧನು ಜಗತ್ತಿಗೆ ಸಾರಿದ ಆರ್ಯ ಅಷ್ಟಾಂಗಿಕ ಮಾರ್ಗವು ವೇದೋಪನಿಷತ್ ಸಮಾನ ಎಂಬ ಅನಿಸಿಕೆ ಇದೆ. ಜಗತ್ತಿನಲ್ಲಿ ದುಃಖವು ತುಂಬಿದೆ ಇದರ ಮೂಲ ಸ್ವಾರ್ಥ ಮತ್ತು ಕಾಮನೆ. ಇದರಿಂದ ಮುಕ್ತರಾಗಿ ವಿಶ್ವಪ್ರೇಮ ವನ್ನು ಬೆಳೆಸಿಕೊಳ್ಳಬೇಕು. ಇದು “ಸಮ್ಯಕ್ ದೃಷ್ಟಿ’ ಎಂಬ ಮೊದಲ ತಣ್ತೀ. ಎರಡನೆಯದು ಸಮ್ಯಕ್ ಸಂಕಲ್ಪ. “ಲೋಕಾಃ ಸಮಸ್ತ ಸುಖೀನೋ ಭವಂತು’ ಎಂಬಂತೆ ಎಲ್ಲರಿಗೂ ಒಳಿತನ್ನು ಬಯಸುವುದು.
“ಸಮ್ಯಕ್ ವಾಚಾ’ ಅಂದರೆ ಸದಾ ಮಧುರವಾದ ನಡೆ ಮತ್ತು ನುಡಿಯೊಂದಿಗೆ ಜೀವಿಸುವುದು. ಕಳವು, ವ್ಯಭಿಚಾರ, ದುಷ್ಕೃತ್ಯ, ಮೋಸ, ಪ್ರಾಣಹಾನಿಗಳಿಂದ ಅತೀತವಾದ ಬದುಕನ್ನು ನಡೆಸುವುದೇ “ಸಮ್ಯಕ್ ಕರ್ಮಾಂತ’. ಅನ್ಯರನ್ನು ವಂಚಿಸದೆ ಪ್ರಾಮಾಣಿಕವಾಗಿ ಶುದ್ಧಕರ್ಮದಿಂದ ಬಾಳುವುದು “ಸಮ್ಯಕ್ ಅಜೀವಿಕೆ’. ತನ್ನ ಬಗ್ಗೆ ಕೀಳರಿಮೆ ಇಲ್ಲದೆ ತನ್ನಿಂದ ಸಾಧ್ಯವಿದೆ ಎಂಬ ಉದಾತ್ತತೆಯಿಂದ ದುಡಿಯುವುದು. “ಸಮ್ಯಕ್ ವ್ಯಾಯಾಮ’. ಸದಾ ಕಾಲ ಒಳ್ಳೆಯ ಅಧ್ಯಯನ, ಜ್ಞಾನದಾಹ, ಅವಿಷ್ಕಾರ ಭಾವದಿಂದಿರುವುದು. “ಸಮ್ಯಕ್ ಸ್ಮತಿ’ ಎಂದೆನಿಸಿದರೆ, ಕೊನೆಯದಾದ “ಸಮ್ಯಕ್ ಶಾಂತಿ’ ಎನ್ನುವುದು ಮನೋನಿಗ್ರಹ ತಪಶ್ಚರ್ಯೆ. ವಿಭೂತಿ ಪೌರುಷತ್ವಗಳ ವಿಚಾರಗಳನ್ನು ಹೊಂದಿದೆ. ಈ ರೀತಿಯ ಆರ್ಯ ಅಷ್ಟಾಂಗಿಕ ಮಾರ್ಗ ಮತ್ತು ಯೋಗದ ಮೂಲಕ ಗೌತಮ ಬುದ್ಧ ವಿಶ್ವಕ್ಕೆ ಸಲ್ಲಿಸಿದ ಆಧ್ಯಾತ್ಮಿಕ ಕೊಡುಗೆ ಅತ್ಯಪೂರ್ವವಾದುದು.
ಬಲಿಗಾಗಿ ಪ್ರಾಣಿ ವಧೆಯ ಸಂದರ್ಭದಲ್ಲಿ ಗೌತಮ ಬುದ್ಧನು ನುಡಿದ ಒಂದು ವಾಕ್ಯ ಅಹಿಂಸೆಗಾಗಿ ನೀಡಿದ ಮಹಾನ್ ಸಂದೇಶವೆನಿಸಿದೆ.
“ನಿಮ್ಮಲ್ಲಾರಿಗಾದರೂ ಒಂದು ಕೀಟವನ್ನಾದರೂ ಬದುಕಿ ಸುವ ಶಕ್ತಿ ಇದೆಯೇ? ಜೀವ ನೀಡುವ ಸಾಮರ್ಥ್ಯ ಇದ್ದವರು ಮಾತ್ರ ಜೀವ ತೆಗೆಯಬಲ್ಲರು. ದೇವರೆಂದೂ ಬಲಿ ಕೇಳು ವುದಿಲ್ಲ. ತಾಯಿ ಮಕ್ಕಳ ರಕ್ತ ಹೀರುವುದಿಲ್ಲ’ ಎಂತಹ ಉದಾತ್ತ ಬೋಧನೆ.
“ಸಾವಿಲ್ಲದ ಮನೆಯಿಂದ ಒಂದು ಮುಷ್ಟಿ ಸಾಸಿವೆ ತಾ, ನಿನ್ನ ಮಡಿದ ಮಗನನ್ನು ಬದುಕಿಸುವೆ’ ಎಂಬ “ವಿಶ್ವವಾಣಿ’ ಎಂತಹ ಅಪೂರ್ವ ಉಪನಿಷತ್ ಧಾರೆ!
ಭಗವಾನ್ ಗೌತಮ ಬುದ್ಧನ ತತ್ತಾÌದರ್ಶಗಳ ಪಾಲನೆಯಿಂದ ಬಹುಶಃ ವಿಶ್ವದ ಅಶಾಂತಿ, ಅರಾಜಕತೆಗಳು ಮಾಯವಾಗಿ ನೆಮ್ಮದಿಯ ಬದುಕು ಪ್ರಾಪ್ತವಾದೀತೇನೋ?
– ಮೋಹನದಾಸ ಸುರತ್ಕಲ್