Advertisement

ಬಿಎಸ್‌ವೈ ದೃಢ ನಿರ್ಧಾರದಿಂದಲೇ ಜಿಲ್ಲೆಗೆ ವೈದ್ಯ ಕಾಲೇಜು

09:30 PM Jan 27, 2020 | Team Udayavani |

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ದೃಢ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ ಬರಡು ಜಿಲ್ಲೆ ಚಿಕ್ಕಬಳ್ಳಾಪುರಕ್ಕೆ ದೊಡ್ಡ ಅನ್ಯಾಯ ಆಗುತ್ತಿತ್ತು ಎಂದು ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜು ಮಂಜೂರು ಮಾಡಿ ಅಗತ್ಯ ಅನುದಾನ ಬಿಡುಗಡೆ ಮಾಡಿದ ಸಿಎಂ ಯಡಿಯೂರಪ್ಪಗೆ ಶಾಸಕ ಡಾ.ಕೆ.ಸುಧಾಕರ್‌ ಕೃತಜ್ಞತೆ ಸಲ್ಲಿಸಿದರು.

Advertisement

ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-7ರ ನಲ್ಲಗುಟ್ಟ ಸಮೀಪ ಸೋಮವಾರ 525 ಕೋಟಿ ರೂ., ವೆಚ್ಚದ ಸರ್ಕಾರಿ ವೈದ್ಯಕೀಯ ಶಿಕ್ಷಣ ಮಹಾ ವಿದ್ಯಾಲಯದ ಮೊದಲ ಹಂತದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿ ರಸ್ತೆಗೂ ಅನುದಾನ: ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಅದಕ್ಕೆ ಹೊಂದಿಕೊಂಡಂತೆ ಸಾವಿರ ಹಾಸಿಗೆ ಇರುವ ಸುಸಜ್ಜಿತ ಆಸ್ಪತ್ರೆ ಇಲ್ಲಿ ತಲೆ ಎತ್ತಲಿದೆ. 525 ಕೋಟಿ ವೆಚ್ಚಲ್ಲಿ ಮೆಡಿಕಲ್‌ ಕಾಲೇಜ್‌ ನಿರ್ಮಾಣವಾಗಲಿದೆ. ಈ ಹಿಂದೆ ಈ ಭಾಗಕ್ಕೆ 5 ಕೋಟಿ ಅನುದಾನ ಬರುತ್ತಿರಲಿಲ್ಲ. ಆದರೆ ನಾವು ಪ್ರತಿ ರಸ್ತೆಗೆ 5 ರಿಂದ 10 ಕೋಟಿ ಅನುದಾನ ಖರ್ಚು ಮಾಡುತ್ತಿದ್ದೇವೆ ಎಂದರು.

ಜಿಲ್ಲೆಗೆ ಸೇವೆ ಲಭ್ಯ: ಕಳೆದ ಆರು ವರ್ಷದಲ್ಲಿ ಎಲ್ಲಾ ಗ್ರಾಮಗಳಿಗೂ ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಿಸಲಾಗಿದೆ. ಆ ಕಾರಣಕ್ಕಾಗಿ ಇಡೀ ರಾಜ್ಯದ ಜನ ಕುತೂಹಲದಿಂದ ನೋಡಿದ ಕ್ಷೇತ್ರದ ಉಪ ಚುನಾವಣೆಯನ್ನು ನನ್ನನ್ನು ಮೂರನೇ ಬಾರಿಗೆ ಗೆಲ್ಲಿಸಿದ್ದೀರಿ. ಮೆಡಿಕಲ್‌ ಕಾಲೇಜು ಕೇವಲ ಚಿಕ್ಕಬಳ್ಳಾಪುರ ತಾಲೂಕಿಗೆ ಮಾತ್ರವಲ್ಲ ಇಡೀ ಜಿಲ್ಲೆಗೆ ಈ ಸೇವೆ ಲಭ್ಯವಾಗಲಿದೆ ಎಂದರು.

ಗುಣಮಟ್ಟದ ವೈದ್ಯಕೀಯ ಸೌಲಭ್ಯ: ಇತ್ತೀಚಿನ ದಿನಗಳಲ್ಲಿ ಎಲ್ಲ ಸೇವೆಗಳಗಿಂತ ದೊಡ್ಡ ಸೇವೆ ಇಂದು ಆರೋಗ್ಯ ಸೇವೆಯಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಅತ್ಯಂತ ಬಡತನದಿಂದ ಕೂಡಿರುವ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ಮೆಡಿಕಲ್‌ ಕಾಲೇಜು ಸ್ಥಾಪನೆ ಮಾಡಲಾಗುತ್ತಿದ್ದು, ಎರಡೂವರೆ ವರ್ಷದಲ್ಲಿ ಕಾಮಗಾರಿ ಸಂಪೂರ್ಣಗೊಳ್ಳುವ ವಿಶ್ವಾಸ ಇದೆ. ಈ ಮೆಡಿಕಲ್‌ ಕಾಲೇಜಿನಲ್ಲಿ ಕಿಡ್ನಿಯಿಂದ ಹಿಡಿದು ಶ್ವಾಸಕೋಶ, ಹೃದಯ ಸಂಬಂಧಿ ಹಾಗೂ ಕ್ಯಾನ್ಸರ್‌ಗೆ ಸಂಬಂಧಿಸಿದ ವಿಭಾಗಗಳನ್ನು ತೆರೆದು ಗುಣಮಟ್ಟದ ವೈದ್ಯಕೀಯ ಸೌಲಭ್ಯ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

