Advertisement

ಮೋಕ್ಷದೆಡೆಗೆ ಸಾಗಿಸಬಲ್ಲವನು ಬುದ್ಧ : ಗೌತಮ್‌ ಪೈ

09:12 AM Dec 11, 2017 | |

ಉಡುಪಿ: ಮುನಿಯಾಲು ಆಯುರ್ವೇದ ಸಂಸ್ಥೆಯ ಅಧ್ಯಕ್ಷ ಡಾ| ಎಂ. ವಿಜಯಭಾನು ಶೆಟ್ಟಿ ಕನ್ನಡದಲ್ಲಿ ಬರೆದ “ಧಮ್ಮಪದ’ ಮತ್ತು ಬುದ್ಧನ ಕಾಲದಲ್ಲಿ ಉಚ್ಛಾಯ ಸ್ಥಿತಿಯಲ್ಲಿದ್ದ ಆಯುರ್ವೇದದ ಬಗ್ಗೆ ತಿಳಿಸುವ “ಬುದ್ಧಾಯುರ್ವೇದದ ಟಿಪ್ಪಣಿ’ ಹಾಗೂ ಡಾ| ಶ್ರದ್ಧಾ ಶೆಟ್ಟಿ ಅವರು ಬರೆದ ಧಮ್ಮಪದದ ಇಂಗ್ಲಿಷ್‌ ಅವತರಣಿಕೆಗಳನ್ನು ಮಣಿಪಾಲ್‌ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಟಿ. ಗೌತಮ್‌ ಪೈ ಬಿಡುಗಡೆ ಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

“ಬುದ್ಧ’ ಪರಮ ಶ್ರೇಷ್ಠ  ಗುರು
ಬುದ್ಧನ ಅನುಯಾಯಿಗಳಿಗೆ ಬುದ್ಧನೊಬ್ಬ ದೇವರೂ ಅಲ್ಲ, ದೇವ ದೂತನೂ ಅಲ್ಲ, ಅವತಾರ ಪುರುಷನೂ ಅಲ್ಲ. ಬುದ್ಧನು ಆಧ್ಯಾತ್ಮಿಕ ಜೀವನದ ಅತ್ಯುನ್ನತ ಮಟ್ಟವನ್ನು ತಲುಪಿ, ಗುರುವಿನ ಸಹಾಯವಿಲ್ಲದೆ ಸ್ವಪ್ರಯತ್ನ ದಿಂದ ಪ್ರಕೃತಿ ನಿಯಮವನ್ನು ಅದರ ಎಲ್ಲ ಆಯಾಮಗಳೊಂದಿಗೆ ಪರಿಪೂರ್ಣ ವಾಗಿ ಅರಿತುಕೊಂಡವ. ಆತನು ಸಕಲ ಜೀವರಾಶಿಗಳನ್ನು ಧರ್ಮ ಮಾರ್ಗದಲ್ಲಿ ನಡೆಸಿ ನಿರ್ವಾಣ ದೆಡೆಗೆ ಸಾಗಿಸಬಲ್ಲ ಶ್ರೇಷ್ಠ ಗುರು.

“ಅವಿದ್ಯೆ’ ನಿವಾರಣೆಗೆ ಧಮ್ಮಪದ
ಧಮ್ಮಪದವನ್ನು ಬುದ್ಧನ ಅನುಯಾ ಯಿಗಳು ಬುದ್ಧನ ಉಪ ದೇಶದ ಸಾರಾಂಶವೆಂದೇ ಪರಿಗಣಿಸುತ್ತಾರೆ. ಬುದ್ಧನ ನಲುವತ್ತೈದು ವರ್ಷಗಳ ಉಪದೇಶ ವನ್ನು ಜೀವನದಲ್ಲಿ ಒಮ್ಮೆ ಯಾ ದರೂ ಓದಿದರೆ ಬದುಕು ಸಾರ್ಥಕ ವಾಗುತ್ತದೆ. ಏಕೆಂದರೆ “ಪರಿಯತ್ತಿ’ ಅಂದರೆ ಜ್ಞಾನೋದಯ ಹೊಂದಿದ ಸಮ್ಮಾಸಂಬುದ್ಧನು ವಿಷದ ಪಡಿಸಿದ ವಿಚಾರಗಳನ್ನು ತಿಳಿದು ಕೊಳ್ಳುವುದು ಆಧ್ಯಾತ್ಮಿಕ ಜೀವನದ ಪ್ರಗತಿಯ ತಳಪಾಯ. ಆ ವಿಚಾರ ಗಳು ತಿಳಿದ ಅನಂತರವಷ್ಟೇ “ಪತಿಪತ್ತಿ’ ಅಂದರೆ ಅವುಗಳನ್ನು ಜೀವನ ದಲ್ಲಿ ಆಚರಣೆಗೆ ತರಲು ಸಾಧ್ಯ. ಜೀವನದಲ್ಲಿ ಅಳವಡಿಸಿಕೊಂಡ ಬಳಿಕವಷ್ಟೇ “ಪತಿವೇದ’ ಅಂದರೆ ಅವುಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ. ಹಾಗಾಗಿ ಯಾರಿಗೆ ಬುದ್ಧನ ಸಂಪೂರ್ಣ ಉಪದೇಶವನ್ನು ಓದಲು ಸಾಧ್ಯವಾಗಿಲ್ಲವೋ ಅವರು ಕೊನೆಯ ಪಕ್ಷ ಧಮ್ಮಪದವನ್ನಾದರೂ ಓದುವು ದರಿಂದ ತಮ್ಮ “ಅವಿದ್ಯೆ’ ನಿವಾರಣೆ ಸಾಧ್ಯ ಎನ್ನುವ ಅಭಿಮತವಿದೆ. ಹಾಗಾಗಿ ಪ್ರತಿಯೊಬ್ಬನೂ ತನ್ನ ದಿನಚರಿ   ಯಲ್ಲಿ ಧಮ್ಮಪದ ಪಠನವನ್ನು ಅಭ್ಯಾಸ ಮಾಡಿಕೊಂಡರೆ ತನ್ನನ್ನು ತಾನು ಉದ್ಧರಿಸಿಕೊಂಡಂತೆ.

