Advertisement

ಎಪಿಎಂಸಿ ಖಾಸಗೀಕರಣದಲ್ಲೂ ರೈತರ ಹಿತ ಖಚಿತ: ಶಾಸಕ ಮುನವಳ್ಳಿ ಮನವಿಗೆ ಬಿಎಸ್ ವೈ ಸ್ಪಂದನೆ

03:30 PM May 11, 2020 | keerthan |

ಗಂಗಾವತಿ: ರಾಜ್ಯದ ಎಪಿಎಂಸಿಗಳನ್ನು ಖಾಸಗೀಕರಣ ಮಾಡುವ ವಿಶೇಷ ಕಾಯ್ದೆ ಜಾರಿ ತಯಾರಿ ಮಧ್ಯೆ ರೈತರು, ಹಮಾಲಿ‌ ಕಾರ್ಮಿಕರು,‌ ವರ್ತಕರು ಆತಂಕ ಕುರಿತು ಶಾಸಕ ಪರಣ್ಣ ಮುನವಳ್ಳಿ ಮಾಡಿದ ಮನವಿಗೆ ಸಿಎಂ ಯಡಿಯೂರಪ್ಪ ಸ್ಪಂದಿಸಿದ್ದಾರೆ.

Advertisement

ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಕರೆ ಮಾಡಿ ಮಾತನಾಡಿದ ಸಿಎಂ ಬಿಎಸ್ ವೈ, ಎಪಿಎಂಸಿ ನೂತನ ಕಾಯ್ದೆಯಲ್ಲಿ ಕೃಷಿಕರು ಹಮಾಲಿ ಕಾರ್ಮಿಕರು ಮತ್ತು ಗಂಜ್ ಹಮಾಲಿ‌ಕಾರ್ಮಿಕರ ಹಿತ ಕಾಪಾಡಲಾಗಿದೆ. ರೈತರು ಬೆಳೆದ ಬೆಳೆಗೆ ಅಧಿಕ ದರ ಸಿಗಲಿದ್ದು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್-19 ಸಂದರ್ಭದಲ್ಲಿ ರೈತರ ಬೆಳೆ ಬೆಲೆ ಇಲ್ಲದ ಸಂದರ್ಭದಲ್ಲಿ ನೂತನ ಮಾದರಿ ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದು ಹೊಸ ಕಾಯ್ದೆಯಿಂದ ಎಪಿಎಂಸಿ ಅವಲಂಬಿತರು ಶೋಷಣೆಗೆ ಒಳಗಾಗುವುದಿಲ್ಲ ಎಂದು ಸಿಎಂ ಮನವರಿಕೆ ಮಾಡಿದ್ದಾರೆ.

ಎಪಿಎಂಸಿ ಖಾಸಗೀಕರಣ ಕುರಿತು ಶಾಸಕ ಪರಣ್ಣ ಮುನವಳ್ಳಿ ಎಪಿಎಂಸಿ ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದ್ದ ಆತಂಕದ  ಹೇಳಿಕೆಯನ್ನು ಉದಯವಾಣಿ ವೆಬ್ ಸೈಟ್ ಸುದ್ದಿ ಮಾಡಿದ್ದು, ವ್ಯಾಪಕ ಪ್ರಚಾರ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next