ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದು, ‘ಸುಳ್ಳು ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಗುಡುಗಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಶ್ರೀಗಳ ಭೇಟಿ ನಡೆಸಿ ಹೊರಬಂದ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ ‘ಸಿಎಂ ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದು ಸೊಕ್ಕಿನಿಂದ ಮೆರೆಯುತ್ತಿದ್ದಾರೆ’ಎಂದು ಕಿಡಿ ಕಾರಿದರು.
‘ಎಲುಬಿಲ್ಲದ ನಾಲಿಗೆ ಅಂದರೆ ಅದು ಸಿದ್ದರಾಮಯ್ಯರದ್ದು, ಅವರು ಯಾರು ನನ್ನನ್ನು ಜೈಲಿಗೆ ಕಳುಹಿಸಲು’ ಎಂದು ಹರಿಹಾಯ್ದರು.
‘ಪ್ರಧಾನಿ ಮೋದಿ ಅವರಿಗೆ ನನ್ನನ್ನು ಕಂಡರೆ ಭಯವೆಂದು ಹೇಳುತ್ತಾರೆ. ಇದು ಸಿದ್ದರಾಮಯ್ಯ ಅವರ ಮೂರ್ಖತನದ ಪರಮಾವಧಿ’ ಎಂದರು.
‘ಪ್ರಧಾನಿ ಮೋದಿ ಧರ್ಮಸ್ಥಳಕ್ಕೆ ಬಂದಾಗ ಉಪವಾಸವಿದ್ದರು. ಆದರೆ ಈ ಮನುಷ್ಯ ಕೋಳಿ, ಮೀನು ತಿಂದು ಹೋಗಿ ಭಕ್ತರಿಗೆ ಅಪಮಾನ ಮಾಡಿದ್ದಾರೆ. ರಾಜ್ಯಕ್ಕೆ ಇಂತಹ ಸಿಎಂ ಸಿಕ್ಕಿದ್ದಾರಲ್ಲಾ ಎಂದು ನೋವಾಗುತ್ತಿದೆ’ಎಂದರು.