Advertisement

2020-21ರಲ್ಲಿ  ಬಿ ಎಸ್ ಎನ್ ಎಲ್ ನ ಒಟ್ಟು ನಷ್ಟ 7,441 ಕೋಟಿ ರೂ. ಗೆ ಇಳಿಮುಖ

10:49 AM Jul 19, 2021 | Team Udayavani |

ನವ ದೆಹಲಿ : ಸರ್ಕಾರಿ ಟೆಲಿಕಾಂ ನೆಟ್ ವರ್ಕ್ ಆದ ಬಿ ಎಸ್ ಎನ್ ಎಲ್ ನ 2020-21 ರಲ್ಲಿ ಒಟ್ಟು ನಷ್ಟವು  7,441 ಕೋಟಿ ರೂ. ಗೆ ಕುಸಿತಗೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಕಳೆದ ವಾರ್ಷಿಕ ಸಾಲಿನಲ್ಲಿ ಅಂದರೇ, 2019-20ರ ವರ್ಷದಲ್ಲಿ ಒಟ್ಟು 15,499 ಕೋಟಿ ನಷ್ಟ ಅನುಭವಿಸಿತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಆಡಿಯೋ ಯಾರು ವೈರಲ್ ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು : ಈಶ್ವರಪ್ಪ

ಇನ್ನು, ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ ನ (ಬಿ ಎಸ್‌ ಎನ್‌ ಎಲ್‌) ಸುಮಾರು 78,569 ನೌಕರರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಈ ಕಾರಣದಿಂದಾಗಿ ನೌಕರರ ವೇತನಕ್ಕಾಗಿ ವೆಚ್ಚ ಮಾಡುವ ವೇತನ ವೆಚ್ಚಗಳು ಕಡಿಮೆಯಾಗಿರುವುದರಿಂದ ಒಟ್ಟು ನಷ್ಟ ಇಳಿಕೆಯಾಜಗಿದೆ ಎಂದಿದ್ದಾರೆ.

ಸಂಸ್ಥೆಯ ನಷ್ಟ ಕಡಿಮೆ ಆಗಲು ಇದು ಕೂಡ ಪ್ರಮುಖ ಕಾರಣ ಎಂದು ಅವರು ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ : “ಪೆಗಾಸಸ್” ಬಳಸಿ ಭಾರತದ ಪತ್ರಕರ್ತರು, ರಾಜಕಾರಣಿಗಳ ಫೋನ್ ಮೇಲೆ ನಿಗಾ!

Advertisement

Udayavani is now on Telegram. Click here to join our channel and stay updated with the latest news.

Next