Advertisement

ಬರಿಗೈನಲ್ಲಿ ಬಿಎಸ್‌ವೈ ವಾಪಸ್‌

09:40 AM Aug 24, 2019 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗುವುದಾಗಿ ಹೇಳಿ ಗುರುವಾರ ರಾತ್ರಿ ದಿಢೀರ್‌ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉಭಯ ನಾಯಕ ರನ್ನು ಭೇಟಿ ಯಾಗದೆ ಶುಕ್ರ ವಾರ ವಾಪಾಸ್ಸಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ, ಅಮಿತ್‌ ಶಾ ಸಿಗದ ಕಾರಣ, ಜೆ.ಪಿ.ನಡ್ಡಾ ಅವರನ್ನೇ ಭೇಟಿಯಾಗಿರುವ ಸಿಎಂ ಯಡಿಯೂರಪ್ಪ, ಖಾತೆ ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Advertisement

ವರಿಷ್ಠರೇ ಖಾತೆ ಹಂಚಿಕೆ ಬಗ್ಗೆ ಅಂತಿಮಗೊಳಿಸಿ ಕಳುಹಿಸಿ ಕೊಡುತ್ತಾರೆ ಎಂದು ಮೂಲಗಳು ತಿಳಿಸಿವೆ. ಶನಿವಾರವೇ ಖಾತೆಗಳು ಹಂಚಿಕೆಯಾ ಏಏಏಗುವ ನಿರೀಕ್ಷೆಯಿದ್ದು, ಪ್ರಬಾವಿ ಖಾತೆಗಳ ಬಗ್ಗೆ ಕುತೂಹಲವಿದೆ. ಇನ್ನೊಂದೆಡೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ಅನರ್ಹಗೊಂಡಿರುವ ಕೆಲ ಶಾಸಕರನ್ನು ಮುಖ್ಯಮಂತ್ರಿಗಳು, ಸಚಿ ವರು, ಸಂಸದರು ಭೇಟಿಯಾಗಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೂ ಮುನ್ನ ನೀಡಿದ್ದ ಭರವಸೆಯಂತೆ ನಡೆದುಕೊಳ್ಳಬೇಕು ಹಾಗೂ ಆ ಬಗ್ಗೆ ವರಿಷ್ಠರಿಂದ ಖಾತರಿಕೊಡಿ ಸಬೇಕು ಎಂಬುದು ಅನರ್ಹತೆಗೊಂಡಿ ರುವ ಶಾಸಕರ ಆಗ್ರಹ.

ಈ ಸಂಬಂಧ ಅನರ್ಹತೆಗೊಂಡಿರುವ ಶಾಸಕರನ್ನು ಸಮಾಧಾನಪಡಿಸುವ ಕಸರತ್ತು ರಾಷ್ಟ್ರ ರಾಜಧಾನಿಯಲ್ಲಿ ನಡೆಯಿತು ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಯಡಿಯೂರಪ್ಪ ಅವರು ಇಕ್ಕಟ್ಟಿ ನಲ್ಲಿದ್ದು, ಸದ್ಯ ಎದುರಾಗಿರುವ ಸವಾಲುಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಗುರುವಾರ ಬೆಳಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ದೆಹಲಿಗೆ ತೆರಳಿ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಚರ್ಚಿಸಲಿದ್ದೇನೆ ಎಂದು ಹೇಳಿದ್ದರು.

