Advertisement
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ರೇಣುಕಾಚಾರ್ಯ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿದ ನಂತರ ಕಾವೇರಿ ನಿವಾಸದ ಬಳಿ ಈ ಹೇಳಿಕೆ ನೀಡಿದ್ದಾರೆ.
Related Articles
Advertisement
ವಾಟಾಳ್ ನಾಗರಾಜ್ ಗೆ ಏಕವಚನದಲ್ಲೇ ಜಾಡಿಸಿದ ರೇಣುಕಾಚಾರ್ಯ, ‘ನಿನ್ನ ಬಾಯಲ್ಲಿ ಒಂದಾದರೂ ಒಳ್ಳೆಯ ಶಬ್ಧ ಬರುತ್ತಾ..!? ಕನ್ನಡದಲ್ಲಿ ಎಷ್ಟು ಒಳ್ಳೆಯ ಪದಗಳಿವೆ. ಆದ್ರೆ ನೀನು ಒಂದಾದರೂ ಒಳ್ಳೆಯ ಪದ ಬಳಕೆ ಮಾಡ್ತಿಯಾ ? ನಿನಗೆ ತಾಕತ್ ಇದ್ರೆ, ನಿನ್ನ ನಾಲಿಗೆ ಮೇಲೆ ಹಿಡಿತ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜಕೀಯ ಖೈದಿ: ಸೌದಿಯ ಮಹಿಳಾ ಹಕ್ಕು ಹೋರಾಟಗಾರ್ತಿ ಲೌಜೈನ್ ಅಲ್-ಹಥ್ಲೌಲ್ ರ ಬಗ್ಗೆ ಗೊತ್ತಾ?
ಯಡಿಯೂರಪ್ಪನವರಿಗೆ ಕನ್ನಡದ ಬಗ್ಗೆ ಇರುವ ಬದ್ಧತೆಯನ್ನು ಪ್ರಶ್ನೆ ಮಾಡಬೇಡಿ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ತಂದಿದ್ದು ಯಡಿಯೂರಪ್ಪನವರು. ಮನಮೋಹನ್ ಸಿಂಗ್ ಅವರಿಗೆ ಕರೆ ಮಾಡಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ನೀಡಬೇಕು ಎಂದು ಯಡಿಯೂರಪ್ಪನವರು ಒತ್ತಡ ಹಾಕಿದ್ದರು. ಮಾತ್ರವಲ್ಲದೆ ಶಾಸ್ತ್ರೀಯ ಸ್ಥಾನಮಾನ ನೀಡದಿದ್ದರೇ, ದೆಹಲಿಗೆ ಬಂದು ರಾಜಘಾಟ್ ಮುಂದೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು. ಈ ಒತ್ತಡಕ್ಕೆ ಮಣಿದು ಅಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿತ್ತು ಎಂದು ತಿಳಿಸಿದರು.
ಮರಾಠ ನಿಗಮವೇ ಹೊರತಾಗಿ ಮರಾಠಿ ಭಾಷೆಯ ಪ್ರಾಧಿಕಾರ ಅಲ್ಲ. ಮರಾಠ ಜನಾಂಗದ ಅಭಿವೃದ್ಧಿಗೆ ಮಾಡಿರುವ ನಿಗಮ ಇದು. ಕರ್ನಾಟಕದಲ್ಲಿ ಹುಟ್ಟಿರುವ ಮರಾಠಿ ಭಾಷೆಯೆ ಮಾತನಾಡಲು ಬರದ ಮರಾಠ ಜನಾಂಗಕ್ಕೆ ಮಾಡಿದ ನಿಗಮ ಇದಾಗಿದೆ. ಈ ನಿಗಮಕ್ಕೂ ಮರಾಠ ಭಾಷೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಆಶ್ರಮದಲ್ಲಿ ಚಹಾ ಸೇವಿಸಿದ ನಂತರ ಇಬ್ಬರು ಸಾಧುಗಳ ನಿಗೂಢ ಸಾವು: ಮತ್ತೊಬ್ಬರ ಸ್ಥಿತಿ ಚಿಂತಾಜನಕ