Advertisement

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

01:48 AM May 05, 2024 | Team Udayavani |

ಪಶ್ಚಿಮ ಬಂಗಾಲ: ಸಂದೇಶ್‌ಖಾಲಿ ಪ್ರಕರಣಕ್ಕೆ ಸಂಬಂಧಿ ಸಿದಂತೆ ಟಿಎಂಸಿ ಜಾಲತಾಣಗಳಲ್ಲಿ ವೀಡಿ ಯೋವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಒಟ್ಟಾರೆ ಘಟನೆಗೆ ವಿಪಕ್ಷ ನಾಯಕ ಸುವೇಂದು ಅಧಿ ಕಾರಿಯೇ ರೂವಾರಿ ಎಂದು ಬಿಜೆಪಿಯ ಸ್ಥಳೀಯ ನಾಯಕರೊಬ್ಬರು ಹೇಳಿದ್ದಾರೆ ಎಂಬ ಅಂಶ ದಾಖಲಾಗಿದೆ.

Advertisement

ಈ ಕುರಿತು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ರ್ಯಾಲಿಯಲ್ಲಿ ಮಾತನಾಡಿ, ಸಂದೇಶ್‌ಖಾಲಿ ಇಡೀ ಪ್ರಕರಣ ಬಿಜೆಪಿಯ ಕುತಂತ್ರವಾಗಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಏಕೆ ಮೌನವಹಿಸಿದ್ದಾರೆ? ಎಂದು ಪ್ರಶ್ನಿಸಿದರು. “ಸಂದೇ ಶ್‌ಖಾಲಿ ಅತ್ಯಾಚಾರ ಪ್ರಕರಣವು ಬಿಜೆಪಿಯ ಪೂರ್ವನಿಯೋಜಿತ ಕೃತ್ಯವಾಗಿದೆ. ಈಗ ಸತ್ಯ ಹೊರಬಂದಿದ್ದು, ಮೊದಲಿನಿಂದಲೂ ಈ ಅಂಶವನ್ನೇ ಪ್ರಸ್ತಾವಿಸುತ್ತಿದ್ದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next