ಅದರಂತೆ ಗುರುವಾರ ರಾತ್ರಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಪುತ್ರ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅವರು ದೆಹಲಿಗೆ ತೆರಳಿದ್ದರು. ಶುಕ್ರವಾರ ಬೆಳಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥ ನಾರಾಯಣ, ಅನರ್ಹ ಶಾಸಕರು ಸುಪ್ರೀಂನಲ್ಲಿರುವ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಆರಂಭಿಸಲು ಅಗತ್ಯ ರೂಪುರೇಷೆ ಸಿದ್ಧಪಡಿಸಲು ದೆಹಲಿಯಲ್ಲಿದ್ದಾರೆ. ಇವರು ಅಮಿತ್‌ ಶಾ ಅವರನ್ನು ಭೇಟಿಯಾಗುವ ಮಾಹಿತಿ ಇಲ್ಲ. ಶುಕ್ರವಾರವೇ ಖಾತೆ ಹಂಚಿಕೆ ಅಂತಿಮವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ಗೌಪ್ಯ ಭೇಟಿ: ಅನರ್ಹತೆಗೊಂಡಿರುವ ಶಾಸಕರ ಪೈಕಿ ಕೆಲವರನ್ನು ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಬಿಎಸ್‌ವೈ ಪುತ್ರ ಬಿ.ವೈ. ವಿಜಯೇಂದ್ರ ಶುಕ್ರವಾರ ಬೆಳಗ್ಗೆ ಗೌಪ್ಯವಾಗಿ ಭೇಟಿಯಾಗಿ ಚರ್ಚಿಸಿದರು. ಆದರೂ ಅನರ್ಹಗೊಂಡ ಶಾಸಕರು ಪಟ್ಟು ಸಡಿಲಿಸಲಿಲ್ಲ. ಬಳಿಕ ಎರಡನೇ ಸುತ್ತಿನಲ್ಲಿ ಅಶ್ವತ್ಥ ನಾರಾಯಣ ಅವರು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ನ್ಯಾಯವಾದಿಯೊಬ್ಬರ ಜತೆ ಅನರ್ಹ ಶಾಸಕರನ್ನು ಭೇಟಿಯಾದರು. ಇದೂ ಫ‌ಲ ನೀಡಲಿಲ್ಲ. ಕೊನೆಗೆ ಯಡಿಯೂರಪ್ಪ ಅವರೇ ಗೌಪ್ಯವಾಗಿ ಅನರ್ಹತೆಗೊಂಡಿರುವ ಶಾಸಕರ ಭೇಟಿಗೆ ಮುಂದಾದರು ಎನ್ನಲಾಗಿದೆ. ಆದರೆ, ಇವರ ಭೇಟಿಯೂ ಫ‌ಲಪ್ರದವಾಗಿಲ್ಲ ಎಂದು ಹೇಳಲಾಗಿದೆ.

Advertisement

ಇಕ್ಕಟ್ಟಿನಲ್ಲಿ ಸಿಎಂ ಯಡಿಯೂರಪ್ಪ: ಸಂಪುಟ ವಿಸ್ತರಣೆಯಾಗಿ ನಾಲ್ಕು ದಿನವಾದರೂ ಖಾತೆ ಹಂಚಿಕೆ ಕಗ್ಗಂಟಾಗಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲೆನೋ ವಾಗಿ ಪರಿಣಮಿಸಿದೆ. ತಮಗೆ ಹಂಚಿಕೆ ಮಾಡಲಿರುವ ಖಾತೆಗಳನ್ನು ಸಚಿವರಿಗೆ ನೀಡದೆ ಸಿಎಂ ತಮ್ಮ ಬಳಿಯೇ ಇಟ್ಟುಕೊಳ್ಳಬೇಕು ಎಂಬುದು ಅನರ್ಹ ಶಾಸಕರ ಆಗ್ರಹ. ಆದರೆ ಪ್ರಭಾವಿ ಸಚಿವರು ಪ್ರಮುಖ ಸಚಿವ ಸ್ಥಾನಗಳಿಗೇ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಸಂಪುಟ ವಿಸ್ತರಣೆ ನಂತರ ಎದುರಾಗಿರುವ ಅಸಮಾಧಾನವನ್ನೂ ಬಿಎಸ್‌ವೈ ನಿವಾರಿಸಬೇಕಿದೆ. ಅಗತ್ಯ ಬಿದ್ದರೆ 2ನೇ ಹಂತದ ವಿಸ್ತರಣೆಯೂ ನಡೆಯಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next