ನವ ದೆಹಲಿ : ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿ ಎಸ್ ಎನ್ ಎಲ್) ಟೆಲಿಕಾಮ್ ನೆಟ್ ವರ್ಕ್ ನಲ್ಲಿ ಆಗುತ್ತಿರುವ ಪೈಪೋಟಿಯ ನಡುವೆ ಗ್ರಾಹಕ ಸ್ನೇಹಿ ಮೂರು ಪ್ರಿಪೇಯ್ಡ್ ಪ್ಲ್ಯಾನ್ ನನ್ನು ನೀಡುತ್ತಿದೆ. 447 ರೂ, 94 ರೂ. ಮತ್ತು 75 ರೂ.ವಿನ ಪ್ಲಾನ್ ಪರಿಚಯಿಸಿದೆ.
ಬಿ ಎಸ್ ಎನ್ ಎಲ್ ನಿಡುತ್ತಿರುವ ಪ್ರೀಪೇಯ್ಡ್ ಯೋಜನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
447 ರೂ. ಪ್ರಿಪೇಯ್ಡ್ ಪ್ಲ್ಯಾನ್ : ಈ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ 100ಜಿಬಿ ಡೇಟಾ ಆಫರ್ ನೀಡುತ್ತಿದೆ. ಆದರೆ ಡೇಟಾ ಲಿಮಿಟ್ ಇರುವುದಿಲ್ಲ. ಅದರ ಜತೆಗೆ ದಿನಕ್ಕೆ 100 ಎಸ್ ಎಮ್ ಎಸ್ ನೀಡುತ್ತಿದೆ. ಮಾತ್ರವಲ್ಲದೇ, ಅನಿಯಮಿತ ಕರೆ ಸೌಲಭ್ಯವು ಇದರಲ್ಲಿದೆ. ಈ ಪ್ಲ್ಯಾನ್ ಮೂಲಕ ಇರೋಸ್ ಚಂದಾದಾರಿಕೆ ನೀಡುತ್ತಿದೆ. 60 ದಿನಗಳ ವ್ಯಾಲಿಡಿಟಿ ಈ ಪ್ಲ್ಯಾನ್ ಹೊಂದಿರಲಿದೆ.
ಇದನ್ನೂ ಓದಿ :ಕೊಣಜೆ : ಲಂಚ ಸ್ವೀಕಾರ ಆರೋಪ ಸಾಬೀತು : ಪ್ರೊ.ಡಾ. ಅನಿತಾ ರವಿಶಂಕರ್ ಗೆ ಐದು ವರ್ಷ ಶಿಕ್ಷೆ
94 ರೂ. ಪ್ರಿಪೇಯ್ಡ್ ಪ್ಲ್ಯಾನ್ : ಬಿ ಎಸ್ ಎನ್ ಎಲ್ ನೀಡುತ್ತಿರುವ ಕಡಿಮೆ ಬೆಲೆಯ ಪ್ಲ್ಯಾನ್ ಇದಾಗಿದ್ದು, ಗ್ರಾಹಕರಿಗಾಗಿ ಈ ಪ್ಲ್ಯಾನ್ ಮೂಲಕ 3ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಅಷ್ಟಲ್ಲದೇ, 100 ನಿಮಿಷಗಳ ಕಾಲ್ ನೀಡುತ್ತದೆ. 90 ದಿನಗಳ ಕಾಲ ಈ ಆಫರ್ ಬಳಸಬಹುದಾಗಿದೆ. ಕರೆಯ ಮಿತಿ ಮೀರಿದ ನಂತರ ಗ್ರಾಹಕರು ನಿಮಿಷಕ್ಕೆ 30 ಪೈಸೆ ಪಾವತಿಸಬೇಕಿದೆ. ಅದರ ಜತೆಗೆ ಬಿ ಎಸ್ ಎನ್ ಎಲ್ ಟ್ಯೂನ್ ಚಂದಾದಾರಿಕೆ ಪಡೆಯಬಹುದಾಗಿದೆ. ಬಿ ಎಸ್ ಎನ್ ಎಲ್ ನೀಡುತ್ತಿರುವ ಈ ಪ್ಲ್ಯಾನ್ ನಲ್ಲಿ 60 ದಿನಗಳ ವ್ಯಾಲಿಡಿಟಿ ಇರಲಿದೆ.
75 ರೂ. ಪ್ಲ್ಯಾನ್ : ಈ ಪ್ರೀ ಪೇಯ್ಡ್ ನಲ್ಲಿ ಗ್ರಾಹಕರಿಗೆ 2ಜಿಬಿ ಡೇಟಾ ಸಿಗಲಿದ್ದು, 100 ನಿಮಿಷಗಳ ವಾಯ್ಸ್ ಕಾಲ್ ಸೌಲಭ್ಯ ಕೂಡ ನೀಡುತ್ತಿದೆ. ಈ ಪ್ಲ್ಯಾನ್ ನ ಮೂಲಕ 60 ದಿನಗಳ ವ್ಯಾಲಿಡಿಟಿ ಜತೆಗೆ ಬಿ ಎಸ್ ಎನ್ ಎಲ್ ಟ್ಯೂನ್ ಚಂದಾದಾರರಾಗಬಹುದಾಗಿದೆ.
699 ರೂ. ಪ್ರಿಪೇಯ್ಡ್ ಪ್ಲ್ಯಾನ್ : ಅನಿಯಮಿಕರೆ ಸೇರಿದಂತೆ, ಪ್ರತಿದಿನ 0.5ಜಿಬಿ ಡೇಟಾ ಒದಗಿಸುತ್ತಿದೆ. ಈ ಪ್ಲಾನ್ 100 ಎಸ್ ಎಮ್ ಎಸ್ ನನ್ನು ನೀಡುತ್ತಿದೆ. ಒಂದು ಬಾರಿ ಡೇಟಾ ಮುಗಿದ ನಂತರ 80 ಕೆಬಿಪಿಎಸ್ ನಲ್ಲಿ ನೆಟ್ ವರ್ಕ್ ಸ್ಪೀಡ್ ಸಿಗಲಿದೆ. ಈ ಪ್ಲ್ಯಾನ್ 180 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಇದನ್ನೂ ಓದಿ : ನಾಗರಿಕ ವಿಮಾನಯಾನ ಸಚಿವರಾಗಿ ಜ್ಯೋತಿರಾದಿತ್ಯ ಸಿಂದಿಯಾ ಅಧಿಕಾರ ಸ್ವೀಕಾರ