Advertisement
ಪಟ್ಟಣದ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಬಹುತೇಕ ವ್ಯಾಪಾರಸ್ಥರು ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಬಳಕೆ ಮಾಡುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಏಕಾ ಏಕಿ ನೆಟ್‌ವರ್ಕ್ ಕೈಕೊಟ್ಟಿದ್ದು ವ್ಯಾಪಾರಸ್ಥರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಈ ಟೆಂಡರ್ ಮೂಲಕ ಮೆಣಸಿನಕಾಯಿಗೆ ಧಾರಣೆ ನಿಗದಿ ಮಾಡಲು ನೆಟ್ ವರ್ಕ್ ಅತ್ಯವಶ್ಯಕವಾಗಿದ್ದು, ಮೊದಲೇ ಗುರುವಾರ ಅಕಾಲಿಕ ಮಳೆಯಿಂದ ತಡವಾಗಿದ್ದ ಟೆಂಡರ್ ಪ್ರಕ್ರಿಯೆಗೆ, ನೆಟ್ ವರ್ಕ್ ಸಮಸ್ಯೆ ಗಾಯದ ಮೇಲೆ ಬರೆಎಳೆದಂತೆ ಮಾಡಿತು. ಇದರಿಂದಾಗಿ ಹಲವು ವ್ಯಾಪಾರಸ್ಥರು ಬಿಎಸ್‌ಎನ್‌ಎಲ್ ಕಚೇರಿ ಬಳಿ ತೆರಳಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿದ್ದ ದೃಶ್ಯಗಳು ಕಂಡುಬಂದವು.