Advertisement

ಅನಧಿಕೃತ ಲೇಔಟ್ ವಿರುದ್ಧ ಬುಡಾ ಸಮರ

11:07 AM Sep 24, 2019 | Suhan S |

ಬೆಳಗಾವಿ: ಕುಂದಾನಗರಿ ಬೆಳಗಾವಿ ನಗರ ಸ್ಮಾರ್ಟ್‌ ಸಿಟಿಯ ಪಟ್ಟ ಅಲಂಕರಿಸಿದರೂ ಅನಧಿಕೃತ ಬಡಾವಣೆಗಳ ಭೂತದ ಕಾಟದಿಂದ ಹೊರಬಂದಿಲ್ಲ. ನಗರದಲ್ಲಿ ನಾಯಿ ಕೊಡೆಯಂತೆ ತಲೆ ಎತ್ತುತ್ತಿರುವ ಅನಧಿಕೃತ ಲೇಔಟ್‌ಗಳಿಗೆ ಮೂಗುದಾರ ಹಾಕಿ ಸಮರ ಸಾರಲು ಮುಂದಾಗಿರುವ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಸೋಮವಾರ ಒಂದೇ ದಿನ 21 ಲೇಔಟ್‌ಗಳನ್ನು ತೆರವುಗೊಳಿಸಿದೆ.

Advertisement

ಬುಡಾ ಆಯುಕ್ತ ಪ್ರೀತಮ್‌ ನಸಲಾಪುರೆ  ಅವರನ್ನೊಳಗೊಂಡ ತಂಡ ಸೋಮವಾರ ಬೆಳಗ್ಗೆ ದಾಳಿ ನಡೆಸಿ ಜೆಸಿಬಿ ಮೂಲಕ ಅನಧಿಕೃತ ಲೇಔಟ್‌ಗಳನ್ನು ನೆಲಸಮಗೊಳಿಸಿದೆ. ಇಲ್ಲಿಯ ಗಾಂಧಿನಗರ, ಬಸವನ ಕುಡಚಿ, ವಡಗಾಂವ, ಅನಗೋಳ ಹಾಗೂ ಪೀರನವಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಒಟ್ಟು 21 ಅನಧಿಕೃತ ಲೇಔಟ್‌ಗಳನ್ನು ತೆರವುಗೊಳಿಸಿದೆ.

ದೀಪಕರಾವ ಶ್ರೀಪಾಲ ಪಾಟೀಲ, ಜೀನಪ್ಪ ನೇಮಿನಾಥ ಪಾಟೀಲ, ವಿಘ್ನೇಶ್ವರ ಕೋ ಆಪ್‌ ಸೊಸೈಟಿ, ಸಂಜಯ ಪರಶುರಾಮ ಶಿಂಧೆ, ರವಿ ಪಾಟೀಲ, ಕಿತ್ತೂರ ಅಸೋಸಿಯೇಟ್ಸ್‌, ಯಲ್ಲಪ್ಪ ಪಾಟೀಲ, ಅಸ್ಲಮ ಇಸ್ಮಾಯಿಲ್‌ ಅತ್ತಾರ, ಸುರೇಶ ಬಾಳಪ್ಪ ಗುಂಟಪ್ಪನವರ, ಪುಂಡಲೀಕ ಗೋವಿಂದ ಧಾಮಣೇಕರ, ಗಂಗಾಧರ ಅಜೀತ ಕಳ್ಳಿಮನಿ, ಬಶೀರ ಅಹ್ಮದ ಇಮ್ರಾನ ತಾಶೀಲ್ದಾರ, ಬಂದೇನವಾಜ ಅಬ್ದುಲಸತ್ತಾರ ಬಾಳೇಕುಂದ್ರಿ, ಶ್ರೇಯಸ ಧರ್ಮಪ್ಪ ಕಲಕುಪ್ಪಿ, ಗುಂಡೋಜಿ ಶಿವಾಜಿರಾವ ಹಲಗೇಕರ,ಆದೀಲಬೇಗ್‌ ಅನ್ವರಬೇಗ್‌ ನಿಜಾಮಿ, ಸುಲೇಮಾನ ಅಲ್ಲಾಭಕ್ಷ ಅವಟಿ, ಆನೀಸ್‌ಅಹ್ಮದ ಇಬ್ರಾಹಿಂ ಖೋತವಾಲ, ಮೊಹ್ಮದಸಾಧಿಕ ಅಲ್ಲಾಭಕ್ಷ ಮುಲ್ಲಾ,

