Advertisement

ಬಿಎಸ್‌ ವೈ ಬಂಜಾರಾ ಸಮುದಾಯಕ್ಕೆ 2ನೇ ಸೇವಾಲಾಲ್‌

07:56 PM Apr 12, 2021 | Team Udayavani |

ಬಸವಕಲ್ಯಾಣ : ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಂಜಾರ ಸಮುದಾಯದವರ ಪಾಲಿಗೆ ಎರಡನೇ ಸೇವಾಲಾಲ್‌ ತರಹ ಕೆಲಸ ಮಾಡುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರನ್ನು ಗೆಲ್ಲಿಸುವ ಮೂಲಕ ಬಿಎಸ್‌ವೈ ಕೈ ಬಲಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮನವಿ ಮಾಡಿದರು.

Advertisement

ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ರವಿವಾರ ತಾಲೂಕಿನ ಕಲಕೋರಾ ದೇವಿ ತಾಂಡಾ, ಗದಲೇಗಾಂವ್‌ ತಾಂಡಾ, ಶೇಕು ತಾಂಡಾ, ಗಂಗಾರಾಮ ತಾಂಡಾ, ಹಾಮುನಗರ ತಾಂಡಾ, ಕರಿಗುಂಡಾ ತಾಂಡಾ ಸೇರಿದಂತೆ ಸುಮಾರು 17 ತಾಂಡಾಗಳಿಗೆ ಭೇಟಿ ನೀಡಿ ಮತಯಾಚಿಸಿ ಅವರು ಮಾತನಾಡಿದರು.

ಸಮುದಾಯದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಬಹಳಷ್ಟು ಸಹಾಯ ಮಾಡಿದ್ದಾರೆ. ಈ ಸಮುದಾಯದವರು ಶಾಸಕ, ಸಚಿವ, ಕುಲಪತಿಗಳಾಗಿ ಅನೇಕ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಸಿಎಂ ಪಾತ್ರ ಮಹತ್ವದ್ದಾಗಿದೆ. ಬಂಜಾರ ಸಮುದಾಯದ ಪ್ರತಿಯೊಬ್ಬರನ್ನೂ ಸುಶಿಕ್ಷಿತರನ್ನಾಗಿ ಮಾಡಬೇಕು. ಎಲ್ಲ ತಾಂಡಾ ಗುಡಿಸಲು ಮುಕ್ತ ಮಾಡಬೇಕು ಎನ್ನುವ ಸಂಕಲ್ಪ ಹೊಂದಲಾಗಿದೆ.

ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದರು. ಶರಣು ಸಲಗರ ಕೋವಿಡ್‌ ಸಂಕಷ್ಟದಲ್ಲಿ ಬಸವಕಲ್ಯಾಣ ತಾಲೂಕಿನಾದ್ಯಂತ ಓಡಾಡಿ ಜನರ ಸಂಕಷ್ಟಗಳಿಗೆ ಮಿಡಿದಿದ್ದಾರೆ. ಶಕ್ತಿ ಮೀರಿ ಜನತೆಗೆ ಸಹಾಯ ಮಾಡಿದ್ದಾರೆ. ಇಂತಹ ಪರೋಪಕಾರಿ ಮನೋಭಾವದ ವ್ಯಕ್ತಿ ಗೆಲ್ಲಿಸಿ ತನ್ನಿ ಎಂದು ಕೋರಿದರು. ಈ ವೇಳೆ ಸೋಮನಾಥ ಪಾಟೀಲ, ಅಣ್ಣಾರಾವ್‌ ರಾಠೊಡ, ಸುನಿಲ ರಾಠೊಡ, ರಾಮಶೆಟ್ಟಿ ಪನ್ನಾಳೆ, ರಮೇಶ ದೇವಕತೆ, ವೀರೇಶ ಸಜ್ಜನ್‌, ಅಮರ ಬಡದಾಳೆ, ಜಗನ್ನಾಥ ಆಡೆ, ಕೇರಬಾ ಪವಾರ್‌, ಶರಣಪ್ಪ ಪಂಚಾಕ್ಷರಿ ಇತರರಿದ್ದರು. ಆತ್ಮೀಯ ಸ್ವಾಗತ: ತಾಂಡಾಗಳಿಗೆ ಭೇಟಿ ನೀಡಿದ ಸಚಿವರನ್ನು ಗ್ರಾಮಸ್ಥರು ಸಾಂಪ್ರದಾಯಿಕ ವೇಷಭೂಷಣ ಧರಿಸಿ ಆತ್ಮೀಯವಾಗಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next