ಧಮ್ಮಪದದ ತ್ರಿವಿಧ ಸಹಾಯ
ಧಮ್ಮಪದವು ಜೀವಿಯನ್ನು ಉದ್ಧರಿ ಸುವಲ್ಲಿ ಮೂರು ವಿಧವಾಗಿ ಸಹಾಯ ಮಾಡುತ್ತದೆ. ಅವು ಯಾವುದೆಂದರೆ- ಜೀವಿಗಳ ವರ್ತಮಾನ ಕಾಲದ ನಡತೆ ಯನ್ನು ಪರಿಶುದ್ಧ ಗೊಳಿಸಿ ಜೀವನದ ನೈಜ ಸುಖದ ಪರಿಚಯ ಮಾಡಿಸುತ್ತದೆ, ಅದರಿಂದಾಗಿ ಭವಿಷ್ಯದಲ್ಲಿ ಒಳ್ಳೆಯ ಜನ್ಮವನ್ನು ಪಡೆಯುವಂತಾಗಿ ಜೀವನದ ಅತ್ಯುನ್ನತ ಗುರಿಯಾದ ನಿರ್ವಾಣದೆಡೆಗೆ ಸಾಗುವುದು ಸಾಧ್ಯ ವಾಗುತ್ತದೆ. ಕೊನೆಗೆ ಜೀವಿಯ ಅಂತಿಮ ಗುರಿಯಾದ ಜ್ಞಾನೋದಯ ವನ್ನು ಹೊಂದಲು ಸಹಕರಿಸುತ್ತದೆ.

“ಆಧುನಿಕ ಯುಗದ ವೈಜ್ಞಾನಿಕ ಮನೋ ಭಾವವನ್ನು ಹೊಂದಿರುವ ಇಂದಿನ ಪೀಳಿಗೆಗೆ ಸಾರ್ವತ್ರಿಕವಾಗಿ ಹಾಗೂ ಸಂಪೂರ್ಣವಾಗಿ ಮನ ದಟ್ಟಾಗಬಹುದಾದ ಧರ್ಮವೊಂದಿದ್ದರೆ ಅದು ನಿಸ್ಸಂಶಯ ವಾಗಿಯೂ ಭಗವಾನ್‌ಬುದ್ಧನು ಅರುಹಿದ ಧಮ್ಮ’ ಎನ್ನುವ ಆಲ್ಬರ್ಟ್‌ ಐನ್‌ಸ್ಟೈನ್‌ಹೇಳಿಕೆಯನ್ನು ನೆನಪಿಸುತ್ತಾ, ಇಂದಿನ ಪ್ರಕ್ಷುಬ್ಧ ವಾತಾವರಣದಲ್ಲಿ ಧರ್ಮವೆಂದರೆ ಜಾತಿಯಲ್ಲ, ಅದು ಪ್ರಕೃತಿಯ ನಿಯಮ ಎಂದು ಸಾರುವ ಧಮ್ಮಪದ ಅತ್ಯಂತ ಪ್ರಸ್ತುತವೆಂದು ಗೌತಮ್‌ ಪೈ ಅಭಿಪ್ರಾಯಪಟ್ಟರು.

Advertisement

ಈ ಪುಸ್ತಕವು ಎಲ್ಲ ಮುನಿಯಾಲು ಆಯುರ್ವೇದ ಚಿಕಿತ್ಸಾ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುವುದು ಹಾಗೂ www.muniyalayurveda.inನಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ವಿಜಯಭಾನು ಶೆಟ್ಟಿ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next