Advertisement
ಈ ಕುರಿತು ನೂತನ ಕಚೇರಿಯಲ್ಲಿ ಬುಡಾ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ ಅವರು ಪತ್ರಕರ್ತರ ಜತೆ ಮಾತನಾಡಿ, ಕಳೆದ 2 ವರ್ಷಗಳ ಹಿಂದೆ ಬಿ.ಸಿ.ರೋಡ್‌ನ ಪುರಸಭೆ ಕಟ್ಟಡದಲ್ಲಿ ಬುಡಾ ಕಚೇರಿ ಉದ್ಘಾಟನೆಗೊಂಡಿದ್ದರೂ ಪೂರ್ಣ ಪ್ರಮಾಣದ ಕಚೇರಿ ಸ್ಥಳಾಂತರ ಗೊಂಡಿರಲಿಲ್ಲ. ಕಳೆದ ಮಾರ್ಚ್ ತಿಂಗಳಲ್ಲಿ ಸರಕಾರ ಬುಡಾಕ್ಕೆ ತನ್ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಿದ ಸಂದರ್ಭದಲ್ಲಿ ಈ ಕಟ್ಟಡದಲ್ಲೇ ತಾನು ಅಧಿಕಾರ ಸ್ವೀಕರಿಸಿದ್ದೆ. ಪ್ರಸ್ತುತ ಕೋವಿಡ್ ಲಾಕ್‌ಡೌನ್ ಬಳಿಕ ಜೂ. 15ರಿಂದ ಪೂರ್ಣ ಪ್ರಮಾಣದ ಕಚೇರಿ ಸ್ಥಳಾಂತರಗೊಂಡಿದೆ.
ತಾನು ಹಾಗೂ ಬುಡಾ ಸದಸ್ಯ ಕಾರ್ಯದರ್ಶಿಯವರು ಸಭೆಯಲ್ಲಿ ಭಾಗವಹಿಸಿ ಯೋಜನಾ ಪ್ರಾಧಿಕಾರದಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಕೂಡ ಚರ್ಚಿಸಿ, ಅದಕ್ಕೂ ಪರಿಹಾರ ಕಲ್ಪಿಸುವ ಭರವಸೆ ಸಿಕ್ಕಿದೆ. ಮುಂದೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಬುಡಾ ಕಾರ್ಯನಿರ್ವಹಿಸಲಿದೆ ಎಂದು ದೇವದಾಸ್ ಶೆಟ್ಟಿ ತಿಳಿಸಿದರು.
Related Articles
ಜೂ. 19ರಂದು ಬೆಂಗಳೂರಿನಲ್ಲಿ ಸಚಿವರು ಹಾಗೂ ಜಿಲ್ಲೆಯ ಶಾಸಕರ ಉಪಸ್ಥಿತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸಭೆ ನಡೆದಿದ್ದು, ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಮೂಲಕ ತುಂಡು ಭೂಮಿಯ ಪರಿವರ್ತನೆ (ಸಿಂಗಲ್ ಲೇಔಟ್) ಏರಿಕೆಯಾದ ಅಭಿವೃದ್ಧಿ ಶುಲ್ಕವನ್ನು ಕಡಿಮೆ ಮಾಡುವ ಕುರಿತು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದ್ದು, ಒಂದು ತಿಂಗಳೊಳಗೆ ಅದಕ್ಕೆ ಪರಿಹಾರ ಸಿಗಲಿದೆ.
Advertisement