Advertisement
ಹೌದು, ಇಂತಹವೊಂದು ಮಾತು ನಗರದಲ್ಲಿ ಕೇಳಿ ಬರುತ್ತಿದೆ. ಕಳೆದ ಏಳು ತಿಂಗಳಿಂದ ಪ್ರಾಧಿಕಾರದಲ್ಲಿ ಆಡಳಿತ ಮಂಡಳಿಯೇ ಇಲ್ಲ. ಹೀಗಾಗಿ ಸಂತ್ರಸ್ತರು ತಮ್ಮ ಏನೇ ಸಮಸ್ಯೆ ಹಿಡಿದುಕೊಂಡು, ಬಿಟಿಡಿಎ ಕಚೇರಿಗೆ ಹೋದರೂ, ಯಾವ ಅಧಿಕಾರಿ-ಸಿಬ್ಬಂದಿಯೂ ಕೈಗೆ ಸಿಗುತ್ತಿಲ್ಲ. ಡಿ ದರ್ಜೆ ಸಿಬ್ಬಂದಿ ಮಾತ್ರ ಕಚೇರಿಯಲ್ಲಿ ಕಂಡು ಬರುತ್ತಿದ್ದು, ಅವರನ್ನು ಕೇಳಿದರೆ, ಸಾಹೇಬ್ರು ಬಂದಿಲ್ರಿ ಎಂಬ ಮಾತು ದಿನವೂ ಕೇಳಬೇಕಾಗಿದೆ ಎಂಬುದು ಸಂತ್ರಸ್ತರ ಅಸಮಾಧಾನ.
Related Articles
Advertisement
ಐದು ವರ್ಷ ಆದ್ರೂ ಮುಗಿದಿಲ್ಲ: ನವನಗರ ಯೂನಿಟ್-2 ನಿರ್ಮಾಣ, ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿ ಆರಂಭಗೊಂಡು ಬರೋಬ್ಬರಿ ಐದು ವರ್ಷ ಕಳೆದು ಹೋಗಿವೆ. ಸುಮಾರು 552 ಕೋಟಿ ವೆಚ್ಚದ ಈ ಕಾಮಗಾರಿ, ಹುಬ್ಬಳ್ಳಿ ಮೂಲದ ಆರ್‌ಎನ್‌ಎಸ್ ಗುತ್ತಿಗೆ ಕಂಪನಿ (ಕೆಲ ಕಾಮಗಾರಿಗಳು) ಪಡೆದಿದ್ದು, 2013ರಲ್ಲಿ ಭೂಮಿಪೂಜೆಯಾಗಿ ಕಾಮಗಾರಿ ಆರಂಭಗೊಂಡರೂ, ಈ ವರೆಗೆ ಪೂರ್ಣವಾಗಿಲ್ಲ. ಹೀಗಾಗಿ 2ನೇ ಯೂನಿಟ್‌ನಲ್ಲಿ ನಿವೇಶನ ಪಡೆದವರು, ತಕ್ಷಣಕ್ಕೆ ಅಲ್ಲಿಗೆ ಸ್ಥಳಾಂತರಗೊಳ್ಳಲು ಆಗುತ್ತಿಲ್ಲ. ಕೆಲವೇ ಕೆಲವರು, ಸೌಲಭ್ಯಗಳಿಲ್ಲದಿದ್ದರೂ 2ನೇ ಯೂನಿಟ್‌ನಲ್ಲಿ ಮನೆ ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ವಿದ್ಯುತ್, ನೀರು ಪೂರೈಕೆಯಂತಹ ಯಾವ ಸೌಲಭ್ಯಗಳೂ ಇನ್ನೂ ಯೂನಿಟ್-2ಕ್ಕೆ ಕಲ್ಪಿಸಿಲ್ಲ.
3ನೇ ಯೂನಿಟ್ ಆರಂಭವಿಲ್ಲ: ಇನ್ನು 3ನೇ ಹಂತದಲ್ಲಿ ಮುಳುಗಡೆ ಆಗುವ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು 1632 ಎಕರೆ ಭೂಸ್ವಾಧೀನ ಮಾಡಿಕೊಂಡಿದ್ದು, ಕೆಲವು ಪ್ರಕರಣ ಇಂದಿಗೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ. ಇದರಲ್ಲಿ ಈಗಾಗಲೇ ಒಂದಷ್ಟು ಭೂಮಿ ವಶಪಡಿಸಿಕೊಂಡಿದ್ದು, ಇಲ್ಲಿ 3ನೇ ಯೂನಿಟ್ (ಬ್ಲಾಕ್ ಮಾದರಿ) ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. 3ನೇ ಯೂನಿಟ್ ನಿರ್ಮಾಣಕ್ಕೆ 2014ರಿಂದ ನೀಲನಕ್ಷೆ, ಪೂರ್ವ ತಯಾರಿ, ಅನುದಾನ ಲಭ್ಯತೆ ಎಲ್ಲವೂ ನಡೆದರೂ, ಬಿಟಿಡಿಎ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸಂತ್ರಸ್ತರು, ಶಾಶ್ವತ ಪುನರ್‌ವಸತಿಯಿಂದ ದೂರ ಉಳಿಯುವಂತಾಗಿದೆ ಎಂಬ ಮಾತು ಕೇಳಿ ಬಂದಿದೆ.
ನಾವು ಬಿಕಾರಿಗಳಲ್ಲ523 ಮೀಟರ್ ವ್ಯಾಪ್ತಿಯ ಬಾಡಿಗೆದಾರರಿಗೆ ನಿವೇಶನ ಕೊಟ್ಟಿಲ್ಲ. ನಡುಗಡ್ಡೆ ಎಂದು ಘೋಷಣೆ ಮಾಡಿದರೂ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಮನೆ, ಜಾಗೆ ಕೊಟ್ಟು ತ್ಯಾಗ ಮಾಡಿದ ಸಂತ್ರಸ್ತರು ನಿತ್ಯವೂ ಬಿಟಿಡಿಎ ಕಚೇರಿಗೆ ಅಲೆದರೂ ಅಧಿಕಾರಿಗಳು ಗಮನಿಸುತ್ತಿಲ್ಲ. ಸಂತ್ರಸ್ತರನ್ನು, ಅಧಿಕಾರಿಗಳು ಬಿಕಾರಿಗಳಿಂತ ಕಡೆಯಾಗಿ ನೋಡುತ್ತಾರೆ. ಹೀಗಾಗಿ ಸಂತ್ರಸ್ತರ ಸಮಸ್ಯೆ ಚರ್ಚೆಗಾಗಿ ಜ.20ರಂದು, ಸಂಜೆ 5ಕ್ಕೆ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿದೆ.
• ಎ.ಎ. ದಂಡಿಯಾ,
ಉಪಾಧ್ಯಕ್ಷ, ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ •ಶ್ರೀಶೈಲ ಕೆ. ಬಿರಾದಾರ