ಚನ್ನಪಟ್ಟಣ: ಮಾಜಿ ಸಚಿವ ಡಿ.ಕೆ.ಶಿವ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನವರಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದರು. ಹೀಗಾಗಿ, ಡಿಕೆಶಿ ಅವರನ್ನು ಇ.ಡಿ ಬಂಧಿಸಿರುವುದರ ಹಿಂದೆ ಯಡಿಯೂರಪ್ಪ ಅವರ ನೇರ ಪಾತ್ರವಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗಾರರ ಜತೆ ಮಾತನಾಡಿ, ಯಡಿ ಯೂರಪ್ಪ ಈ ಹಿಂದೆ ಸಿಎಂ ಆಗಿದ್ದಾಗ ವಿದ್ಯು ತ್ಛಕ್ತಿ ಖರೀದಿಯಲ್ಲಿ ಮಾಡಿದ್ದ ದೊಡ್ಡ ಹಗರಣ ವನ್ನು ತನಿಖೆ ನಡೆಸುವಂತೆ ಡಿ.ಕೆ.ಶಿವಕುಮಾರ್‌ಗೆ ಹೇಳಿದ್ದೆ. ಡಿಕೆಶಿ ಅವರೇ ಆಗ ಇಂಧನ ಮಂತ್ರಿಯಾಗಿದ್ದರು. ಅದನ್ನು ಮಾಡದ್ದಕ್ಕೆ ಇದೀಗ ಪ್ರತಿಫಲ ಅನುಭವಿಸುತ್ತಿದ್ದಾರೆ ಎಂದರು.
ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬರುತ್ತಿಲ್ಲ. ಈ ಸಮಯದಲ್ಲಿ ನಾನೇನಾದರೂ ಮುಖ್ಯಮಂತ್ರಿಯಾಗಿದ್ದಿದ್ದರೆ ನನ್ನನ್ನು ಹರಾಜು ಹಾಕಿ ಬಿಡುತ್ತಿದ್ದರು. ಆದರೆ, ನಾನು ಏನೆಂಬುದನ್ನು ತೋರಿಸುತ್ತಿದ್ದೆ. ಪ್ರಧಾನಮಂತ್ರಿ ರಾಜ್ಯಕ್ಕೆ ಬಂದರೂ ನೆರೆ ಸಂತ್ರಸ್ತರಿಗೆ ಬಿಡಿ ಗಾಸು ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಮೈತ್ರಿ ಸರ್ಕಾರ ಜಾರಿಗೆ ತಂದ ಸಾಲಮನ್ನಾ ಯೋಜನೆಯಿಂದ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಎಷ್ಟು ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿ ಇರುವ ಪುಸ್ತಕ ಹೊರ ತರಲು ಚಿಂತಿಸಲಾಗಿದೆ ಎಂದರು.
ಕಿರಿದಾದ ಸಂಪಿಗೆ ಬಿದ್ದರೆ ಸಾವು ಸಾಧ್ಯವೆ?: ಒಂದಡಿ ಉದ್ದ, ಒಂದಡಿ ಅಗಲದ ಬಾಯಿರುವ ಸಂಪಿಗೆ ಬಿದ್ದು ಯಾರಾದರೂ ಸಾವನ್ನಪ್ಪಲು ಸಾಧ್ಯವೇ? ಅಂತಹವರನ್ನು ಇಂದು ನಮ್ಮ ಜನ ಮೆಚ್ಚಿದ್ದಾರೆ. ಅವರು ಇಂದು ನಮ್ಮ ರಾಜ್ಯ ಕಾಯುತ್ತಿದ್ದಾರೆ. ಅವೆಲ್ಲವನ್ನೂ ಸಿಬಿಐ ತನಿಖೆಗೆ ಸರ್ಕಾರ ವಹಿಸಲಿ. ಅವರು ಈ ಹಿಂದೆ ಮೂರು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಆಗಿರುವ ಹಗರ ಣಗಳ ಬಗ್ಗೆಯೂ ಸಿಬಿಐ ತನಿಖೆ ನಡೆಸಲಿ ಎಂದು ಯಡಿಯೂರಪ್ಪ ಪತ್ನಿಯ ಸಾವಿನ ಕುರಿತು ಪರೋಕ್ಷ ವಾಗ್ಧಾಳಿ ನಡೆಸಿದರು.