ಅಸ್ಲಮ್‌ ಅತ್ತಾರ ಎಂಬವರ ಅನಧಿಕೃತ ಲೇಔಟ್‌ಗಳು ತೆರವುಗೊಂಡಿವೆ. ಈ ಲೇಔಟ್‌ಗಳನ್ನು ಗುರುತಿಸಿ ಅಂಥ ಮಾಲೀಕರಿಗೆ 2-3 ಬಾರಿ ನೋಟಿಸ್‌ಗಳನ್ನು ಕಳುಹಿಸಲಾಗಿತ್ತು. ಆದರೆ ಯಾರೊಬ್ಬರೂ ನೋಟಿಸ್‌ಗೆ ಉತ್ತರ ನೀಡಿರಲಿಲ್ಲ. ಜತೆಗೆ ವಿಚಾರಣೆಗೆ ಕೂಡ ಹಾಜರಾಗಿರಲಿಲ್ಲ. ಹೀಗಾಗಿ ಸರ್ಕಾರದ ನಿಯಮಾವಳಿ ಪ್ರಕಾರ ನಮ್ಮ ಸಿಬ್ಬಂದಿಗಳೊಂದಿಗೆ ಹೋಗಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಬುಡಾ ಆಯುಕ್ತ ಪ್ರೀತಮ್‌ ನಸಲಾಪುರೆ ತಿಳಿಸಿದ್ದಾರೆ.

ಬುಡಾ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಅಧಿಕೃತ ದಾಖಲೆಗಳನ್ನು ಪಡೆದುಕೊಳ್ಳದೇ ಸಿಕ್ಕ ಸಿಕ್ಕಲ್ಲಿ ಜಾಗ ಖರೀದಿಸಿರುವ ಅಕ್ರಮ ಕುಳಗಳು ಲೇಔಟ್‌ಗಳನ್ನು ನಿರ್ಮಿಸಿದ್ದಾರೆ. ಮಾರುಕಟ್ಟೆಯ ದರಕ್ಕಿಂತಲೂ ಕಡಿಮೆ ದರಕ್ಕೆ ಜಾಗ ಮಾರಾಟ ಮಾಡುತ್ತಿದ್ದಾರೆ. ಈ ಆಸೆಗೆ ಬಿದ್ದು ಜನರು ಮುಂಗಡ ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಆದರೆ ಇವು ಅನಧಿಕೃತ ಎಂಬುದು ಸಾರ್ವಜನಿಕರಿಗೆ ಗೊತ್ತಾಗುತ್ತಿಲ್ಲ.

Advertisement

100 ರೂ. ಬಾಂಡ್‌ ಮೇಲೆ ಜಾಗಗಳನ್ನು ಮಾರಾಟ ಮಾಡುವ ಜಾಲ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಬುಡಾ ಆಯುಕ್ತ ಪ್ರೀತಮ್‌ ನಸಲಾಪುರೆ ಅವರು, ಅನಧಿಕೃತ ಲೇಔಟ್‌ಗಳ ಆಸೆಗೆ ಬಿದ್ದು ಜಾಗ ಖರೀದಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರೂ ಜನರು ಎಚ್ಚೆತ್ತುಕೊಂಡಿರಲಿಲ್ಲ ಎಂದು ನಸಲಾಪುರೆ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next