Advertisement

ಗ್ಯಾಂಗ್‌ ರೇಪ್‌:ಆಯೋಧ್ಯೆಯ ಬಿಎಸ್‌ಪಿ ಅಭ್ಯರ್ಥಿ ವಿರುದ್ಧ ಎಫ್ಐಆರ್‌  

04:21 PM Mar 05, 2017 | |

ಲಕ್ನೋ: ಉತ್ತರಪ್ರದೇಶದಲ್ಲಿ ಒಂದು ಹಂತದ ಚುನಾವಣೆ ಬಾಕಿ ಉಳಿದಿರುವಾಗಲೇ ಪ್ರಮುಖ ವಿರೋಧ ಪಕ್ಷ ಬಿಎಸ್‌ಪಿ ಗೆ ಭಾರೀ  ಅಘಾತವೆಂಬಂತೆ ಅಭ್ಯರ್ಥಿಯೊಬ್ಬರನ್ನು ಗ್ಯಾಂಗ್‌ ರೇಪ್‌ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

Advertisement

ಅಯೋಧ್ಯೆ ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಬಜ್ಮಿ ಸಿದ್ಧಿಕಿ  ಮತ್ತು 6 ಮಂದಿ ಬೆಂಬಲಿಗರ ವಿರುದ್ಧ ಮನೆಗೆ ನುಗ್ಗಿ ಗ್ಯಾಂಗ್‌ ರೇಪ್‌ ನಡೆಸಿರುವ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಈಗಾಗಲೇ 5 ಮಂದಿಯನ್ನು ವಶಕ್ಕೆ ಪಡೆದಿದ್ದು ಬಜ್ಮಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. 

ಇದು ನನ್ನ ವಿರುದ್ಧವಿರೋಧ ಪಕ್ಷಗಳು ನಡೆಸಿರುವ ಸಂಚು ಎಂದು ಬಜ್ಮಿ ಹೇಳಿದ್ದಾರೆ. ಬಜ್ಮಿ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next