Advertisement

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

11:02 AM Dec 19, 2024 | Team Udayavani |

ಬೆಂಗಳೂರು: ಲೈಂಗಿಕ ಕಿರುಕುಳ ನೀಡಿರುವುದನ್ನು ಯಡಿಯೂರಪ್ಪ ಒಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಮ್ಯಾಜಿಸ್ಟ್ರೇಟ್‌ ಮುಂದೆ ನೀಡಿರುವ ಸ್ವಇಚ್ಛಾ ಹೇಳಿಕೆಯಲ್ಲಿ ದಾಖಲಿಸಿದ್ದಾಳೆ.

Advertisement

ಅದರಂತೆ, ಅಪ್ರಾಪ್ತೆಗೆ ಲೈಂಗಿಕ ಕಿರುಕುಳವೆಸಗಿರುವ ಕೃತ್ಯವನ್ನು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರೇ ಖುದ್ದಾಗಿ ಒಪ್ಪಿ ಕೊಂಡಿದ್ದಾರೆ. ಸಂತ್ರಸ್ತೆ ಈ ಹೇಳಿಕೆಯೊಂದೇ ಸಾಕು, ಯಡಿಯೂರಪ್ಪ ಅವರನ್ನು ತಪ್ಪಿತಸ್ಥ ಎಂದು ತೀರ್ಮಾನಿಸಲು’ ಎಂದು ಹೈಕೋರ್ಟ್‌ಗೆ ಸಿಐಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್‌ ಹೈಕೋರ್ಟ್‌ ಮುಂದೆ ವಾದಿಸಿದ್ದಾರೆ.

ಪೋಕ್ಸೋ ವಿಶೇಷ ಕೋರ್ಟ್‌ ವಿಚಾರಣೆ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ನ್ಯಾ. ಎಂ.ನಾಗಪ್ರಸನ್ನ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಎಸ್ಪಿಪಿ ರವಿವರ್ಮ ಕುಮಾರ್‌ ವಾದ ಮಂಡಿಸಿ, ಸಂತ್ರಸ್ತೆ ದಾಖಲಿಸಿರುವ ಸ್ವಯಿಚ್ಛೆ ಹೇಳಿಕೆ ಓದಿ, ಸಂತ್ರಸ್ತೆಯ ಈ ಹೇಳಿಕೆ ಸಾಕು ಯಡಿಯೂರಪ್ಪರನ್ನು ತಪ್ಪಿತಸ್ಥ ಎಂದು ತೀಮಾರ್ನಿ ಸಲು. ಈ ಕುರಿತು ಸಂತ್ರಸ್ತೆ ಬಳಿ ವಿಡಿಯೋ ತುಣುಕುಗಳಿವೆ ಎಂದರು.

ದಿನದ ಕಾಲಾಪ ಮುಗಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಗುರುವಾರ ಸಂಜೆ 5 ಗಂಟೆಗೆ ನ್ಯಾಯಪೀಠ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next