ಶಿಕ್ಷಣ, ಆರೋಗ್ಯ ಎರಡು ಕಣ್ಣು: ಶಿಕ್ಷಣ ಹಾಗೂ ಆರೋಗ್ಯ ಸಮಾಜದ ಎರಡು ಕಣ್ಣುಗಳು, ಈ ಎರಡು ಕ್ಷೇತ್ರಗಳನ್ನು ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಆ ಸಮಾಜ ಖಂಡಿತ ಉಜ್ವಲವಾಗಿ ಬೆಳೆಯುತ್ತದೆ. ಈ ಭಾಗಕ್ಕೆ ಒಳ್ಳೆಯ ಶಿಕ್ಷಣ, ಆರೋಗ್ಯ ಕೊಡಬೇಕೆಂಬ ಗುರಿ ನನ್ನದಾಗಿದೆ. ಈ ದಿಸೆಯಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಕಾಮಗಾರಿ ಆರಂಭಗೊಂಡಿದೆ. ಉತ್ತಮ ಶಿಕ್ಷಣ, ಆರೋಗ್ಯ ಇರುವ ಸಮಾಜ ಸಮೃದ್ಧಿ, ಸಂತೋಷದಿಂದ ಕೂಡಿರುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಶೈಕ್ಷಣಿಕವಾಗಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿ ಸೌಕರ್ಯ ತರುವ ಭರವಸೆ ನೀಡಿದರು.

ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ನಿರ್ಮಲಾ, ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಜಿಪಂ ಸದಸ್ಯ ರಾದ ಪಿ.ಎನ್‌.ಕೇಶವರೆಡ್ಡಿ, ಕೆ.ಸಿ.ರಾಜಾಕಾಂತ್‌, ಜಿಲ್ಲಾಧಿಕಾರಿ ಆರ್‌.ಲತಾ, ಉಪ ವಿಭಾಗಾಧಿಕಾರಿ ಎ.ಎನ್‌.ರಘುನಂದನ್‌, ಮುಖಂಡರಾದ ಕೆ.ವಿ.ನಾಗರಾಜ್‌, ಜಿ.ಆರ್‌.ನಾರಾಯಣಸ್ವಾಮಿ, ಮರಳುಕುಂಟೆ ಕೃಷ್ಣಮೂರ್ತಿ, ಚಂದ್ರಶೇಖರ್‌ ಇದ್ದರು.

ಜಾಲಪ್ಪ ಹೆಸರು ಹೇಳದೇ ವಾಗ್ಧಾಳಿ: ಶಾಸಕ ಡಾ.ಕೆ.ಸುಧಾಕರ್‌ ತಮ್ಮ ಭಾಷಣದಲ್ಲಿ ಕ್ಷೇತ್ರದ ಮಾಜಿ ಸಂಸದ ಆರ್‌.ಎಲ್‌. ಜಾಲಪ್ಪ ಹೆಸರು ಹೇಳದೇ ಅವರ ವಿರುದ್ಧ ವಾಗ್ಧಾಳಿ ನಡೆಸಿದರು. ಈ ಹಿಂದೆ ಇದ್ದವರು ಕೋಲಾರದಲ್ಲಿ ಅವರು ಸ್ವಂತಕ್ಕೆ ಮೆಡಿಕಲ್‌ ಕಾಲೇಜ್‌ ಮಾಡಿಕೊಂಡ ರೆಂದು ವ್ಯಂಗ್ಯವಾಡಿದರು. ಆದರೆ ನಾನು ಜನಪರವಾಗಿ ಆಡಳಿತ ನೀಡಬೇಕೆಂದು ನಾನು ರಾಜಕಾರಣಕ್ಕೆ ಬಂದೆ. ಆದರೆ ಬಹುತೇಕರು ಜೀವನದಲ್ಲಿ ಉಸಿರು ಇರುವರೆಗೂ ಒಮ್ಮೆ ಶಾಸಕರಾಗಬೇಕೆಂದು ಬಯಸುತ್ತಾರೆ. ಆದರೆ ನಾನು ನಾಲ್ಕು ವರ್ಷ ಅವಧಿ ಇದ್ದರೂ ನಮಗೆ ಕೊಟ್ಟ ಮೆಡಿಕಲ್‌ ಕಾಲೇಜ್‌ನ್ನು ಕಿತ್ತುಕೊಂಡರು ಎಂಬ ಕಾರಣಕ್ಕೆ ಎಂಎಲ್‌ಎ ಗಿರಿಗೆ ರಾಜೀನಾಮೆ ಕೊಟ್ಟೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next