Advertisement
ಇದಕ್ಕೆ ವ್ಯತಿರಿಕ್ತವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 12 ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಆದರೆ, ಅವರು ಪೂರ್ಣ ಅವಧಿ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಿದರು.
Related Articles
Advertisement
ನಾಗರಿಕರ ಬೇಸರ: ಇದಕ್ಕೆ ವ್ಯತಿರಿಕ್ತವಾಗಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬರೋಬ್ಬರಿ 12 ಬಾರಿ ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿ ಜಿಲ್ಲಾಕೇಂದ್ರದಲ್ಲಿ ಹಲವಾರು ಅಭಿವೃದ್ಧಿಕೆಲಸ ಮಾಡಿಸಿದರು. ಆದರೂ, ಅವರು ಮುಖ್ಯಮಂತ್ರಿಯಾಗಿ 5 ವರ್ಷ ಆಡಳಿತ ನಡೆಸಿದರು. ದೇವರಾಜ ಅರಸು ಅವರನ್ನು ಬಿಟ್ಟರೆ, ಅಧಿಕಾರಾವಧಿ ಪೂರ್ಣಗೊಳಿಸಿದ ಇನ್ನೋರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ. ಹೀಗಿರುವಾಗ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯಲ್ಲಿ ಕೆಲವು ರಾಜಕಾರಣಿಗಳು ವಿಶ್ವಾಸ ಇರಿಸಿರುವುದು ದುರಂತ ಎಂದು ಜಿಲ್ಲೆಯ ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.
ಮೂಢನಂಬಿಕೆ ಬಲವಾಗಿ ಬೇರೂರಿದ್ದು ಹೀಗೆ…ಚಾಮರಾಜನಗರ ಪಟ್ಟಣಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರೆ6 ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಯನ್ನು ಬಿತ್ತಲಾಯಿತು . ಮುಖ್ಯಮಂತ್ರಿಗಳಾಗಿದ್ದ ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ವೀರೇಂದ್ರಪಾಟೀಲ್ ಚಾಮರಾಜನಗರಕ್ಕೆ ಭೇಟಿ ನೀಡಿದ ನಂತರ ಆರೇ ತಿಂಗಳಲ್ಲಿ ಅಧಿಕಾರಕಳೆದುಕೊಂಡರು ಎಂದುಕೆಲವರು ವದಂತಿ ಹಬ್ಬಿಸಿದರು. ಈ ವದಂತಿಯನ್ನೇ ನಂಬಿದ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ, ವೀರಪ್ಪಮೊಯ್ಲಿ, ಎಚ್.ಡಿ. ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರಂಸಿಂಗ್ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಹೀಗಾಗಿ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಹೊಸ ಮೂಢನಂಬಿಕೆಯೇ ಸೃಷ್ಟಿಯಾಗಿ ಬಲವಾಗಿ ಬೇರೂರಿತು. ಈ ಮೂಢನಂಬಿಕೆಯನ್ನು ಮೊದಲು ಮುರಿದವರು ಎಚ್.ಡಿ.ಕುಮಾರಸ್ವಾಮಿ .2006-07ರಲ್ಲಿ ಸಿಎಂ ಆಗಿದ್ದಾಗ20 ತಿಂಗಳ ತಮ್ಮ ಅಧಿಕಾರಾವಧಿ ಮುಗಿಸುವ ಹಂತದಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದರು.16 ವರ್ಷಗಳ ನಂತರ ಚಾಮರಾಜನಗರಕ್ಕೆ ಭೇಟಿ ನೀಡಿದ ಮೊದಲ ಸಿಎಂ ಎಂಬ ಶ್ರೇಯ ಅವರದಾಯಿತು. ಅದಾದ ಬಳಿಕ2013 ರಲ್ಲಿ
ವಿಧಾನಸಭಾ ಚುನಾವಣೆಗೆಕೆಲವೇ ದಿನಗಳಿರುವಾಗ ಜಗದೀಶ್ ಶೆಟ್ಟರು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿದ್ದರು. 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ತಾವು ಸಿಎಂ ಆದಕೆಲವೇ ತಿಂಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದರು. ಅದಾದ ಬಳಿಕ ಪಟ್ಟಣಕ್ಕೆ12 ಬಾರಿ, ಜಿಲ್ಲೆಗೆ20ಕ್ಕೂ ಹೆಚ್ಚು ಬಾರಿ ಭೇಟಿ ನೀಡಿ ಹಲವಾರು ಅಭಿವೃದ್ಧಿಕಾರ್ಯಗಳ ಕೊಡುಗೆ ನೀಡಿದರು. ವೈಜ್ಞಾನಿಕವಾಗಿ ಚಿಂತನೆ ನಡೆಸಿ
ಸಾಮಾನ್ಯ ನಾಗರಿಕನೂ ವೈಜ್ಞಾನಿಕವಾಗಿ ಚಿಂತಿಸಬೇಕು. ಮೂಢನಂಬಿಕೆಗಳಲ್ಲಿ ವಿಶ್ವಾಸ ಇಡಬಾರದು. ಇಡೀ ರಾಜ್ಯವನ್ನೂ, ರಾಜ್ಯದ ಜನರನ್ನೂ ಸಮಾನವಾಗಿ ಕಾಣಬೇಕಾದ, ಮೂಢನಂಬಿಕೆ ತೊಡೆದು ಹಾಕಬೇಕಾದ ಮುಖ್ಯಮಂತ್ರಿಗಳೇ ಮೂಢನಂಬಿಕೆ ಪಾಲಿಸುವುದು ಖಂಡನೀಯ. ಯಡಿಯೂರಪ್ಪನವರು ಚಾ.ನಗರಕ್ಕೆ ಭೇಟಿ ನೀಡದಿದ್ದರೂ ಅಧಿಕಾರಕಳೆದುಕೊಂಡಿದ್ದಾರೆ. ಇಲ್ಲಿಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯನ್ನು ರಾಜಕಾರಣಿಗಳು ಇನ್ನಾದರೂ ಬಿಡಬೇಕು ಎಂದು ಸಾಹಿತಿ ಹಾಗೂ ರಂಗಕರ್ಮಿ ಕೆ.ವೆಂಕಟರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. *ಕೆ.ಎಸ್.ಬನಶಂಕರ ಆರಾಧ್ಯ