Advertisement
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಬಗ್ಗೆ ಪದೆ ಪದೇ ಹೇಳುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಪೂರ್ಣಾವ ಧಿ ಮುಖ್ಯಮಂತ್ರಿ ಆಗಿರ್ತಾರೆ. ಅವರ ಬದಲಾವಣೆ ಗಾಳಿ ಸುದ್ದಿ. ಮಾಧ್ಯಮಗಳಿಂದ ಗಾಳಿ ಸುದ್ದಿಗೆ ರೆಕ್ಕೆ-ಪುಕ್ಕ ಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
Related Articles
Advertisement
ಹಕ್ಕುಚ್ಯುತಿ ಮಂಡಿಸುವ ಮುನ್ನ ಅ ಧಿಕಾರಿಗಳ ಜೊತೆ ರಿವ್ಯೂವ್ ಮಾಡೋಕೆ ಅವಕಾಶ ಕೊಡಲಿಲ್ಲ, ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಸರ್ಕಾರ ಇದ್ದಾಗ, ಸಿದ್ದರಾಮಯ್ಯ ಅವ್ರೇ ಸಿಎಂ ಇದ್ದ ಸಂದರ್ಭದಲ್ಲಿ ಯಾವ ಆದೇಶಗಳನ್ನು ನೀಡಿದ್ದಾರೆ ಎಂಬುದನ್ನು ಇನ್ನೊಂದು ಸಾರಿ ಓದಲಿ. ಅವರ ಪಕ್ಷದ ಉಪ ಮುಖ್ಯಮಂತ್ರಿ ಪರಮೇಶ್ವರ ಅವರು ರೀವಿವ್ ಮಾಡ್ತೀನಿ ಅಂದಾಗಲೇ ಅವಕಾಶ ಕೊಟ್ಟಿಲ್ಲ. ಯಡಿಯೂರಪ್ಪ, ನಾವು ವಿಪಕ್ಷದಲ್ಲಿ ಇದ್ದಾಗ ಬಾಗಲಕೋಟೆ ಡಿಸಿ ಆμàಸ್ ಮುಂಭಾಗ ಮಲಗಿದ್ವಿ. ಆಗ ನಮಗೆ ಒಂದೇ ಒಂದು ಮಾಹಿತಿ ಕೊಡಲಿಲ್ಲ. ಒಂದು ಪೀಸ್ ಪೇಪರು ಕೂಡಾ ಕೊಡಲಿಲ್ಲ. ಆ ರೀತಿಯ ನಡವಳಿಕೆ ಯಾವಾಗಲೂ ಕಾಂಗ್ರೆಸ್ ಸರ್ಕಾರದ್ದು. ಅವರಿಗೆ ಆ ಹುಚ್ಚು ಯಾಕೆ ಗೊತ್ತಿಲ್ಲ. ಎಲ್ಲ ಡಿಸಿಗಳ ಮೀಟಿಂಗ್ ತಗೊಂಡು ರಿವೀವ್ ಮಾಡ್ತೀನಿ ಅಂದ್ರೆ ಅದಕ್ಕೆ ಅವಕಾಶ ಇಲ್ಲ.ಮಾಹಿತಿ ತಗೊಳ್ಳಬಹುದು. ನಾವು ಒದಗಿಸೋದಕ್ಕೆ ಸೂಚನೆ ಕೊಡುತ್ತೇವೆ ಎಂದರು.
ಅನಾಥ ಮಕ್ಕಳಿಗೆ ಪಿಂಚಣಿ: ಕೊರೊನಾದಿಂದ ತಂದೆ-ತಾಯಿ ಮೃತರಾಗಿ ಮಕ್ಕಳ ಅನಾಥರಾಗಿದ್ದರೆ ರಾಜ್ಯ ಮತ್ತು ಕೇಂದ್ರದ ನೆರವಿಗೆ ಬರಲಿವೆ. ಈ ಕುರಿತು ಬಾಗಲಕೋಟೆ ಜಿಲ್ಲೆಯಲ್ಲಿ ಸರ್ವೇ ಮಾಡಲು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸೂಚನೆ ನೀಡಲಾಗಿದೆ. ಎಲ್ಲ ಸಿಡಿಪಿಒಗಳಿಗೆ ಹೇಳಿದ್ದೇವೆ. ಯಾರಾದ್ರೂ ಅನಾಥ ಮಕ್ಕಳು ಇದ್ರೆ ಅಂತವರ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತೆ. ಸರ್ಕಾರದ ವ್ಯವಸ್ಥೆಯಲ್ಲಿ ಅವರನ್ನ ಜೋಪಾನ ಮಾಡ್ತೇವೆ. ಅವರಿಗೆ ಮೂರುವರೆ ಸಾವಿರ ರೂ. ಪೆನ್ಶನ್ ಕೊಡುತ್ತೇವೆ.
ಕೇಂದ್ರ ಸರ್ಕಾರ ಕೂಡ 10 ಲಕ್ಷ ರೂ. ವಿಮಾ ವ್ಯವಸ್ಥೆ ಮಾಡಿದೆ. 18 ವರ್ಷಗಳ ನಂತರ ಉನ್ನತ ಶಿಕ್ಷಣಕ್ಕೆ ಉಪಯೋಗಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ನಮ್ಮ ಕೇಂದ್ರೀಯ ವಿದ್ಯಾಲಯ, ವಸತಿ ಶಾಲೆಗಳಲ್ಲಿ ಅವರಿಗೆ ವ್ಯವಸ್ಥೆ ಮಾಡಲಿದ್ದು, ಅಂತ ಮಕ್ಕಳು ಇದ್ರೆ, ಗುರುತಿಸಿ ನಮ್ಮ ಸರ್ಕಾರಕ್ಕೆ ಒಪ್ಪಿಸುವ ಕೆಲಸ ಮಾಡಲಿ ಎಂದು ಹೇಳಿದರು.