ಲಕ್ನೋ : ಮುಂದಿನ ವರ್ಷದ ವಿಧಾನಸಭಾ ಚುನಾವಣೆಯತ್ತ ಗಮನ ಹರಿಸುವುದಕ್ಕಾಗಿ ತಮ್ಮ ಪಕ್ಷವು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಮಾಯಾವತಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಯಾವತಿ, ಮುಂದಿನ ವರ್ಷ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸರ್ಕಾರ ರಚಿಸಬೇಕೆಂದು ಜನರು ಬಯಸಿದ್ದಾರೆ. ಉತ್ತರ ಪ್ರದೇಶವನ್ನು “ಉಳಿಸಬೇಕು” ಎಂಬ ಘೋಷಣೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಗಂಗೆಯಲ್ಲಿ ಕೋವಿಡ್ ಮೃತ ದೇಹಗಳನ್ನು ಎಸೆದಿದ್ದು, ‘ಅತ್ಯಂತ ಗಂಭೀರ ಸಮಸ್ಯೆ’ : ಸುಪ್ರೀಂ
ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವ ಬದಲಾಗಿ, ಪಕ್ಷವನ್ನು ಬಲಪಡಿಸುವ ಮತ್ತು ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡಲು ಪಕ್ಷ ನಿರ್ಧರಿಸಿದೆ. ಇನ್ನು, ಜಿಲ್ಲಾ ಪಂಚಾಯತ್ ಅಧ್ದಯಕ್ಷರ ಚುನಾವಣೆ ನ್ಯಾಯಯುತವಾಗಿ ನಡೆಸುತ್ತಿದ್ದರೇ ತಮ್ಮ ಪಕ್ಷ ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗುತ್ತಿತ್ತು. ಅಲ್ಲಿ ಎಲ್ಲವೂ ನ್ಯಾಯಕ್ಕಿಂತ ಹೆಚ್ಚಾಗಿ ಅನ್ಯಾಯವೇ ಆಗುತ್ತದೆ. ನಾವು ವಿಧಾನ ಸಭಾ ಚುನಾವಣೆಯ ಬಗ್ಗ್ಎ ಹೆಚ್ಚುಯ ಗಮನ ನೀಡಲಿದ್ದೇವೆ ಎಂದು ಅವರು ಅಭಿಪ್ರಾಯ ಪಟ್ಟಿದ್ಧಾರೆ.
ಇನ್ನು, ಮಾಯಾವತಿ ಹೇಳೀಕೆಗಯು ಉತ್ತರ ಪ್ರದೇಶ ಕಾಂಗ್ರೆಸ್ ನಿಂದ ಟೀಕೆಗೆ ಒಳಗಾಗಿದ್ದು, ಈ ಕುರಿತಾಗಿ ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಹಿಂದಿಯಲ್ಲಿ ಟ್ವೀಟ್ ಮಾಡಿದ ಯುಪಿ ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್, “ಜಿಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂಬ ಮಾಯಾವತಿ ಹೇಳಿಕೆಯು ಬಿಜೆಪಿಗೆ ಸಹಾಯ ಮಾಡಬೇಕಾದಾಗಲೆಲ್ಲಾ ಅವರು ಚುನಾವಣೆಗೆ ಸ್ಪರ್ಧಿಸುವುದರಿಂದ ಹಿಂದೆ ಸರಿಯುತ್ತಾರೆ” ಎಂದಿದ್ದಾರೆ.
ಜುಲೈ 3 ರಂದು ಉತ್ತರಪ್ರದೇಶದ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗಾಗಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಾದ್ಯಂತ ಇತ್ತೀಚೆಗೆ ಆಯ್ಕೆಯಾದ ಸುಮಾರು 3,000 ಜಿಲ್ಲಾ ಪಂಚಾಯತ್ ಸದಸ್ಯರು ಈ ಹುದ್ದೆಗಳಿಗೆ ಮತ ಚಲಾಯಿಸಲಿದ್ದಾರೆ.
ಇದನ್ನೂ ಓದಿ : ಎಂಟು ಬಾರಿ ಶಾಸಕನಾಗಿರುವ ನನಗೂ ಸಿ.ಎಂ. ಆಗುವ ಅರ್ಹತೆ ಇದೆ : ಸಚಿವ ಉಮೇಶ್ ಕತ್ತಿ