Advertisement

ಬಿಎಸ್ಸೆನ್ನೆಲ್‌ ಉಳಿವಿಗೆ ಹೋರಾಟ ಅಗತ್ಯ

04:42 PM Sep 11, 2017 | Team Udayavani |

ಲಿಂಗಸುಗೂರು: ಕೇಂದ್ರ ಸರಕಾರ ಹಾಗೂ ಹಿರಿಯ ಅಧಿಕಾರಿಗಳು ಬಿಎಸ್‌ಎನ್‌ಎಲ್‌ ಮುಚ್ಚುವ ಹುನ್ನಾರ ನಡೆಸುತ್ತಿದ್ದು, ಬಿಎಸ್ಸೆನ್ನೆಲ್‌ ಉಳಿವಿಗೆ ಹೋರಾಟ ಅಗತ್ಯವಾಗಿದೆ ಎಂದು ಬಿಎಸ್‌ಎನ್‌ಎಲ್‌ ನೌಕರರ
ಸಂಘದ ಕರ್ನಾಟಕ ವಲಯ ಕಾರ್ಯದರ್ಶಿ ಸಿ.ಕೆ. ಗುಂಡಣ್ಣ ಹೇಳಿದರು. 

Advertisement

ಪಟ್ಟಣದ ಐಎಂಎ ಸಭಾಂಗಣದಲ್ಲಿ ಬಿಎಸ್‌ಎನ್‌ ಎಲ್‌ ನೌಕರರ ಸಂಘ ರವಿವಾರ ಆಯೋಜಿಸಿದ್ದ 6ನೇ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, 2000ರಿಂದ ಈಚೆಗೆ ಬಿಎಸ್‌ಎನ್‌ಎಲ್‌ ಕಾರ್ಯಾರಂಭ ಮಾಡಲು ಯೋಜಿಸಿತ್ತು. ಆದರೆ ಇದಕ್ಕೂ ಮುಂಚೆ ಕೆಲ ಖಾಸಗಿ ಕಂಪನಿಗಳಿಗೆ ಕಾರ್ಯಾರಂಭ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದ್ದರಿಂದ ಬಿಎಸ್ಸೆನ್ನೆಲ್‌ ನಷ್ಟ ಅನುಭವಿಸುವಂತಾಗಿದೆ. ಕೇಂದ್ರ ಸರಕಾರ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಖಾಸಗಿ ಕಂಪನಿಗಳ ವ್ಯಾಮೋಹದಿಂದಾಗಿ ನಿಗಮದಲ್ಲಿ ಬೇಕಂತಲೇ ಕೆಲ ದೋಷಗಳನ್ನು ಹುಟ್ಟುಹಾಕಿ, ಬೇರೆ ಕಂಪನಿಯತ್ತ ಗ್ರಾಹಕರು ಗಮನಹರಿಸುವ ಕೆಲಸ ಮಾಡುತ್ತಿದ್ದಾರೆ. ಸರಕಾರ ನಿಗಮಕ್ಕೆ ಟೆಲಿಫೋನ್‌, ಬ್ರಾಡ್‌ಬ್ಯಾಂಡ್‌ ಮೋಡೆಮ್‌, ಕೇಬಲ್‌ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಪೂರೈಸುತ್ತಿಲ್ಲ. ಅಲ್ಲದೇ ಆದಾಯ ಬರುತ್ತಿಲ್ಲ ಎಂದು ನೌಕರರ ಮೇಲೆ ಹರಿಹಾಯುವುದು ಸರಿಯಲ್ಲ. ನಿಗಮ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ ಎಂದರು. 

ರಾಯಚೂರಿನಲ್ಲಿ ನಿಗಮದ ನೌಕರರಿಗಾಗಿ 35 ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಇವು ಶಿಥಿಲಾವಸ್ಥೆಯಲ್ಲಿದ್ದು, ಹಂದಿಗಳ ತಾಣವಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ನೀವೇ ದುರಸ್ತಿ ಮಾಡಿಸಿಕೊಳ್ಳಿ ಎಂದು ಬೇಜವಾಬ್ದಾರಿಯಿಂದ ಜಾರಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ನಿಗಮದ ನೌಕರರನ್ನು ಕೀಳುಮಟ್ಟದಿಂದ ಸರಕಾರ ಕಾಣುತ್ತಿದೆ ಎಂದು ಆರೋಪಿಸಿದರು.

ಟೆಲಿಕಾಂ ಜಿಲ್ಲೆಯ ಪ್ರಧಾನ ವ್ಯವಸ್ಥಾಪಕ ಜೆ.ನಿವಾಸರಾವ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೂಪನಗೌಡ ಕರಡಕಲ್‌, ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಎಸ್‌.ಆಲೂರು, ಹಿರಿಯ ಮುಖಂಡ ಎನ್‌.ಪಿ. ಜಹಾಗೀರದಾರ, ಬಿ.ರಾಮಚಂದ್ರ, ಲಾಲಪ್ಪ, ಕೆ.ಗುರುರಾಜ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ, ಜಿಲ್ಲಾ ಕಾರ್ಯದರ್ಶಿ ಡಿ.ಬಿ.ಸೋಮನಮರಡಿ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next